ಗುಣಮುಖರಾದರೂ ಆಕ್ಸಿಜನ್ ಸಿಲಿಂಡರ್‌ ಮರಳಿಸುತ್ತಿಲ್ಲ ಜನ!

By Suvarna NewsFirst Published May 1, 2021, 2:39 PM IST
Highlights

ಕೊರೋನಾತಂಕ ಮಧ್ಯೆ ಮತ್ತೊಂದು ಸಮಸ್ಯೆ| ಆಕ್ಸಿಜನ್ ಕೊರತೆ ನೀಗಿಸಲು ಹೋರಾಡುವವರಿಗೆ ತಲೆನೋವಾದ ಸಮಸ್ಯೆ| ಆಕ್ಸಿಜನ್ ಸಿಕ್ಕ ಬಳಿಕ ಸಿಲಿಂಡರ್‌ ಮರಳಿಸುತ್ತಿಲ್ಲ ಜನ

ನವದೆಹಲಿ(ಮೇ.01): ಆಕ್ಸಿಜನ್ ಕೊರತೆಯಿಂದ ಉಸಿರಾಡಲು ಕಷ್ಟಪಡುತ್ತಿರುವವರನ್ನು ಉಳಿಸಲು ಅನೇಕ ಮಂದಿ ಶ್ರಮಿಸುತ್ತಿದ್ದಾರೆ. ಅಗತ್ಯವಿದ್ದವರಿಗೆ ಆಖ್ಸಿಜನ್ ಸಿಲಿಂಡರ್ ಹಾಗೂ ಕಾನ್ಸಂಟ್ರೇಟರ್‌ ಪೂರೈಸುತ್ತಿದ್ದಾರೆ. ಈ ಮೂಲಕ ಅವರ ಜೀವ ಉಳಿಸಲು ಯತ್ನಿಸುತ್ತಿದ್ದಾರೆ. ಆದರೀಗ ಈ ಸಹಾಆ ಮಾಡುವವರಿಗೂ ಸಮಸ್ಯೆ ಎದುರಾಗಿದೆ. ಅನೇಕ ಮಂದಿ ತಾವು ಪಡೆದ ಆಕ್ಸಿಜನ್ ಸಿಲಿಂಡರ್ ಮರಳಿಸುತ್ತಿಲ್ಲ, ಇದರಿಂದಾಗಿ ಇತರ ರೋಗಿಗಳಿಗೆ ಸಹಾಯ ಸಿಗುತ್ತಿಲ್ಲ ಎಂಬುವುದೇ ಬಹುದೊಡ್ಡ ಸಮಸ್ಯೆ.

ಸಿಲಿಂಡರ್‌ಗಳ ಸಂಖ್ಯೆ ಸೀಮಿತವಾದದ್ದು, ಇದರಲ್ಲಿ ಆಕ್ಸಿಜನ್ ತುಂಬಿಸಿ ರೋಗಿಗಳಿಗೆ ನೀಡಲಾಗುತ್ತಿದೆ. ಇನ್ನು ಈ  ಬಗ್ಗೆ ಮಾತನಾಡಿರುವ ಸಮಾಆಜ ಸೇವಕಿ ಯೋಗಿತಾ ಭಯಾನ್‌ 'ನಮಗೆ ಎರಡೂ ಕಡೆಯಿಂದ ಬಹಳ ಸಮಸ್ಯೆಯಾಗುತ್ತಿದೆ. ಒಂದು ವೇಳೆ ಚಿಕಿತ್ಸೆ ವೇಳೆ ರೋಗಿ ಸಾವನ್ನಪ್ಪಿದರೆ, ದುಃಖದಲ್ಲಿರುವ ಕುಟುಂಬ ಸದಸ್ಯರು ಕೆಲ ದಿನಗಳವರೆಗೆ ಸಿಲಿಂಡರ್ ನೀಡುವುದಿಲ್ಲ. ಮತ್ತೊಂದೆಡೆ ರೋಗಿ ಚೇತರಿಸಿಕೊಂಡ ಬಳಿಕವೂ, ಮತ್ತೆ ಆರೋಗ್ಯ ಹದಗೆಡಬಹುದೆಂಬ ಭೀತಿ ಕುಟುಂಬ ಸದಸ್ಯರಲ್ಲಿರುತ್ತದೆ. ಹೀಗಾಗೇ ಸಿಲಿಂಡರ್ ಮರಳಿಸಲು ಹಿಂಜರಿಯುತ್ತಾರೆ' ಎಂದಿದ್ದಾರೆ.'

"

ಸಿಲಿಂಡರ್‌ ಮರಳಿಸಿ ಎಂದು ನಾವು ಪದೇ ಪದೇ ಹೇಳಬೇಕಾಗುತ್ತದೆ. ಇನ್ನು ದೆಹಲಿ ಕಾಂಗ್ರೆಸ್‌ ಕಮಿಟಿಯ ಉಪಾಧ್ಯಕ್ಷೆ ಅಲೀ ಮೆಹಂದಿ ಈ ಬಗ್ಗೆ ಟ್ವೀಟ್ ಮಾಡಿದ್ದು, ದಯವಿಟ್ಟು ಸಿಲಿಂಡರ್‌ ಮರಳಿಸಿ, ಇದರಿಂದ ಮತ್ತೊಬ್ಬರ ಪ್ರಾಣ ಉಳಿಸಬಹುದೆಂದದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಈ ಬಗ್ಗೆ ಮಾತನಾಡುತ್ತಾ, ಕೇವಲ ತಮಗೆ ಮತ್ತೊಮ್ಮೆ ಕೊರೋನಾ ಬರಬಹುದೆಂಬ ಅನುಮಾನದಿಂದ ಸಿಲಿಂಟರ್‌ ಇಟ್ಟುಕೊಳ್ಳುವುದು ಸರಿಯಲ್ಲ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!