ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಕೆಳಗೆ ಬಿದ್ದ ಯುವಕ: ಭಯಾನಕ ವಿಡಿಯೋ

By Suvarna News  |  First Published Feb 11, 2022, 3:44 PM IST
  • ರೈಲಿನಿಂದ ಕೆಳಗೆ ಬಿದ್ದ ಯುವಕನ ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ
  • ತೆಲಂಗಾಣದ ವಾರಂಗಲ್‌ನ ರೈಲು ನಿಲ್ದಾಣದಲ್ಲಿ ಘಟನೆ
  • ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಅನಾಹುತ

ತೆಲಂಗಾಣ(ಫೆ.11): ಚಲಿಸುತ್ತಿರುವ ರೈಲಿನಿಂದ ಇಳಿಯಲು ಹೋಗಿ ಪ್ರಯಾಣಿಕನೋರ್ವ ಕೆಳಗೆ ಬಿದ್ದು ಸ್ವಲ್ಪದರಲ್ಲೇ ಪ್ರಾಣಪಾಯದಿಂದ ಪಾರಾದ ಘಟನೆ ತೆಲಂಗಾಣದ ವಾರಂಗಲ್ ರೈಲು ನಿಲ್ದಾಣದಲ್ಲಿ ನಡೆದಿದೆ.  ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆ ಯುವಕನನ್ನು ದೊಡ್ಡ ದುರಂತದಿಂದ ರಕ್ಷಿಸಿದೆ. ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿದ ನಂತರ ವ್ಯಕ್ತಿ ಬಿದ್ದಿದ್ದು, ಕರ್ತವ್ಯದಲ್ಲಿದ್ದ ಇಬ್ಬರು ಆರ್‌ಪಿಎಫ್ ಅಧಿಕಾರಿಗಳು ಆತನನ್ನು ರಕ್ಷಿಸಿದ್ದಾರೆ. ಇದರ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ರೈಲ್ವೆ ಸಚಿವಾಲಯವು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ರೈಲು ನಿಧಾನವಾಗಿ ಚಲಿಸುವಾಗ ಇಬ್ಬರು ಆರ್‌ಪಿಎಫ್ ಸಿಬ್ಬಂದಿ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುತ್ತಾ ಹೋಗುತ್ತಿರುತ್ತಾರೆ. ಈ ವೇಳೆ ಚಲಿಸುತ್ತಿದ್ದ ರೈಲಿನಿಂದ ಒಬ್ಬ ಪ್ರಯಾಣಿಕನು ಹಠಾತ್ತನೆ ಇಳಿಯಲು ಹೋಗಿ ಜಾರಿ ಬೀಳುತ್ತಾನೆ. ಕೂಡಲೇ ಆರ್‌ಪಿಎಫ್ ಸಿಬ್ಬಂದಿ ಆತನನ್ನು ಹಿಡಿದು ಸುರಕ್ಷಿತವಾಗಿ ಮೇಲೆಳೆದುಕೊಳ್ಳುತ್ತಾರೆ. ಫೆಬ್ರವರಿ 8 ರಂದು ಸಂಜೆ 6:15 ರ ವೇಳೆ ಈ ಘಟನೆ ನಡೆದಿದೆ.

Committed to Service & Care !

A precious life was saved by on duty alert RPF Personnel at Warangal Railway Station, Telangana.

Railways requests all passengers to never board or deboard a moving train. pic.twitter.com/ZzyRvNE0Lt

— Ministry of Railways (@RailMinIndia)

Tap to resize

Latest Videos

 

ಫೆಬ್ರವರಿ 9 ರಂದು ಭಾರತೀಯ ರೈಲ್ವೆ ಇಲಾಖೆ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, 32 ಸೆಕೆಂಡುಗಳ ಈ ವೀಡಿಯೊವನ್ನು ಇದುವರೆಗೆ 22,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ರೈಲ್ವೆ ಇಲಾಖೆ ಸೇವೆ ಮತ್ತು ಕಾಳಜಿಗೆ ಬದ್ಧವಾಗಿದೆ ತೆಲಂಗಾಣದ ವಾರಂಗಲ್ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರತ ಆರ್‌ಪಿಎಫ್ ಸಿಬ್ಬಂದಿ ಅಮೂಲ್ಯ ಜೀವವನ್ನು ಉಳಿಸಿದ್ದಾರೆ. ಚಲಿಸುತ್ತಿರುವ ರೈಲನ್ನು ಎಂದಿಗೂ ಹತ್ತಬೇಡಿ ಅಥವಾ ಇಳಿಯಬೇಡಿ ಎಂದು ರೈಲ್ವೇ ಎಲ್ಲಾ ಪ್ರಯಾಣಿಕರನ್ನು ವಿನಂತಿಸುತ್ತದೆ ಎಂದು ಬರೆದು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಚಲಿಸುತ್ತಿದ್ದ ರೈಲು ಹತ್ತಲು ಹೋದ ಮಹಿಳೆ, ಜಾರಿ ಬಿದ್ದಾಕೆಯನ್ನು ರಕ್ಷಿಸಿದ RPF ಸಿಬ್ಬಂದಿ!

ಪ್ರಯಾಣಿಕನನ್ನು ರಕ್ಷಿಸಿದ ಆರ್‌ಪಿಎಫ್ ಅಧಿಕಾರಿಗಳನ್ನು (RPF officers) ನೆಟ್ಟಿಗರು ಶ್ಲಾಘಿಸಿದ್ದಾರೆ. ಕೆಲವು ನೋಡುಗರು ಪ್ರಯಾಣಿಕರ ತಪ್ಪನ್ನು ಎತ್ತಿ ಹಿಡಿದರೆ, ಮತ್ತೆ ಕೆಲವರು ರೈಲಿಗೆ ಸ್ವಯಂಚಾಲಿತವಾಗಿ ಮುಚ್ಚುವ ಬಾಗಿಲುಗಳನ್ನು ಅಳವಡಿಸಬೇಕು ಎಂದರು.

ಸ್ಥಳೀಯ ಮಾಧ್ಯಮಗಳು, ಹೀಗೆ ರೈಲಿನಿಂದ ಬಿದ್ದು ಪಾರಾದ ಪ್ರಯಾಣಿಕನನ್ನು ಬಿಹಾರದ ( Bihar) ಜಹಾನಾಬಾದ್‌ನ (Jahanabad) 22 ವರ್ಷದ ಪ್ರದುಮ್ ಕುಮಾರ್ (Pradum Kumar) ಎಂದು ಗುರುತಿಸಿವೆ. ಈತ ವಾರಂಗಲ್‌ನ ( Warangal) ಬಾಲಾಜಿ ರೈಸ್ ಮಿಲ್‌ನಲ್ಲಿ (Balaji Rice Mill) ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಈತ ಸೂರತ್‌ಗೆ ಪ್ರಯಾಣಿಸಬೇಕಾಗಿದ್ದ ಈತ ನವಜೀವನ್ ಎಕ್ಸ್‌ಪ್ರೆಸ್ ರೈಲಿಗಾಗಿ ಕಾಯುತ್ತಿದ್ದ. ಆದರೆ, ತಿಳಿಯದೇ  ಈತ ಸಿಕಂದರಾಬಾದ್‌ನಿಂದ (Secunderabad)ವಿಜಯವಾಡಕ್ಕೆ (Vijayawada) ಹೋಗುತ್ತಿದ್ದ ಶಾತವಾಹನ ಎಕ್ಸ್‌ಪ್ರೆಸ್ ( Satavahana Express) ರೈಲು ಹತ್ತಿದ್ದಾರೆ.

ರೈಲಿಗೆ ಸ್ಪರ್ಧೆ ನೀಡಿದ ಕುದುರೆ... ಚಲಿಸುತ್ತಿರುವ ರೈಲುಗಳ ಮಧ್ಯೆ ಓಟ: ವಿಡಿಯೋ ವೈರಲ್‌

ರೈಲಿಗೆ ಹತ್ತಿದ ಮೇಲೆ ಈತನಿಗೆ ತನ್ನು ಬೇರೆ ರೈಲು ಹತ್ತಿದ್ದು ಗೊತ್ತಾಗಿದ್ದು, ಅವಸರದಲ್ಲಿ ರೈಲಿನಿಂದ ಇಳಿಯಲು ಯತ್ನಿಸಿ ಪ್ಲಾಟ್ ಫಾರಂ ಮೇಲೆ ಬಿದ್ದಿದ್ದಾನೆ. ಈ ವೇಳೆ ಈತನನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿಯನ್ನು ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಎಂವಿ ರಾವ್ ( MV Rao)ಮತ್ತು ಹೋಮ್ ಗಾರ್ಡ್ ಅಮಿರಿಶೆಟ್ಟಿ ಮಹೇಶ್ (Amirishetti Mahesh) ಎಂದು ಗುರುತಿಸಲಾಗಿದೆ.

click me!