'ಮಹಾರಾಷ್ಟ್ರ, ಕೇರಳದಲ್ಲಿ ಕೊರೋನಾ ಏರಿಕೆಗೆ ಹೊಸ ಪ್ರಭೇದ ಕಾರಣವಲ್ಲ'

Published : Feb 24, 2021, 11:45 AM IST
'ಮಹಾರಾಷ್ಟ್ರ, ಕೇರಳದಲ್ಲಿ ಕೊರೋನಾ ಏರಿಕೆಗೆ ಹೊಸ ಪ್ರಭೇದ ಕಾರಣವಲ್ಲ'

ಸಾರಾಂಶ

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೋನಾ ವೈರಸ್‌ನ ಎನ್‌440ಕೆ ಮತ್ತು ಎ484ಕೆ ಎಂಬ ಎರಡು ಪ್ರಭೇದಗಳು ಪತ್ತೆ| 'ಮಹಾರಾಷ್ಟ್ರ, ಕೇರಳದಲ್ಲಿ  ಕೊರೋನಾ ಏರಿಕೆಗೆ ಹೊಸ ಪ್ರಭೇದ ಕಾರಣವಲ್ಲ'

 

ನವದೆಹಲಿ(ಫೆ.24): ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೋನಾ ವೈರಸ್‌ನ ಎನ್‌440ಕೆ ಮತ್ತು ಎ484ಕೆ ಎಂಬ ಎರಡು ಪ್ರಭೇದಗಳು ಪತ್ತೆ ಆಗಿವೆ. ಇವುಗಳ ಪೈಕಿ ಒಂದು ಪ್ರಭೇದ ಕೇರಳದಲ್ಲೂ ಪತ್ತೆ ಆಗಿವೆ. ಆದರೆ, ಹೊಸ ಪ್ರಭೇದಗಳಿಂದಾಗಿಯೇ ಮಹಾರಾಷ್ಟ್ರ ಮತ್ತು ಕೇರಳದ ಕೆಲವು ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳ ಏರಿಕೆ ಆಗಿದೆ ಎಂಬುದಕ್ಕೆ ಯಾವುದೇ ಕಾರಣಗಳು ಇಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್‌, ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್‌ನ ಹೊಸ ಪ್ರಭೇದಗಳ ಜೊತೆ ಬ್ರಿಟನ್‌, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನ ಮಾದರಿಗಳು ಕೂಡ ದೇಶದಲ್ಲಿವೆ. ಆದರೆ, ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಕೊರೋನಾದ ಹೊಸ ಮಾದರಿಗಳಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಭಾವಿಸುವುದಕ್ಕೆ ಯಾವುದೇ ಕಾರಣಗಳು ಇಲ್ಲ.

ದೇಶದಲ್ಲಿ ಇದುವರೆಗೆ 187 ಮಂದಿಗೆ ಬ್ರಿಟನ್‌ ಸೋಂಕು, ಆರು ಮಂದಿಗೆ ದಕ್ಷಿಣ ಆಫ್ರಿಕಾ ವೈರಸ್‌ ಹಾಗೂ ಓರ್ವ ವ್ಯಕ್ತಿಯಲ್ಲಿ ಬ್ರೆಜಿಲ್‌ ಸೋಂಕು ಪತ್ತೆ ಆಗಿದೆ. ಹೊಸ ಮಾದರಿಗಳ ವರ್ತನೆಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಇದುವರೆಗೆ ಕೊರೋನಾದ 3,500 ಮಾದರಿಗಳನ್ನು ಅಕ್ರಮವಾಗಿ ಹೆಸರಿಸಲಾಗಿದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!