ವಂದೇ ಭಾರತ್ ರೈಲು ಪ್ರಯಾಣದಲ್ಲಿ ಏನೆಲ್ಲಾ ಕೊಡ್ತಾರೆ, ಊಟ ತಿಂಡಿ ನೋಡಿ ಥ್ರಿಲ್ ಆದ ಜನ

Published : Oct 31, 2026, 04:20 PM IST
Vande Bharat Express Food Menu

ಸಾರಾಂಶ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕನಿಗೆ ಏನೆಲ್ಲಾ ನೀಡಲಾಗುತ್ತೆ? ಸ್ಪೆಷಲ್ ಮೀಲ್ಸ್, ಕಾಫಿ, ತಿಂಡಿ, ಚಾಕೋಲೇಟ್ ನೋಡಿ ಹಲವರು ಥ್ರಿಲ್ ಆಗಿದ್ದಾರೆ.ಪ್ರಯಾಣಿಕನಿಗೆ ಸಿಗೋ ಸೌಲಭ್ಯವೇನು

ನವದೆಹಲಿ (ಅ.31) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಯಾಣ ಹೆಚ್ಚು ಆರಾಮದಾಯಕ ಹಾಗೂ ಸಮಯದ ಉಳಿತಾಯವೂ ಹೆಚ್ಚು. ಭಾರತದ ಅತೀ ವೇಗ ಹಾಗೂ ಅತ್ಯಾಧುನಿಕ ರೈಲು ಎಂದೇ ಗುರುತಿಸಿಕೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕನಿಗೆ ಸಿಗುವ ಸೌಲಭ್ಯ ಇದೀಗ ಹಲವರನ್ನು ಥ್ರಿಲ್ ಮಾಡಿದೆ. ಈ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಕನಿಗೆ ನೀಡುವ ಊಟ, ತಂಡಿ, ಕಾಫಿ, ನೀರು ಸೇರಿದಂತೆ ಇತರ ತಿನಿಸುಗಳು, ಸೌಲಭ್ಯಗಳ ಕುರಿತ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ರೈಲು ಪ್ರಯಾಣದ ಮೆನು

ಈ ವಿಡಿಯೋದಲ್ಲಿ ವ್ಲಾಗರ್ ರೈಲು ಹತ್ತಿದ ತಕ್ಷಣವೇ ರೈಲಿನ ಶುಚಿತ್ವ, ವಾತಾವರಣ ನೋಡಿ ಖುಷಿಯಾಗಿದ್ದಾನೆ. ಇನ್ನು ಸಿಬ್ಬಂದಿಗಳ ಸೇವೆ, ರೈಲಿನಲ್ಲಿ ನೀಡುವ ಸರ್ವೀಸ್ ನೋಡಿ ಥ್ರಿಲ್ ಆಗಿದ್ದಾನೆ. ರೈಲು ಪ್ರಯಾಣದ ವೇಳೆ ಸಿಗುವ ಸೌಲಭ್ಯ, ಆಹಾರ ಕುರಿತ ವಿಡಿಯೋ ಮಾಡಿದ್ದು ವೈರಲ್ ಆಗಿದೆ. ಇಡೀ ಪ್ರಯಾಣದ ಉದ್ದಕ್ಕೂ ನೀಡಲಾದ ಸಂಪೂರ್ಣ ಆಹಾರದ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ರೈಲು ಪ್ರಯಾಣ ಆರಂಭವಾಗುತ್ತಿದ್ದಂತೆಯೇ ಮೊದಲಿಗೆ ಬಿಸಿಬಿಸಿ ಟೀ/ಕಾಫಿ ಕಿಟ್‌ನೊಂದಿಗೆ ಬಿಸ್ಕತ್ತು ಮತ್ತು ಸ್ನ್ಯಾಕ್ಸ್ ನೀಡಲಾಗಿತ್ತು. ಇದಾದ ನಂತರ ಲಘು ಉಪಹಾರ ನೀಡಲಾಗಿತ್ತು.ಇನ್ನು ರೈಲಿನಲ್ಲಿ ನೀಡಿದ ಊಟ ನೋಡಿ ಹಲವರು ಹೌಹಾರಿದ್ದಾರೆ.

ಬಿಸಿ ಬಿಸಿ ಊಟ, ಕಾಫಿ ತಿಂಡಿ

ರೈಲಿನಲ್ಲಿ ನೀಡಲಾದ ಪ್ರಮುಖ ಊಟದ ಮೆನುವಿನಲ್ಲಿ ಬಿಸಿಬಿಸಿ ಚಪಾತಿ, ದಾಲ್ ತಡ್ಕಾ, ಪನೀರ್ ಸಬ್ಜಿ, ರೈಸ್, ಸಲಾಡ್ ಹಾಗೂ ಮೊಸರು ಸೇರಿದ್ದವು. ಊಟದ ನಂತರ ಸಿಹಿ ತಿಂಡಿಯಾಗಿ ಐಸ್‌ಕ್ರೀಮ್ ಮತ್ತು ರಸಗುಲ್ಲ ನೀಡಲಾಗಿತ್ತು. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಆಹಾರದ ನೈರ್ಮಲ್ಯ ಮತ್ತು ರುಚಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೋಟೆಲ್ ಮಾದರಿಯಲ್ಲಿಯೇ ಶುಚಿಯಾದ ಮತ್ತು ಸುವಾಸನಾಯುಕ್ತ ಬಿಸಿಯೂಟವನ್ನು ರೈಲ್ವೆ ಸಿಬ್ಬಂದಿ ಅತ್ಯಂತ ಗೌರವದಿಂದ ಬಡಿಸುವ ರೀತಿಯನ್ನು ಕಂಡು ಹಲವರು ವಂದೇ ಭಾರತ್ ಪ್ರಯಾಣಕ್ಕೆ ಮನಸ್ಸು ಮಾಡುತ್ತಿದ್ದಾರೆ.

ಹಲವರು ಬಾರಿ ರೈಲು ಸೇವೆಗಳ ಕುರಿತು ದೂರಿನ ವಿಡಿಯೋಗಳು ಭಾರಿ ಸದ್ದು ಮಾಡುತ್ತದೆ. ಇದೀಗ ವಂದೇ ಭಾರತ್ ರೈಲಿನ ಈ ವಿಡಿಯೋ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ರೈಲ್ವೆಯ ಪ್ರೀಮಿಯಂ ರೈಲುಗಳಲ್ಲಿ ಕೆಟರಿಂಗ್ ಸೇವೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈ ವೀಡಿಯೋ ಐಆರ್‌ಸಿಟಿಸಿ (IRCTC) ಸೇವೆಯ ಸಕಾರಾತ್ಮಕ ಬದಲಾವಣೆಗೆ ಪುಷ್ಠಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಪ್ಪನ ಕನಸಿಗಾಗಿ 59ರ ವಯಸ್ಸಿನಲ್ಲೂ ಬಸ್ ಕಂಡಕ್ಟರ್ ಕೆಲಸ: ಸವಾಲು ಮೆಟ್ಟಿ ನಿಂತ ‘ಡಾಲಿ ದೀದಿ’
ಕಷ್ಟಪಟ್ಟು ಎರಡು ಮಹಡಿ ಮೆಟ್ಟಿಲೇರಿದ ಅಂಗವಿಕಲ ಡೆಲಿವರಿ ಬಾಯ್‌! ಕೊನೆಗೆ ಗ್ರಾಹಕ ಮಾಡಿದ್ದೇನು ಗೊತ್ತಾ?