Viral video: ಇದಪ್ಪಾ ಊಟ ಅಂದ್ರೆ... ಹಾಲ್‌ಗೆ ಬೆಂಕಿ ಬಿದ್ರು ಮದ್ವೆ ಊಟ ಬಿಡದ ಜನ

By Suvarna News  |  First Published Dec 1, 2021, 1:26 PM IST

ಬೆಂಕಿ ಬಿದ್ದಾಗ ಎಲ್ಲರೂ ಬೇರೆಡೆ ಓಡಿ ಹೋಗಿ ಜೀವ ಉಳಿಸಿಕೊಳ್ಳುವುದಕ್ಕೆ ನೋಡುತ್ತಾರೆ ಆದರೆ ಇಲ್ಲೊಂದು ಕಡೆ ಹಾಲ್‌ಗೆ ಬೆಂಕಿ ಬಿದ್ದಿದ್ದರು ಅತಿಥಿಗಳು ಮದ್ವೆ ಊಟ ತಿನ್ನುವುದರಲ್ಲೇ ಬ್ಯುಸಿಯಾಗಿದ್ದ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 


ಥಾಣೆ(ಡಿ.1): ಮದ್ವೆ ಊಟ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬಹುತೇಕ ಮಂದಿ ಮದುವೆಗಳಿಗೆ ಊಟ ಮಾಡಲೆಂದೇ ಹೋಗುತ್ತಾರೆ. ಆದರೆ ಅಲ್ಲಿ ಬೆಂಕಿ ಬಿದ್ದರೆ ಜೀವ ಉಳಿಸಿಕೊಳ್ಳುವ ದಾರಿ ಹುಡುಕುತ್ತಾರೆ. ಆದರೆ ಇಲ್ಲಿ ಮಾತ್ರ ವಿಚಿತ್ರ ಮದ್ವೆ ಹಾಲ್‌ಗೆ ಬೆಂಕಿ ಬಿದ್ದಿದ್ದರು ಜನ ಭೋಜನ ಸವಿಯುವುದರಲ್ಲೇ ನಿರತರಾಗಿದ್ದರು. ಮಹಾರಾಷ್ಟ್ರದ ಥಾಣೆ(Thane)ಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣ(Social Media)ಗಳಲ್ಲಿ  ಈಗ ವ್ಯಾಪಕವಾಗಿ ವೈರಲ್‌ ಆಗಿದೆ. 


ಈ ವಿಡಿಯೋದಲ್ಲಿ ಊಟದ ಹಾಲ್‌ನಿಂದ ಕೇವಲ ಕೆಲ ಮೀಟರ್‌ ದೂರದಲ್ಲಿ ಭಾರಿ ಬೆಂಕಿ ಹಾಗೂ ಹೊಗೆ ಹೋಗುವುದು ಕಾಣಿಸುತ್ತಿದೆ. ಅದಾಗ್ಯೂ ಈ ಬಗ್ಗೆ ತಲೆಕೆಡಿಸಿಕೊಳ್ಳದ ಜನ ತಮ್ಮ ತಟ್ಟೆಯಲ್ಲಿರುವ ರುಚಿಯಾದ ಭೋಜನವನ್ನು ಸವಿಯುವುದರಲ್ಲೇ ನಿರತರಾಗಿದ್ದಾರೆ.   ವಿಡಿಯೋದಲ್ಲಿ ಬೆಂಕಿಯ ಕಡೆ ಒಮ್ಮೆ ನೋಡಿದ ಅತಿಥಿಯೊಬ್ಬರು ಆ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳದೇ ಊಟವನ್ನು ಸವಿಯುತ್ತಿದ್ದರು.   ಫೇಸ್ಬುಕ್‌(Facebook)ನಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಿದ ಭಾರತೀಯ ಅಗ್ನಿ ಶಾಮಕ ದಳವೂ 'ಮದುವೆಯ ಪೆಂಡಾಲ್‌ಗೆ ಬೆಂಕಿ ಬಿದ್ದಿದೆ. ಆದರೆ ಮದುವೆಗೆ ಬಂದ ಅತಿಥಿ ಬೆಂಕಿಯಿಂದ ಹೊರ ಬರುವುದೋ ಅಥವಾ ಭೋಜನ ಸವಿಯುವುದೋ ಎಂಬ ಗೊಂದಲದಲ್ಲಿದ್ದಾನೆ' ಎಂಬ ಶೀರ್ಷಿಕೆ ನೀಡಿದ್ದಾರೆ. 

Tap to resize

Latest Videos


Child marriage And HC : ಮದುವೆ ತಪ್ಪಿಸಿಕೊಳ್ಳಲು ಮನೆ ಬಿಟ್ಟಿದ್ದ ಬಾಲಕಿಗೆ ಹೈಕೋರ್ಟ್ ರಕ್ಷಣೆ

ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಭಿವಂಡಿ(Bhiwandi)ಯ ಅನ್ಸಾರಿ  ಮದುವೆ ಹಾಲ್‌ನ ಸ್ಟೋರ್‌ ರೂಮ್‌(store Room)ಗೆ ಬೆಂಕಿ ಬಿದ್ದಿತ್ತು. ಇದರ ಸಮೀಪವಿದ್ದ 6 ದ್ವಿಚಕ್ರವಾಹನಗಳು ಹಾಗೂ ಕೆಲವು ಚೇರ್‌ಗಳು ಬೆಂಕಿಯಿಂದ ಸುಟ್ಟು ಹೋಗಿದ್ದವು.  ಆದರೆ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ. ಘಟನಾ ಸ್ಥಳಕ್ಕೆ ಮೂರು ಅಗ್ನಿ ಶಾಮಕ ವಾಹನಗಳು ಆಗಮಿಸಿ ಬೆಂಕಿಯನ್ನು ಶಮನಗೊಳಿಸಿದವು. ಇನ್ನು ಬೆಂಕಿ ಅನಾಹುತ ನಡೆದ ಸ್ಟೋರ್‌ ರೂಮ್‌ನಲ್ಲಿ ಅಲಂಕಾರಿಕ ವಸ್ತುಗಳಿದ್ದವೆಂದು ತಿಳಿದು ಬಂದಿದೆ. ಬೆಂಕಿ ಅನಾಹುತಕ್ಕೆ ಏನು ಕಾರಣ ಎಂದು ತಿಳಿದು ಬಂದಿಲ್ಲ. ಆದರೂ ಪಟಾಕಿಯಿಂದ ಬೆಂಕಿ ಹತ್ತಿರಬಹುದು ಎಂದು ಅಗ್ನಿಶಾಮಕ ಸಿಬ್ಬಂದಿ ಸಂಶಯ ವ್ಯಕ್ತಪಡಿಸಿದ್ದಾರೆ.

Covid 19: ಧಾರವಾಡ SDM ಕಾಲೇಜು ಸೀಲ್‌ಡೌನ್, ಆವರಣದಲ್ಲಿ ಮದುವೆಗೆ ಮಾತ್ರ ಅನುಮತಿ!

ಇನ್ನು ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(viral) ಆಗುತ್ತಿದ್ದಂತೆ ಕೆಲ ನೆಟ್ಟಿಜನ್‌ಗಳು ಭಿನ್ನ ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. 
ಬೆಂಕಿ ಬಿದ್ದಿದೆ ಆದರೆ ನಾವು ಮೋಜು ಮಾಡುತ್ತಿದ್ದೇವೆ. ಜೀವ ಹೋಗಲಿ ಆದರೆ ಊಟ ಮಾತ್ರ ಬಿಡಲ್ಲ, ಯಾವ ಬೆಂಕಿಯೂ ಕೂಡ ಭಾರತೀಯರನ್ನು ಮದುವೆ ಊಟ ತಿನ್ನುವುದರಿಂದ ದೂರ ಮಾಡಲಾಗದು ಎಂದೆಲ್ಲಾ ತಮಾಷೆಯಾಗಿ ಕಾಮೆಂಟ್‌ ಮಾಡಿದ್ದಾರೆ. 

 

ಇದುವರೆಗೂ ಭಾರತೀಯ ಮದುವೆಗಳಲ್ಲಿ ಮದುವೆ ಊಟ ಚೆನ್ನಾಗಿಲ್ಲ ಎಂದು ಗಲಾಟೆ ಮಾಡಿದ ಘಟನೆ, ಮದುವೆಯಲ್ಲಿ ವಧು ಅಥವಾ ವರ ಬದಲಾಗಿ ಅಥವಾ ವರ ನಾಪತ್ತೆಯಾಗಿ ಮದ್ವೆ ಹಾಲ್‌ ರಣರಂಗವಾದ ಘಟನೆ ಇತ್ಯಾದಿ ತರಹೇವಾರಿ ಸುದ್ದಿಗಳನ್ನು ನೀವೆಲ್ಲರೂ ಕೇಳಿರಬಹುದು. ಆದರೆ ಮದ್ವೆ ಹಾಲ್‌ಗೆ ಬೆಂಕಿ ಬಿದ್ದರು ಜನ ಊಟ ಭೋಜನ ಸವಿಯುವುದರಲ್ಲೇ ನಿರತರಾದ ಈ ಘಟನೆ ಮಾತ್ರ ವಿಚಿತ್ರವೇ ಸರಿ. 

click me!