Abhijeet Dipke controversy: ಪಂಜಾಬಿಗಳಿಗೆ ಹೋರಾಡುವುದನ್ನು ಕಲಿಸಲು ಬರಬೇಡ; ಅಭಿಜೀತ್ ದೀಪ್ಕೆಗೆ ಖಡಕ್‌ ವಾರ್ನ್

Published : Oct 31, 2026, 03:16 PM IST
Abhijeet Dipke

ಸಾರಾಂಶ

ಟ್ವಿಟರ್‌ನಲ್ಲಿ ಗಾಯಕ ದಿಲ್ಜಿತ್ ದೋಸಾಂಜ್ ಅವರನ್ನು ಟೀಕಿಸಿದ್ದ ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ, ದಿಲ್ಜಿತ್ ಅವರ ಖಡಕ್ ಪ್ರತಿಕ್ರಿಯೆಯ ನಂತರ ಕ್ಷಮೆಯಾಚಿಸಿದ್ದಾರೆ. ಅವರು ಹೇಳಿದ್ದೇನು? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.

ಟ್ವಿಟರ್‌ನಲ್ಲಿ ಜಿದ್ದಾಜಿದ್ದಿಗೆ ಬಿದ್ದಿದ್ದ ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ, ದಿಲ್ಜಿತ್ ದೋಸಾಂಜ್ ಅವರ ಒಂದೇ ಒಂದು ಖಡಕ್ ಜವಾಬ್‌ಗೆ ತಣ್ಣಗಾಗಿದ್ದಾರೆ! ಸೈದ್ಧಾಂತಿಕ ಜಗಳ ಬಿಟ್ಟು ದಿಲ್ಜಿತ್ ಅವರ ಕಾಲು ಹಿಡಿಯುವಂತೆ ಕ್ಷಮೆಯಾಚಿಸಿರುವ ಹಿಂದಿನ ಸಂಪೂರ್ಣ ಸ್ಟೋರಿ ಇಲ್ಲಿದೆ.

ಐ ಆಮ್‌ ಆನ್‌ ಆರ್ಟಿಸ್ಟ್‌ ಬ್ರೋ; ದಿಲ್ಜೀತ್!

ದೆಹಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ ತಮ್ಮ ಲೈವ್ ಕಾನ್ಸರ್ಟ್‌ನಲ್ಲಿ ದಿಲ್ಜಿತ್ ದೋಸಾಂಜ್ ಅವರು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಹೆಸರನ್ನು ಹೇಳದೆ, ತಮ್ಮ ಹಳೆಯ "ಐ ಆಮ್ ಆನ್ ಆರ್ಟಿಸ್ಟ್, ಬ್ರೋ" (ನಾನೊಬ್ಬ ಕಲಾಕಾರ, ಬ್ರೋ) ಎಂಬ ಹೇಳಿಕೆಯನ್ನು ಟೀಕಿಸಿದವರಿಗೆ ವೇದಿಕೆಯ ಮೇಲಿಂದಲೇ ಖಡಕ್ ಆಗಿ ಜವಾಬ್ ನೀಡಿದ್ದರು.

ಪಂಜಾಬಿಗಳಿಗೆ ಹೋರಾಡುವುದು ಹೇಗೆ ಎಂದು ಕಲಿಸಬೇಡಿ!

ದಿಲ್ಜಿತ್ ಅವರು ನೆರೆದಿದ್ದ ಸಾರ್ವಜನಿಕರನ್ನುದ್ದೇಶಿಸಿ, "ನಾನು ಒಬ್ಬ ಕಲಾಕಾರ, ಹಾಗಾಗಿ ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಾನು ಶಾಂತನಾಗಿದ್ದೇನೆ, ನನ್ನನ್ನು ಶಾಂತವಾಗಿಯೇ ಇರಲು ಬಿಡಿ. ನಾನು ನಿಮ್ಮೆಲ್ಲರನ್ನೂ ಬೆಂಬಲಿಸುತ್ತೇನೆ, ಆದರೆ ಪಂಜಾಬಿಗಳಿಗೆ ತಮ್ಮ ಹಕ್ಕುಗಳಿಗಾಗಿ ಹೇಗೆ ಹೋರಾಡಬೇಕು ಎಂದು ಯಾರೂ ಪಾಠ ಕಲಿಸಬೇಕಾಗಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಚಲನಚಿತ್ರವನ್ನು ಲೇವಡಿ ಮಾಡಿದ್ದಕ್ಕೆ ಆಕ್ಷೇಪ!

ಜೂನ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನ ಆಧಾರಿತ ತಮ್ಮ 'ಸಟ್ಲುಜ್' ಚಿತ್ರವನ್ನು ಲೇವಡಿ ಮಾಡಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, "ನೀವು ವೇದಿಕೆಯ ಮೇಲೆ ನಿಂತು ಯಾವ ಚಿತ್ರವನ್ನು ತಮಾಷೆ ಮಾಡುತ್ತಿದ್ದೀರೋ, ಆ ಚಿತ್ರವನ್ನು ಹೊರತರಲು ನಾವು ದೀರ್ಘಕಾಲದವರೆಗೆ ಹೋರಾಡಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.

ನಕಾರಾತ್ಮಕತೆಗೆ ತಲೆಕೆಡಿಸಿಕೊಳ್ಳುವುದಿಲ್ಲ!

ಕೆಲವರು ಕೇವಲ ತಮ್ಮ ಸುತ್ತ ನಕಾರಾತ್ಮಕತೆಯನ್ನು ಹರಡಲು, ತಮ್ಮನ್ನು ತೊಂದರೆಗೆ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ತಾವು ಈ ಎಲ್ಲದಕ್ಕಿಂತ ಮಿಗಿಲಾಗಿದ್ದು ಇವುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಟ್ವಿಟರ್ ಜಗಳ ಇನ್‌ಸ್ಟಾಗ್ರಾಮ್‌ಗೆ ಶಿಫ್ಟ್ ಆಗಿದ್ದು ಹೇಗೆ?

ಇತ್ತೀಚೆಗೆ ದಿಲ್ಜಿತ್ ಅವರ ಕಾನ್ಸರ್ಟ್‌ ಟಿಕೆಟ್ ದರ ಮತ್ತು ರೈತ ಹೋರಾಟದ ಸಮಯದ ಅವರ ಹಳೆಯ ನಿಲುವುಗಳ ಬಗ್ಗೆ ಅಭಿಜೀತ್ ದಿಪ್ಕೆ ಟ್ವಿಟರ್ (X) ನಲ್ಲಿ ಭಾರಿ ಟೀಕೆ ಮಾಡಿದ್ದರು. ಆದರೆ ಯಾವಾಗ ದಿಲ್ಜಿತ್ ದೋಸಾಂಜ್ ಅವರೇ ಸ್ವತಃ ಇವರಿಗೆ ನೇರ ಮತ್ತು ಖಾರವಾದ ರಿಪ್ಲೈ ಕೊಟ್ಟರೋ, ಕಥೆ ಇಡೀ ಉಲ್ಟಾ ಆಯಿತು. ಟ್ವಿಟರ್‌ನಲ್ಲಿ ಕಿಡಿಕಾರುತ್ತಿದ್ದ ಅಭಿಜೀತ್, ಇನ್‌ಸ್ಟಾಗ್ರಾಮ್‌ಗೆ ಬಂದು ಬಹಿರಂಗ ಪ್ರೇಮಪತ್ರದಂತಹ ಕ್ಷಮಾಪಣಾ ಪತ್ರ ಬರೆದಿದ್ದಾರೆ.

ಅಭಿಜೀತ್ ದಿಪ್ಕೆ ಬಿಚ್ಚಿಟ್ಟ ಆ ರಹಸ್ಯ ಏನು?

ಕ್ಷಮೆ ಕೇಳುತ್ತಾ ಅಭಿಜೀತ್ ದಿಪ್ಕೆ ಒಂದು ದೊಡ್ಡ ಸೀಕ್ರೆಟ್ ಓಪನ್ ಮಾಡಿದ್ದಾರೆ. ಅದೇನೆಂದರೆ, ತಾವೊಬ್ಬ ದಿಲ್ಜಿತ್ ಅವರ ಕಡು ಅಭಿಮಾನಿ. ಪಾಜಿ, ನಾನು ಇದೇ ವರ್ಷ ಮೇ ತಿಂಗಳಲ್ಲಿ ಚಿಕಾಗೋದಲ್ಲಿ ನಡೆದ ನಿಮ್ಮ ಲೈವ್ ಕಾನ್ಸರ್ಟ್‌ ಅನ್ನು ಮುಂಚೂಣಿಯಲ್ಲಿ ನಿಂತು ಎಂಜಾಯ್ ಮಾಡಿದ್ದೆ. ಜೂನ್ ತಿಂಗಳಲ್ಲಿ ನೀವು ಕೊಟ್ಟ ಒಂದು ಹೇಳಿಕೆ ಬೇಸರ ತರಿಸಿತ್ತು, ಅದಕ್ಕೆ ಟೀಕಿಸಿದೆ ಅಷ್ಟೇ ಎಂದು ತಮ್ಮ ಒಳಗಿನ ಅಭಿಮಾನಿಯನ್ನು ಹೊರಹಾಕಿದ್ದಾರೆ.

ಕಿರಿಯ ಸಹೋದರ ಅಂದುಕೊಂಡು ಮಣ್ಣು ಹಾಕಿ!

ಕೊನೆಗೆ ಪಂಜಾಬಿ ಶೈಲಿಯಲ್ಲೇ ಸಾಷ್ಟಾಂಗ ನಮಸ್ಕಾರ ಹಾಕಿರುವ ಅಭಿಜೀತ್, "ಪಾಜಿ, ನನ್ನನ್ನು ನಿಮ್ಮ ಕಿರಿಯ ಸಹೋದರ ಎಂದು ಭಾವಿಸಿ ಈ ತಪ್ಪು ತಿಳುವಳಿಕೆಯನ್ನು ಇಲ್ಲಿಗೇ ಬಿಟ್ಟುಬಿಡಿ (ಮಣ್ಣು ಹಾಕಿ)" ಎಂದು ಗೋಗರೆದಿದ್ದಾರೆ. ಸೈದ್ಧಾಂತಿಕ ಜಗಳ ಮತ್ತು ರಾಜಕೀಯ ಟೀಕೆಗಳು ಸ್ಟಾರ್ ಗಾಯಕನ ಮೇಲಿರುವ ಕ್ರೇಜ್ ಮುಂದೆ ಹೇಗೆ ಧೂಳೀಪಟವಾದವು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೀದಿ ನಾಯಿಗಳ ಹಿಂಡಿನಿಂದ ಬಚಾವಾಗಲು 'ಸತ್ತಂತೆ' ನಟಿಸಿದ ಚಾಲಾಕಿ ನಾಯಿ! ಆಸ್ಕರ್ ಲೆವೆಲ್ ನಟನೆಗೆ ನೆಟ್ಟಿಗರು ಫಿದಾ
IMD: ಹವಾಮಾನ ಇಲಾಖೆಯ ಲೇಟೆಸ್ಟ್ ಅಲರ್ಟ್: ಏನಾಗಲಿದೆ ನವೆಂಬರ್‌ನಲ್ಲಿ?