ಫರಿದಾಬಾದ್(ಫೆ.11): ತಾಯಂದಿರು ತ್ಯಾಗಕ್ಕೆ ಹೆಸರುವಾಸಿ. ತನಗೇನಾದರೂ ಪರವಾಗಿಲ್ಲ. ಆದರೆ ತನ್ನ ಕರುಳಕುಡಿಗೆ ಏನೂ ಆಗಬಾರದು ಎಂದೇ ಬಯಸುವ ತಾಯಿ ಮಕ್ಕಳಿಗಾಗಿ ಏನು ಮಾಡಲು ಸಿದ್ಧಳಿರುತ್ತಾಳೆ. ಆದರೆ ಇಲ್ಲೊಬಳು ತಾಯಿ ತಾನು ಒಣ ಹಾಕಿದ ಸಾರಿ ಕೆಳಗಿನ ಮನೆಯ ಬಾಲ್ಕನಿಗೆ ಬಿತ್ತೆಂದು 10ನೇ ಮಹಡಿಯ ಬಾಲ್ಕನಿಯಿಂದ ಬೆಡ್‌ಶಿಟ್ ಕಟ್ಟಿ ಅದರಲ್ಲಿ ಮಗನನ್ನು ನೇತು ಹಾಕಿ ಕೆಳಗಿಳಿಯಲು ಬಿಟ್ಟಿದ್ದಾಳೆ. ಈ ಸಾಹಸದಲ್ಲಿ ಮಗನಿಗೆ ಏನು ಆಘಾತ ಆಗಿಲ್ಲದಿದ್ದರೂ ಮಹಿಳೆಯ ಈ ದುಸ್ಸಾಹಸದ ಬಗ್ಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ.
ಬಹುಮಹಡಿ ಕಟ್ಟಡಗಳ ಬಾಲ್ಕನಿಗಳಿಂದ ಮಕ್ಕಳು ಅಚಾನಕ್ ಆಗಿ ಬೀಳುವ ಎಷ್ಟು ಘಟನೆಗಳನ್ನು ನೀವು ಈ ಹಿಂದೆ ಕೇಳಿರಬಹುದು. ಇಂತಹ ಘಟನೆಗಳ ಬಗ್ಗೆ ಅರಿವಿದ್ದು ಕೂಡ ತಾಯಿಯೊಬ್ಬಳು. ಸೀರೆಯ ಸಲುವಾಗಿ ಹೀಗೆ ತನ್ನ ಕಂದನನ್ನು ದುಸ್ಸಾಹಸಕ್ಕೆ ತಳ್ಳಿರುವುದನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹರ್ಯಾಣದ ಫರಿದಾಬಾದ್‌ನಲ್ಲಿ(Faridabad) ಈ ಘಟನೆ ನಡೆದಿದೆ.
ಲೇಸ್ ಚಿಪ್ಸ್ ಕವರ್‌ನಿಂದ ಸಾರಿ ತಯಾರಿಸಿದ ನಾರಿ
ಈ ವಿಡಿಯೋದಲ್ಲಿ ಕಾಣಿಸುವಂತೆ ತಾಯಿ ಮನೆಯಲ್ಲಿದ್ದ ಇನ್ನಿಬರು, ಎಲ್ಲರೂ ಹೆಂಗಸರೇ ಸೇರಿ ಬಾಲ್ಕನಿಯ ರಾಡ್‌ಗೆ ಬೆಡ್‌ಶಿಟ್ ಕಟ್ಟಿ ಅದರ ಮೂಲಕ ಅವರ ಮಗ ಕೆಳಗಿನ ಬಾಲ್ಕನಿಗೆ ಇಳಿಯುವಂತೆ ಮಾಡುತ್ತಾರೆ. ಕೆಳಗೆ ಇಳಿದ ಬಾಲಕ ಸೀರೆಯನ್ನು ಎತ್ತಿಕೊಂಡು ವಾಪಸ್ ಬೆಡ್‌ಶಿಟ್ ನಲ್ಲಿ ನೇತಾಡಿಕೊಂಡು ಮೇಲೆ ಬರುತ್ತಾನೆ. ಮೇಲೆ ಬಂದ ಆತನನ್ನುತಾಯಿ ಹಾಗೂ ಇನ್ನೊಬ್ಬ ಮಹಿಳೆ ಎತ್ತಿ ಬಾಲ್ಕನಿಯೊಳಗೆ ಸೇರಿಸಿಕೊಳ್ಳುತ್ತಾರೆ.
ಕಳೆದ ವಾರ ಫರಿದಾಬಾದ್‌ನ ಸೆಕ್ಟರ್ 82ರ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯವನ್ನು ಎದುರಿನ ಕಟ್ಟಡದ ನಿವಾಸಿಯೊಬ್ಬರು ಚಿತ್ರೀಕರಣ ಮಾಡಿದ್ದಾರೆ. ನೆರೆಹೊರೆಯವರ ಪ್ರಕಾರ, ಮಹಿಳೆ ಬೀಗ ಹಾಕಿದ ಕೆಳಗಿನ ಮನೆಯ ಬಾಲ್ಕನಿಯಿಂದ ತನ್ನ ಸೀರೆಯನ್ನು ಮರಳಿ ಪಡೆಯುವ ಬಗ್ಗೆ ಯಾರ ಸಹಾಯ ಅಥವಾ ಸಲಹೆಯನ್ನು ಪಡೆಯಲಿಲ್ಲ ಮತ್ತು ಏಕಪಕ್ಷೀಯವಾಗಿ ಹೀಗೆ ಮಗನನ್ನು ಇಳಿಸುವ ಮೂಲಕ ಮಗನ ಜೀವಕ್ಕೆ ಅಪಾಯ ವೊಡ್ಡಿದ್ದಳು.
Saree in Winter: ಚಳಿಗಾಲದಲ್ಲಿ ವಿಭಿನ್ನವಾಗಿ ಸೀರೆ ಧರಿಸಿ ಟ್ರೆಂಡಿಯಾಗಿ ಕಾಣಿ
ಇದು ಫೆಬ್ರವರಿ 6 ಅಥವಾ 7 ರಂದು ಸಂಭವಿಸಿದೆ. ಮಹಿಳೆ ಹೀಗೆ ಮಾಡುವ ಬದಲು ಈ ಫ್ಲಾಟ್‌ನ್ನು ನಿರ್ವಹಿಸುವವರ ಸಹಾಯ ಕೆಳಬಹುದಿತ್ತು ಎಂದು ನೆರೆಹೊರೆಯವರು ಹೇಳಿದ್ದಾರೆ. ಇನ್ನು ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳು ಮಹಿಳೆಯನ್ನು ಹೀಗೇಕೆ ಮಾಡಿದ್ದೀರಿ ಎಂದು ಕೇಳಿದ್ದು, ಈ ವೇಳೆ ಮಹಿಳೆ ಘಟನೆಯ ಬಗ್ಗೆ ವಿಷಾದಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ