ಕಾಶ್ಮೀ ವಿಶ್ವಾನಾಥ ದೇವಸ್ಥಾನದ ಆವರಣದಲ್ಲಿನ ಆದಿ ವಿಶ್ವೇಶ್ವರ ಮಂದಿರ ಒಡೆದು ನಿರ್ಮಿಸಿರುವ ಜ್ಞಾನವ್ಯಾಪಿ ಮಸೀದಿಯನ್ನು ತೆರವು ಮಾಡಲು ಕಳೆದ 32 ವರ್ಷಗಳಿಂದ ಕಾನೂನು ಹೋರಾಟ ಮಾಡಿದ ಅರ್ಜಿದಾರ ಹರಿಹರ ಪಾಂಡೆ ನಿಧನರಾಗಿದ್ದಾರೆ.
ಲಖನೌ(ಡಿ.12) ಕಾಶೀ ವಿಶ್ವನಾಥ ಮಂದಿರಕ್ಕೆ ತಾಗಿಕೊಂಡೆ ಇರುವ ಜ್ಞಾನವ್ಯಾಪಿ ಮಸೀದಿ ಪ್ರಕರಣ ಇತ್ತೀಚೆಗೆ ಭಾರಿ ಕೋಲಾಹಲ ಸೃಷ್ಟಿಸಿದೆ. ರಾಷ್ಟ್ರೀಯ ಪುರಾತತ್ವ ಇಲಾಖೆ ಈಗಾಗಲೇ ಸಮೀಕ್ಷೆ ನಡೆಸಿದೆ. ವರದಿ ಸಲ್ಲಿಕೆಗೆ ಕಾಲಾವಕಾಶ ಕೇಳಿದೆ. ಇತ್ತೀಚೆಗೆ ಐವರು ಮಹಿಳೆಯರು ಪೂಜೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯಿಂದ ಜ್ಞಾನವ್ಯಾಪಿ ಮಸೀದಿ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಅರ್ಜಿಯಿಂದ ಭಾರಿ ವಿರೋಧದ ನಡುವೆಯೂ ಕೋರ್ಟ್ ಆದೇಶದಂತೆ ಸಮೀಕ್ಷೆ ನಡೆಸಲಾಗಿದೆ. ಆದರೆ ಇದಕ್ಕೂ ಹಿಂದೆಯೇ ಗ್ಯಾನವಾಪಿ ಮಸೀದಿ ವಿರುದ್ದ ಕಾನೂನು ಹೋರಾಟ ನಡೆಯುತ್ತಲೇ ಬಂದಿದೆ. ಈ ಮಸೀದಿ ತೆರವುಗೊಳಿಸಿ ಇಲ್ಲಿ ಮೊದಲಿದ್ದ ಆದಿ ವಿಶ್ವೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಮಾಡುವಂತೆ 1991ರಲ್ಲಿ ಅರ್ಜಿ ಸಲ್ಲಿಸಿ ಕಳೆದ 32 ವರ್ಷದಿಂದ ಸತತ ಹೋರಾಟ ನಡೆಸಿದೆ ಅರ್ಜಿದಾರ ಹರಿಹರ ಪಾಂಡೆ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 77 ವರ್ಷದ ಹರಿಹರ ಪಾಂಡೆ ಬಿಹೆಚ್‌ಯು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಾಶೀ ವಿಶ್ವನಾಥ ಮಂದಿರಕ್ಕೆ ತಾಗಿಕೊಂಡಿದ್ದ ಆದಿ ವಿಶ್ವೇಶ್ವರ ದೇವಸ್ಥಾನ ಒಡೆದೆ ಜ್ಞಾನವ್ಯಾಪಿ ಮಂದಿರ ಕಟ್ಟಲಾಗಿದೆ. ಆಯೋಧ್ಯೆ ಶ್ರೀ ರಾಮ ಮಂದಿರ, ಮಥುರಾ ಶ್ರೀಕೃಷ್ಣ ಮಂದಿರ ಹಾಗೂ ಕಾಶ್ಮೀ ವಿಶ್ವನಾಥ ಮಂದಿರ ಈ ದೇಶದ ಆಸ್ಮಿತೆಯಾಗಿದೆ. ಲಕ್ಷಕ್ಕೂ ಅಧಿಕ ಮಂದಿರಗಳು ಒಡೆಯಲಾಗಿದೆ, ಕೆಲ ಮಂದಿರವನ್ನೇ ಮಸೀದಿಯಾಗಿ ಪರಿವರ್ತಿಸಲಾಗಿದೆ. ಆದರೆ ಹಿಂದೂಗಳ ಮುಖ್ಯ ಶ್ರದ್ಧ ಹಾಗೂ ಭಕ್ತಿಯ ಕೇಂದ್ರವಾಗಿರುವ ಹಾಗೂ ಹಿಂದೂಗಳ ಮೂಲ ಆಗಿರುವ ಈ ಧಾರ್ಮಿಕ ಕೇಂದ್ರದಲ್ಲಿ ಮಸೀದಿ ತೆರವು ಮಾಡಿ, ದೇವಸ್ಥಾನ ಪುನರ್ ನಿರ್ಮಾಣ ಮಾಡಬೇಕು ಎಂದು ಕೋರಿ ಹರಿಹರ ಪಾಂಡೆ 1991ರಲ್ಲಿ ಕಾನೂನು ಹೋರಾಟ ಆರಂಭಿಸಿದ್ದರು.
ಗ್ಯಾನವಾಪಿ ಮಸೀದಿಯಲ್ಲಿ ಮೂರ್ತಿಗಳ ಅವಶೇಷ ಪತ್ತೆ, ಸರ್ವೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!
ಪ್ರಮುಖವಾಗಿ ಜ್ಞಾನವ್ಯಾಪಿ ಮಸೀದಿಯನ್ನು ತೆರವು ಮಾಡಿ ಮೂಲ ದೇವಸ್ಥಾನ ಆದಿ ವಿಶ್ವೇಶ್ವರ ನಿರ್ಮಾಣ ಮಾಡಲು ಅವಕಾಶ ನೀಡಬೇಕು. ಕಾಶೀ ವಿಶ್ವನಾಥ ಮಂದಿರದ ಭಾಗವಾಗಿರುವ ಈ ಮಂದಿರದಲ್ಲಿ ಪೂಜೆಗಳು ಮತ್ತೆ ಆರಂಭಗೊಳ್ಳಬೇಕು ಎಂದು ಹರಿಹರ ಪಾಂಡೆ (610/1991) ಅರ್ಜಿ ಸಲ್ಲಿಸಿ ಹೋರಾಟ ಆರಂಭಿಸಿದ್ದರು. ಕಾಶಿ ಜ್ಞಾನವ್ಯಾಪಿ ಮುಕ್ತಿ ಆಂದೋಲನ ಆರಂಭಿಸಿದ ಸದಸ್ಯರಾಗಿರುವ ಹರಿಹರ ಪಾಂಡೆ 32 ವರ್ಷಗಳಿಂದ ಸತತ ಹೋರಾಟ ನಡೆಸಿದ್ದಾರೆ.
ಗ್ಯಾನವಾಪಿ ಮಸೀದಿಯಲ್ಲಿ ದೇಗುಲದ ಕುರುಹುಗಳು ಇವೆಯೇ ಎಂಬುದರ ಪತ್ತೆಗಾಗಿ ಸಮೀಕ್ಷೆ ನಡೆಸುತ್ತಿರುವ ಪುರಾತತ್ವ ಇಲಾಖೆ, ಈ ಕುರಿತ ವರದಿ ಸಲ್ಲಿಸಲು ಇನ್ನೂ15 ದಿನ ಸಮಯ ಕೋರಿ ವಾರಾಣಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಸಮೀಕ್ಷೆ ಮುಗಿದಿದ್ದರೂ, ವರದಿ ತಯಾರಿಗೆ ಸಮಯ ಹಿಡಿಯುತ್ತಿದೆ. ಹೀಗಾಗಿ ವರದಿ ಸಲ್ಲಿಕೆ ಅವಧಿಯನ್ನು 15 ದಿನ ವಿಸ್ತರಿಸುವಂತೆ ಇಲಾಖೆ ಮನವಿ ಮಾಡಿತ್ತು. ಇಲ್ಲಿಯವರೆಗೆ ಒಟ್ಟು ನಾಲ್ಕು ಬಾರಿ ಅವಧಿ ವಿಸ್ತರಣೆ ಮಾಡಲಾಗಿದೆ. ಇದೀಗ ಪುರಾತತ್ವ ಇಲಾಖೆ ಅಧಿಕ್ಷಕ ಅವಿನಾಶ್ ಮೊಹಂತಿ ಆರೋಗ್ಯಯಲ್ಲಿ ಏರುಪೇರು ಹಿನ್ನಲೆಯಲ್ಲಿ ವರದಿ ಸಲ್ಲಿಕೆಗೆ ಕಾಲಾವಕಾಶ ಕೋರಿದೆ.
ಜ್ಞಾನವಾಪಿ ಕ್ಯಾಂಪಸ್ ಸಮೀಕ್ಷೆ; ಈ ಪ್ರಮುಖ ವಿಷಯಗಳ ಬಗ್ಗೆ ನಿಮಗೆಷ್ಟು ಗೊತ್ತು?