ಹಸುಗಳಿದ್ದ ಶೆಡ್‌ಗೆ ಬಂದ ಸಿಂಹಗಳ ಜೊತೆ ಸಾಕುನಾಯಿಗಳ ಕಾದಾಟ: ವೀಡಿಯೋ ಸಖತ್ ವೈರಲ್

By Anusha Kb  |  First Published Aug 14, 2024, 1:43 PM IST

ಸಾಕುನಾಯಿಗಳೆರಡು ಸೇರಿ ಮನೆ ಮುಂದೆ ಬಂದ ಎರಡು ಸಿಂಹಗಳನ್ನು ಬೊಗಳಿ ದೂರ ಓಡಿಸಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನಾಯಿಗಳ ಶೌರ್ಯಕ್ಕೆ ಜನ ಶಹಭಾಷ್ ಅಂತಿದ್ದಾರೆ.


ನವದೆಹಲಿ: ಸಾಕುನಾಯಿಗಳೆರಡು ಸೇರಿ ಮನೆ ಮುಂದೆ ಬಂದ ಎರಡು ಸಿಂಹಗಳನ್ನು ಬೊಗಳಿ ದೂರ ಓಡಿಸಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನಾಯಿಗಳ ಶೌರ್ಯಕ್ಕೆ ಜನ ಶಹಭಾಷ್ ಅಂತಿದ್ದಾರೆ. ಗುಜರಾತ್‌ನ ಅಮ್ರೇಲಿಯಲ್ಲಿರುವ ಸಾವರ್‌ಕುಂಡ್ಲ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶವೂ ಗುಜರಾತ್‌ ಪ್ರಸಿದ್ಧ ಅಭಯಾರಣ್ಯವಾಗಿರುವ ಗಿರ್ ನ್ಯಾಷನಲ್ ಪಾರ್ಕ್‌ನಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿದೆ. ಈ ಗಿರ್ ರಾಷ್ಟ್ರೀಯ ಉದ್ಯಾನವನವೂ ಏಷ್ಯಾಟಿಕ್ ಸಿಂಹಗಳ ಕಾರಣಕ್ಕೆ ಹೆಸರುವಾಸಿಯಾಗಿದೆ.

ವೈರಲ್ ಆಗಿರುವ ವೀಡಿಯೋದಲ್ಲಿ ಎರಡು ಸಿಂಹಗಳು ಹಸುಗಳಿರುವ ಹಟ್ಟಿಯ ಗೇಟ್ ಸಮೀಪ ಬಂದಿದ್ದು, ಇದನ್ನು ಗಮನಿಸಿದ ಸಾಕುನಾಯಿಗಳು ಜೋರಾಗಿ ಬೊಬ್ಬೆ ಹೊಡೆದು ಅವುಗಳನ್ನು ಅಲ್ಲಿಂದ ಓಡಿಸಿದೆ. ಗೇಟ್‌ನ ಹೊರಗೆ ಎರಡು ಸಿಂಹಗಳು ಮುಗಿ ಬೀಳಲು ನೋಡುತ್ತಿದ್ದರೆ, ಗೇಟ್‌ನ ಒಳಭಾಗದಲ್ಲಿ ನಾಯಿಗಳು ಜೋರಾಗಿ ಬೊಬ್ಬೆ ಹೊಡೆದು ಗೇಟಿನ ಮೇಲೆ ಎಗರಾಡಿವೆ. ನಾಯಿಗಳ ಮೊರೆತದಿಂದಾಗಿ ಸಿಂಹಗಳು ಕೆಲ ಕ್ಷಣದಲ್ಲೇ ಅಲ್ಲಿಂದ ದೂರ ಹೋಗಿವೆ. ನಾಯಿಗಳು ಹಾಗೂ ಸಿಂಹಗಳ ಈ ಹಾರಾಟಕ್ಕೆ ಹಾಕಿದ್ದ ಗೇಟ್‌ ಕೂಡ ಒಮ್ಮೆ ತೆರೆದುಕೊಳ್ಳುತ್ತದೆ. ಅಷ್ಟರಲ್ಲಿ ಸಿಂಹಗಳು ಅಲ್ಲಿಂದ ಹೊರ ಹೋಗಿವೆ. ಹೀಗಾಗಿ ನಾಯಿಗಳಿಗಾಗಿ ಸಿಂಹಗಳಿಗಾಗಲಿ ಯಾವುದೇ ಜೀವಹಾನಿ ಉಂಟಾಗಿಲ್ಲ,  ಇದೇ ಸಮಯದಲ್ಲಿ ಬಹುಶಃ ಮನೆ ಮಾಲೀಕ ಗೇಟ್‌ನ ಬಳಿ ಬಂದಿದ್ದು, ಗೇಟ್‌ನ್ನು ವಾಪಸ್ ಹಾಕಿ ಬಂದ್ ಮಾಡುತ್ತಾನೆ. ಈ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. 

Tap to resize

Latest Videos

.ಮೇಲೆರಗಿದ ಸಿಂಹ: ಪ್ರಾಣಕ್ಕಾಗಿ ಹಸುವಿನ ಕಾದಾಟ, ರೈತನ ಸಾಥ್: ವೀಡಿಯೋ ವೈರಲ್

ಗುಜರಾತ್ ವಿಶ್ವ ಸಿಂಹಗಳ ದಿನಾಚರಣೆ ನಡೆಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಈ ಸಿಂಹಗಳು ಸಮೀಪದ ಮೀಸಲು ಅರಣ್ಯದಿಂದ ಇಲ್ಲಿಗೆ ಬಂದಿರುವ ಸಾಧ್ಯತೆ ಇದೆ. ಆದರೆ ಅದಕ್ಕೆ ಸಂಬಂಧಿಸಿಂದತೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಲಾಗಿಲ್ಲ, ಈ ಪ್ರದೇಶದಲ್ಲಿ ಸಿಂಹಗಳು ಸಾಮಾನ್ಯ ಎನಿಸಿದ್ದು, ಜನರು ಕೂಡ ಸಿಂಹಗಳ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. 

WorldLionDay: ಗಿರ್‌ ಅರಣ್ಯದಲ್ಲಿ ರಾಜ ರಾಣಿ ಮಕ್ಕಳು... ಅಪರೂಪದ ದೃಶ್ಯ ಸೆರೆ

"When Dogs Encounter Lions 🦁🐕

Gujarat: A viral video from Savarkundla, Amreli, shows an intense battle between dogs and lions. pic.twitter.com/ArH0Lx3sD4

— DW Samachar (@dwsamachar)

 

click me!