ಕೇರಳದ ಉದ್ಯೋಗಿಗೆ ಮರ್ಸಿಡಿಸ್‌ ಬೆಂಜ್‌ ಕಾರು ಗಿಫ್ಟ್ ನೀಡಿದ ಮಾಲೀಕ

By Suvarna News  |  First Published Feb 11, 2022, 12:23 PM IST
  • ಉದ್ಯೋಗಿಯ ನಿಷ್ಠೆಗೆ ಮೆಚ್ಚಿ ಕಾರು ಗಿಫ್ಟ್‌ ನೀಡಿದ ಮಾಲೀಕ
  • ಉದ್ಯಮಿ ಶಾಜಿಯಿಂದ ಉದ್ಯೋಗಿ ಅನೀಶ್‌ಗೆ ಸರ್‌ಫ್ರೈಜ್‌ ಗಿಫ್ಟ್
  • ಐಷಾರಾಮಿ ಮರ್ಸಿಡಿಸ್‌ ಬೆಂಜ್‌ ಎಸ್‌ಯುವಿ ಕಾರು ಗಿಫ್ಟ್ 
     

ಕೇರಳ(ಫೆ.11) ಕೆಲಸ ಮಾಡುವ ಸಂಸ್ಥೆಗಳು ಹಬ್ಬದ ಸಂದರ್ಭಗಳಲ್ಲಿ ಉದ್ಯೋಗಿಗಳಿಗೆ ಸಿಹಿ ತಿಂಡಿ, ಬ್ಯಾಗ್‌ಗಳು, ಪೆನ್‌ ಪುಸ್ತಕ, ನೀರಿನ ಬಾಟಲ್‌ ಮುಂತಾದ ವಸ್ತುಗಳನ್ನು ಗಿಫ್ಟ್ ಆಗಿ ನೀಡುತ್ತಾರೆ. ನೀವು ಸಂಸ್ಥೆಯೊಂದರ ಉದ್ಯೋಗಿಯಾಗಿದ್ದರೆ ನಿಮಗೂ ಹೀಗೆ ಗಿಫ್ಟ್‌ ಸಿಕ್ಕಿರಬಹುದು. ಆದರೆ ಕೇರಳದ ಉದ್ಯೋಗಿಯೊಬ್ಬರಿಗೆ ಕಾರೇ ಗಿಫ್ಟ್ ಆಗಿ ಸಿಕ್ಕಿದೆ. ಅದೂ ಐಷಾರಾಮಿ ಮರ್ಸಿಡಿಸ್‌ ಬೆಂಜ್‌ ಎಸ್‌ಯುವಿ ಕಾರು. ಸಿ.ಆರ್. ಅನೀಶ್ ( CR Anish) ಎಂಬುವವರು ಕಳೆದ 22 ವರ್ಷಗಳಿಂದ ಉದ್ಯಮಿ ಎಕೆ ಶಾಜಿ ಅವರೊಂದಿಗೆ ಕಂಪನಿಯ ಮುಖ್ಯ ವ್ಯವಹಾರ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ನಿಷ್ಠೆಗೆ ಧನ್ಯವಾದ ಅರ್ಪಿಸಲು, ಉದ್ಯಮಿ ಶಾಜಿ ಅವರಿಗೆ Mercedes-Benz GLA ಕ್ಲಾಸ್ 220 ಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಶಾಜಿ ಅವರು ತಮ್ಮ ಉದ್ಯೋಗಿ ಮತ್ತು ಅವರ ಕುಟುಂಬಕ್ಕೆ ಕಪ್ಪು ಬಣ್ಣದ SUV ಕಾರನ್ನು ಉಡುಗೊರೆಯಾಗಿ ನೀಡಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.ಆತ್ಮೀಯ ಅನಿ… ಕಳೆದ 22 ವರ್ಷಗಳಿಂದ, ನೀವು ನನಗೆ ಬಲವಾದ ಬೆನ್ನೆಲುಬಾಗಿ ಇದ್ದೀರಿ. ನಿಮ್ಮ ಹೊಸ ಪ್ರಯಾಣದ ಪಾಲುದಾರನನ್ನು ನೀವು ಪ್ರೀತಿಸುತ್ತಿದ್ದೀರಿ ಎಂದು ಭಾವಿಸುತ್ತೇವೆ ಎಂದು ಉದ್ಯಮಿ ಇನ್ಸ್ಟಾಗ್ರಾಮ್‌ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. 

 
 
 
 
 
 
 
 
 
 
 
 
 
 
 

Tap to resize

Latest Videos

undefined

A post shared by Shaji Ak (@shaji_ak)

 

ನಾವು ಪಾಲುದಾರರು, ಅವರು ನನ್ನ ಉದ್ಯೋಗಿ ಅಲ್ಲ. ನಾನು ತುಂಬಾ ಸಂತೋಷವಾಗಿದ್ದೇನೆ. ಇದೊಂದು ಹೆಮ್ಮೆಯ ಕ್ಷಣ. ಕಳೆದ 22 ವರ್ಷಗಳಿಂದ ಅನಿ ನನ್ನೊಂದಿಗಿದ್ದಾರೆ. ಈ ವರ್ಷ ನಾವು ನಮ್ಮ ಪಾಲುದಾರರಿಗೆ ಮತ್ತಷ್ಟು ಕಾರುಗಳನ್ನು ನೀಡಬಹುದೆಂದು ಆಶಿಸೋಣ, ಎಂದು ಶಾಜಿ (Shaji) ಅವರು ತಮ್ಮ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅನೀಶ್ ಅವರಿಗೆ ಹೀಗೆ ಅದ್ದೂರಿ ಉಡುಗೊರೆ ನೀಡಿ ಆಶ್ಚರ್ಯಗೊಳಿಸಿದರು.

 
 
 
 
 
 
 
 
 
 
 
 
 
 
 

A post shared by Shaji Ak (@shaji_ak)

 

ಉಡುಗೊರೆಯ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ಅನೀಶ್, 'ಇದಕ್ಕೆಲ್ಲಾ ನಿಮ್ಮೆಲ್ಲರ ಬೆಂಬಲವೇ ಕಾರಣ. ಭವಿಷ್ಯದಲ್ಲಿಯೂ ನೀವು ನನ್ನೊಂದಿಗೆ ಇರುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದರು. ಉತ್ತರ ಕೇರಳದ (northern Kerala) ಕೋಝಿಕ್ಕೋಡ್ ( Kozhikode) ಜಿಲ್ಲೆಯಲ್ಲಿ ವಾಸಿಸುತ್ತಿರುವ ಅನೀಶ್ ಅವರು ಉದ್ಯಮಿ ಶಾಜಿ ತನ್ನ ರಿಟೇಲ್ ಕಂಪನಿ MyG ಅನ್ನು ಸ್ಥಾಪಿಸುವುದಕ್ಕೂ ಮೊದಲಿನಿಂದಲೂ ಶಾಜಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಉದ್ಯಮಿ ಶಾಜಿ ತನ್ನ ಉದ್ಯೋಗಿಗಳ ನಿಷ್ಠೆಗಾಗಿ ಬಹುಮಾನ ನೀಡುತ್ತಿರುವುದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ಶಾಜಿ ಅವರು ತಮ್ಮ ಆರು ಉದ್ಯೋಗಿಗಳಿಗೆ ತಲಾ ಒಂದು ಕಾರನ್ನು ಉಡುಗೊರೆಯಾಗಿ ನೀಡಿದ್ದರು.

Punjab Elections: ಮೊದಲ ಬಾರಿ ಮತ ಚಲಾಯಿಸುವ ಯುವಕರಿಗೆ ಸಿಗಲಿದೆ ಗಿಫ್ಟ್!

ಸೂರತ್ ಮೂಲದ ವಜ್ರ ವ್ಯಾಪಾರಿ ಘನಶ್ಯಾಮ್ ಭಾಯ್ ಧಂಜಿ ಭಾಯ್ ಡೋಲಾಕಿಯಾ ಅವರು 2018ರಲ್ಲಿ  ಮೂವರು ಉದ್ಯೋಗಿಗಳಿಗೆ ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. . 2014 ರ ಆರಂಭದಲ್ಲಿ ಅವರು ದೀಪಾವಳಿ ಬೋನಸ್‌ನಲ್ಲಿ ತಮ್ಮ ಉದ್ಯೋಗಿಗಳಿಗೆ 500 ಫ್ಲಾಟ್‌ಗಳು, 525 ವಜ್ರದ ಆಭರಣಗಳನ್ನು ನೀಡಿದ್ದರು.

Valentine Day offer ಪ್ರೀತಿ ಪಾತ್ರರಿಗೆ ನೀಡಲು ವಿಶೇಷ ಗಿಫ್ಟ್ ಆಫರ್ ಘೋಷಿಸಿದ VI!

ಸೂರತ್ ಮೂಲದ ವಜ್ರ ವ್ಯಾಪಾರಿ ಘನಶ್ಯಾಮ್ ಭಾಯ್ ಧಂಜಿ ಭಾಯ್ ಧೋಲಾಕಿಯಾ ಅವರು 2018ರಲ್ಲಿ  ಮೂವರು ಉದ್ಯೋಗಿಗಳಿಗೆ ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. . 2014 ರ ಆರಂಭದಲ್ಲಿ ಅವರು ದೀಪಾವಳಿ ಬೋನಸ್‌ನಲ್ಲಿ ತಮ್ಮ ಉದ್ಯೋಗಿಗಳಿಗೆ 500 ಫ್ಲಾಟ್‌ಗಳು, 525 ವಜ್ರದ ಆಭರಣಗಳನ್ನು ನೀಡಿದ್ದರು. ಹರೇ ಕೃಷ್ಣ ಎಕ್ಸ್‌ಪೋರ್ಟ್ ಸಂಸ್ಥೆಯ ಮಾಲೀಕರಾಗಿರುವ ಸಾವ್ಜಿ ಧೋಲಾಕಿಯಾ ಅವರು ತಮ್ಮ ಉದ್ಯೋಗಿಗಳಿಗೆ ಬರೋಬ್ಬರಿ 1600 ಕಾರುಗಳನ್ನು ಗಿಫ್ಟ್ ಆಗಿ ನೀಡಿದ್ದು, ಕಾರು ಆಯ್ಕೆಯ ಬದಲಾಗಿ ಕೆಲವು ಉದ್ಯೋಗಿಗಳಿಗೆ ಫ್ಲ್ಯಾಟ್‌ಗಳನ್ನು ಹಸ್ತಾಂತರ ಮಾಡಿದ್ದರು.

click me!