ನಿತೀಶ್‌ ಗೋಸುಂಬೆ, ದ್ರೋಹಿ: ವಿಪಕ್ಷಗಳ ಕಟುಟೀಕೆ; ಕಸದ ತೊಟ್ಟಿಗೇ ಕಸ ಹೋಗಿದೆ ಎಂದು ಲಾಲೂ ಪುತ್ರಿ ವ್ಯಂಗ್ಯ

By Kannadaprabha News  |  First Published Jan 29, 2024, 11:15 AM IST

ಎನ್‌ಡಿಎ ಮೈತ್ರಿಕೂಟ ಸೇರಿದ ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿರ್ಧಾರವನ್ನು ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಆರ್‌ಜೆಡಿ, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ನಿತೀಶ್‌ ಕುಮಾರ್‌ ಗೋಸುಂಬೆ, ದ್ರೋಹ ಎಸಗುವುದರಲ್ಲಿ ತಜ್ಞ ಎಂದೆಲ್ಲಾ ಕಿಡಿಕಾರಿವೆ.


ನವದೆಹಲಿ (ಜನವರಿ 29, 2024): ಬಿಹಾರದಲ್ಲಿ ಆರ್‌ಜೆಡಿ-ಕಾಂಗ್ರೆಸ್‌ ಸರ್ಕಾರ ಪತನಗೊಳಿಸಿ ಮರಳಿ ಎನ್‌ಡಿಎ ಮೈತ್ರಿಕೂಟ ಸೇರಿದ ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿರ್ಧಾರವನ್ನು ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಆರ್‌ಜೆಡಿ, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ನಿತೀಶ್‌ ಕುಮಾರ್‌ ಗೋಸುಂಬೆ, ದ್ರೋಹ ಎಸಗುವುದರಲ್ಲಿ ತಜ್ಞ ಎಂದೆಲ್ಲಾ ಕಿಡಿಕಾರಿವೆ.

ಭಾನುವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ‘ನಿತೀಶ್‌ ಕುಮಾರ್‌ ಇಂಡಿಯಾ ಮೈತ್ರಿಕೂಟ ಬಿಡುವ ಬಗ್ಗೆ ನನಗೆ ಲಾಲೂ ಮತ್ತು ತೇಜಸ್ವಿ ಮೊದಲೇ ಮಾಹಿತಿ ನೀಡಿದ್ದರು. ಅದೀಗ ನಿಜವಾಗಿದೆ. ನಾವು ಮೈತ್ರಿಕೂಟವನ್ನು ಕಾಪಾಡುವ ನಿಟ್ಟಿನಲ್ಲಿ ಮೊದಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಲಿರಲ್ಲ’ ಎಂದರು.

Tap to resize

Latest Videos

ಇಂಡಿಯಾ ಕೂಟಕ್ಕೆ ನಿತೀಶ್‌ ಪ್ರಹಾರ: ಇನ್ನು ಎನ್‌ಡಿಎ ಬಿಡಲ್ಲ; ಬಿಹಾರ ಸಿಎಂ ಸ್ಪಷ್ಟೋಕ್ತಿ

ಮತ್ತೊಂದೆಡೆ ‘ಪದೇ ಪದೇ ಬಣ್ಣ ಬದಲಾಯಿಸುವ ಮೂಲಕ ನಿತೀಶ್‌ ಕುಮಾರ್‌ ಗೋಸುಂಬೆಗಳಿಗೆ ತೀವ್ರ ಸ್ಪರ್ಧೆ ನೀಡಿದ್ದಾರೆ. ದ್ರೋಹದ ತಜ್ಞನನ್ನು ಮತ್ತು ಅವರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವವರನ್ನು ಬಿಹಾರದ ಜನತೆ ಎಂದಿಗೂ ಕ್ಷಮಿಸಲಾರರು. ರಾಹುಲ್‌ ಗಾಂಧಿ ಅವರ ಭಾರತ್‌ ನ್ಯಾಯ್‌ ಜೋಡೋ ಯಾತ್ರೆಯ ಕಡೆಗಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಇಂಥ ಯತ್ನ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಜೈರಾಂ ರಮೇಶ್‌ ಟೀಕಿಸಿದ್ದಾರೆ.

ನಮಗೆ ಲಾಭ:
ನಿತೀಶ್‌ ನಮ್ಮಿಂದ ದೂರವಾಗಿದ್ದು ಇಂಡಿಯಾ ಮೈತ್ರಿಕೂಟಕ್ಕೆ ಆದ ಲಾಭ ಮತ್ತು ಬಿಜೆಪಿಗೆ ಆದ ನಷ್ಟ. ನಿತೀಶ್‌ ಸಂಪೂರ್ಣವಾಗಿ ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ. ಅವರಿಗೆ ಯಾವುದೇ ನಿಷ್ಠೆ ಇಲ್ಲ ಎಂದು ಡಿಎಂಕೆ ವಕ್ತಾರ ಜೆ.ಸಿ.ರವೀಂದ್ರನ್‌ ಹೇಳಿದ್ದಾರೆ.

ನಿತೀಶ್‌ಗೆ ಮತ್ತೆ ಬಿಜೆಪಿ ಬಾಗಿಲು ತೆರೆದಿದ್ದೇಕೆ? ನಿತೀಶ್‌ ನಡೆಗೆ ಪಿಎಂ ಅಭ್ಯರ್ಥಿ ಖರ್ಗೆ ಕಾರಣ!

ಕಸದ ತೊಟ್ಟಿಗೇ ಕಸ ಹೋಗಿದೆ: ಲಾಲೂ ಪುತ್ರಿ ರೋಹಿಣಿ ಕಿಡಿ
ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ರ ಪುತ್ರಿ ರೋಹಿಣಿ ಆಚಾರ್ಯ, ‘ಕಸವು ಕಸದ ತೊಟ್ಟಿಗೇ ಹೋಗಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಈ ಮೂಲಕ ನಿತೀಶ್‌ ಹಾಗೂ ಬಿಜೆಪಿಯನ್ನು ಕಸ ಹಾಗೂ ಕಸದ ತೊಟ್ಟಿಗೆ ಹೋಲಿಸಿದ್ದಾರೆ.
ಮತ್ತೊಂದೆಡೆ, ‘2024ರ ಅಂತ್ಯದ ವೇಳೆಗೆ ಜೆಡಿಯು ಸಂಪೂರ್ಣ ನಿರ್ನಾಮವಾಗಲಿದೆ’ ಎಂದು ಲಾಲೂ ಕಿರಿಯ ಪುತ್ರ, ನಿರ್ಗಮಿತ ಡಿಸಿಎಂ ತೇಜಸ್ವಿ ಯಾದವ್‌ ಭವಿಷ್ಯ ನುಡಿದಿದ್ದಾರೆ. ನಿತೀಶ್‌ಗೆ ‘ಊಸರವಳ್ಳಿ ರತ್ನ’ ಕೊಡಬೇಕು ಎಂದು ಲಾಲೂ ಹಿರಿಮಗ, ನಿರ್ಗಮಿತ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಹೇಳಿದ್ದಾರೆ.

ಪಲ್ಟಿ ರಾಮ್‌ - ಟಎಂಸಿ:
ನಿತೀಶ್‌ ಕುಮಾರ್‌ ಅವರಂಥ ಅವಕಾಶವಾದಿಗಳಿಗೆ ರಾಜ್ಯದ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ. ನಿತೀಶ್‌ ಮತ್ತೆ ರಾಜಕೀಯ ಪಲ್ಟಿ ಹೊಡೆದಿದ್ದಾರೆ ಎಂದು ಟಿಎಂಸಿ ಸಂಸದ ಸೌಗತಾ ರಾಯ್‌ ಟೀಕಿಸಿದ್ದಾರೆ.

click me!