ಕೇಂದ್ರದಿಂದ ರಾಜ್ಯಗಳಿಗೆ 8873 ಕೋಟಿ SDRF ರಿಲೀಫ್ ಫಂಡ್

By Suvarna NewsFirst Published May 1, 2021, 2:24 PM IST
Highlights
ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ ಕೇಂದ್ರದಿಂದ ಹಣ ಬಿಡುಗಡೆ
ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ನೀಡಿದ ಶಿಫಾರಸು
ಫಂಡ್‌ನ  50% ಕೊರೊನಾವೈರಸ್ ನಿಯಂತ್ರಣ ಕ್ರಮಗಳಿಗೆ ಬಳಕೆ

ದೆಹಲಿ(ಮೇ.01): 2021-22ನೇ ಸಾಲಿನ ರಾಜ್ಯ ವಿಪತ್ತು ನಿರ್ವಹಣಾ ನಿಧಿಯ (ಎಸ್‌ಡಿಆರ್‌ಎಫ್) ಕೇಂದ್ರದ ಪಾಲಿನ ಮೊದಲ ಕಂತನ್ನು ಕೇಂದ್ರ ಬಿಡುಗಡೆ ಮಾಡಿದೆ. 2021-22ನೇ ಸಾಲಿನ ಸಾಮಾನ್ಯ ವೇಳಾಪಟ್ಟಿಗಿಂತ ಮುಂಚಿತವಾಗಿ ಕೇಂದ್ರವು ಶನಿವಾರ ಈ ಫಂಡ್ ಬಿಡುಗಡೆ ಮಾಡಿದೆ.

ನೀಡಲಾಗಿರುವ ಫಂಡ್‌ನ 50%ನ್ನು ಕೊರೊನಾವೈರಸ್ ನಿಯಂತ್ರಣ ಕ್ರಮಗಳಿಗೆ ರಾಜ್ಯಗಳು ಬಳಸಬಹುದು ಎಂದು ಸರ್ಕಾರ ಹೇಳಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜನ ಕ್ಯೂನಲ್ಲಿ ಕಾದಿದ್ದೇ ಬಂತು, ಆಕ್ಸಿಜನ್ ಸಿಲಿಂಡರ್ BJP ಶಾಸಕನ ಕಾರಿಗೆ ತುಂಬಿದ್ರು..!

ಸಾಮಾನ್ಯ ಕಾರ್ಯವಿಧಾನದಲ್ಲಿ ಕೆಲವು ಸಡಿಲಿಕೆ ಮಾಡಲಾಗಿದ್ದು ಎಸ್‌ಡಿಆರ್‌ಎಫ್ ಫಂಡ್ ಬೇಗ ಬಿಡುಗಡೆ ಮಾಡಿಲಾಗಿದೆ. ಹಾಗೆಯೇ ಕಳೆದ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಒದಗಿಸಿದ ಮೊತ್ತದ ಬಳಕೆಯ ಪ್ರಮಾಣಪತ್ರಕ್ಕಾಗಿ ಕಾಯದೆ ಈ ವರ್ಷದ ಮೊತ್ತವನ್ನು ಬಿಡುಗಡೆ ಮಾಡಲಾಗಿರುವುದು ವಿಶೇಷ.

ಬಿಡುಗಡೆಯಾದ ಮೊತ್ತದ 50% ವರೆಗೆ ಕೋವಿಡ್ -19 ನಿಯಂತ್ರಣ ಕ್ರಮಗಳಿಗಾಗಿ ರಾಜ್ಯಗಳು ಬಳಸಬಹುದು. ಅಂದರೆ 4436.8 ಕೋಟಿ ರೂಪಾಯಿಗಳನ್ನು ಬಳಸಬಹುದು, ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಆರು ರಾಜ್ಯಗಳಲ್ಲಿ ಮಾತ್ರ ಆರಂಭ!

ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ನೀಡಿದ ಶಿಫಾರಸುಗಳ ಆಧಾರದ ಮೇಲೆ ಹಣವನ್ನು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನೆ ಮತ್ತು ಶೇಖರಣಾ ಘಟಕಗಳ ವೆಚ್ಚ, ವೆಂಟಿಲೇಟರ್‌ಗಳ ಖರೀದಿ, ಆಂಬ್ಯುಲೆನ್ಸ್ ಸೇವೆಗಳನ್ನು ಬಲಪಡಿಸುವುದರ ಜೊತೆಗೆ ಕೋವಿಡ್ -19 ಆಸ್ಪತ್ರೆಗಳು ಮತ್ತು ಕೋವಿಡ್ -19 ಆರೈಕೆ ಕೇಂದ್ರಗಳಿಗೆ ಈ ಹಣವನ್ನು ಬಳಸಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ.

ಉಪಭೋಗ್ಯ ವಸ್ತುಗಳು, ಥರ್ಮಲ್ ಸ್ಕ್ಯಾನರ್‌ಗಳು, ವೈಯಕ್ತಿಕ ರಕ್ಷಣಾ ಸಾಧನಗಳು, ಪರೀಕ್ಷಾ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಕಿಟ್‌ಗಳನ್ನು ಖರೀದಿಸಲು ಹಣವನ್ನು ಬಳಸುವಂತೆ ಕೇಂದ್ರವು ರಾಜ್ಯಗಳಿಗೆ ಸೂಚಿಸಿದೆ.

click me!