ಮತಾಂತರಗೊಂಡರೆ ಜಾತಿ ಆಧಾರಿತ ಮೀಸಲಾತಿ, ಸೌಲಭ್ಯ ಕಟ್, ಹೈಕೋರ್ಟ್ ಮಹತ್ವದ ಆದೇಶ!

By Suvarna NewsFirst Published Dec 3, 2022, 8:32 PM IST
Highlights

ಮತಾಂತರ ಕುರಿತು ದೇಶದಲ್ಲಿ ಭಾರಿ ಚರ್ಚೆ, ವಾದ ವಿವಾದಗಳು ನಡೆಯುತ್ತಿದೆ. ಮತಾಂತರ ನಿಷೇಧ ಕಾಯ್ದೆಗೆ ಪರ ವಿರೋಧಗಳು ಇವೆ. ಇದರ ಜೊತೆಗೆ ಮತಾಂತರಗೊಂಡವರಿಗೆ ಹಿಂದಿನ ಧರ್ಮ ಅಥವಾ ಜಾತಿಯಲ್ಲಿ ಪಡೆಯುತ್ತಿದ್ದ ಸೌಲಭ್ಯಗಳನ್ನು ನಿಲ್ಲಿಸಬೇಕು ಅನ್ನೋ ಆಗ್ರಹ ಹಿಂದಿನಿಂದಲೂ ಇದೆ. ಇದೀಗ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. 

ಚೆನ್ನೈ(ಡಿ.03): ಬಲವಂತದ ಮತಾಂತರ ಸಮಸ್ಯೆಯನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಕೇಂದ್ರದ ಅಭಿಪ್ರಾಯವನ್ನೂ ಕೇಳಿದೆ. ಮತಾಂತರ ನಿಷೇಧ ಕಾಯ್ದೆ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಇದಕ್ಕೆ ಪರ ವಿರೋದವೂ ಇದೆ. ಇದರ ಜೊತೆಗೆ ಮತಾಂತರಗೊಂಡ ವ್ಯಕ್ತಿ ಹಳೇ ಧರ್ಮ ಅಥವಾ ಜಾತಿ ಆಧಾರದಲ್ಲಿ ಸಿಗುತ್ತಿರುವ ಸೌಲಭ್ಯಗಳನ್ನು ನಿಲ್ಲಿಸಬೇಕು ಅನ್ನೋ ಆಗ್ರಹ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದೀಗ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ, ಮತಾಂತರಗೊಳ್ಳುವ ಹಲವು ಸಮುದಾಯಕ್ಕೆ ಎಚ್ಚರಿಕೆ ಕರೆಗಂಟೆಯಾಗಿದೆ. ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿ, ಹಿಂದಿನ ಧರ್ಮ ಅಥವಾ ಜಾತಿ ಆಧಾರದಲ್ಲಿ ಪಡೆಯುತ್ತಿದ್ದ ಮೀಸಲಾತಿ ಸೇರಿದಂತೆ ಇತರ ಸೌಲಭ್ಯಗಳು ನೀಡಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಇಷ್ಟೇ ಅಲ್ಲ ಈ ಕುರಿತು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡು ಮೀಸಲಾತಿಗಾಗಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ.

ಹಿಂದುಳಿದ ಸಮುದಾಯದ ಹಿಂದೂ ವ್ಯಕ್ತಿ 2008ರಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದ. 2018ರಲ್ಲಿ ಈತ ತಮಿಳುನಾಡು ಸಿವಿಸ್ ಸರ್ವೀಸ್ ಪರೀಕ್ಷೆ ಬರೆದಿದ್ದಾನೆ. ಆದರೆ ಪರೀಕ್ಷೆಯಲ್ಲಿ ಪಾಸ್ ಆಗಿಲ್ಲ. ಕಾರಣ ಈತನನ್ನು ಸಾಮಾನ್ಯ ವಿಭಾಗ ಎಂದು ಪರಿಗಣಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಇಸ್ಲಾಂಗೆ ಮತಾಂತರಗೊಂಡಿದ್ದ ವ್ಯಕ್ತಿ, ತನ್ನನ್ನು ಹಿಂದುಳಿದ ಸಮುದಾಯದ ಮುಸ್ಲಿಮ್ ವ್ಯಕ್ತಿ ಎಂದು ಪರಿಗಣಿಸಲು ಮನವಿ ಮಾಡಿದ್ದ. ಹಿಂದುಳಿದ ಸಮುದಾಯಕ್ಕೆ ನೀಡಿದ್ದ ಮೀಸಲಾತಿಯಲ್ಲಿ ತನಗೆ ಉದ್ಯೋಗ ನೀಡಬೇಕು ಎಂದು ಕೋರಿದ್ದ.

ಗೆಳತಿ ಮತಾಂತರಕ್ಕೆ ಯತ್ನಿಸಿದ್ದ ಸೂಫಿಯಾನ್‌ಗೆ ಗುಂಡೇಟು..! ಪ್ರೇಯಸಿ ಹತ್ಯೆಗೈದ ಪಾಪಿ ಎನ್‌ಕೌಂಟರ್‌ ಬಳಿಕ ಸೆರೆ

ಈ ಕುರಿತು ವಿಚಾರಣೆ ನಡೆಸಿದ ಜಸ್ಚೀಸ್ ಜಿಆರ್ ಸ್ವಾಮಿನಾಥನ್ ನೇತೃತ್ವದ ಪೀಠ ಈ ಮಹತ್ವದ ಆದೇಶ ನೀಡಿದೆ. ಯಾವುದೇ ಜಾತಿಯಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಂಡರೆ ಮತಾಂತರಗೊಂಡ ಧರ್ಮದಲ್ಲಿ ಸಿಗುವ ಸೌಲಭ್ಯಗಳು, ಸವಲತ್ತುಗಳು ಸಿಗಲಿದೆ. ಆದರೆ ಹಿಂದಿನ ಧರ್ಮದಲ್ಲಿ ಸಿಗುವ ಸೌಲಭ್ಯಗಳು, ಮೀಸಲಾತಿಗಳು ಸಿಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಮತಾಂತರ ಹಕ್ಕು ಒಳಗೊಂಡಿಲ್ಲ
ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಒಂದು ಸಮುದಾಯ ಜನರನ್ನು ಇನ್ನೊಂದು ಸಮುದಾಯಕ್ಕೆ ಮತಾಂತರ ಮಾಡುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಚ್‌ಗೆ ಹೇಳಿದೆ. ಬೆದರಿಕೆ ಹಾಗೂ ಹಣ ಮತ್ತು ಉಡುಗೊರೆ ನೀಡುವ ಮೂಲಕ ಜನರನ್ನು ಒಂದು ಧರ್ಮಕ್ಕೆ ಮತಾಂತರಿಸುವುದು ಸಂವಿಧಾನದ ವಿಧಿ 14,21 ಮತ್ತು 25ನ್ನು ಉಲ್ಲಂಘಿಸುತ್ತದೆ. ಇದನ್ನು ತಡೆಗಟ್ಟದೇ ಹೋದಲ್ಲಿ ಭಾರತದಲ್ಲಿ ಹಿಂದೂಗಳ ಅಲ್ಪಸಂಖ್ಯಾತರಾಗಲಿದ್ದಾರೆ ಎಂದು ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಇದನ್ನು ಹೇಳಿದೆ.

Religious Conversion: ಮತಾಂತರದ ಸುಳಿಯಲ್ಲಿ ಸಿಕ್ಕ ಯುವಕನ ಕಣ್ಣೀರ ಕಥೆ!

‘ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತಾಂತರ ಹಕ್ಕನ್ನು ಒಳಗೊಳ್ಳುವುದಿಲ್ಲ. ಹಾಗಾಗಿ ಮೋಸ, ವಂಚನೆ, ಬಲತ್ಕಾರ, ಆಕರ್ಷಣೆ ಅಥವಾ ಇನ್ಯಾವುದೇ ಮಾರ್ಗಗಳ ಮೂಲಕ ಜನರನ್ನು ಮತಾಂತರಿಸುವುದನ್ನು ಹಕ್ಕು ಒಳಗೊಂಡಿಲ್ಲ. ಹೀಗಾಗಿ ಅರ್ಜಿದಾರರು ಮುಂದಿಟ್ಟಿರುವ ಆತಂಕಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅದನ್ನು ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ’ ಕೇಂದ್ರ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.
 

click me!