ಭಯೋತ್ಪಾದಕ ಎಂದು ಬೆಂಗಳೂರು-ಲಖನೌ ವಿಮಾನ ಹತ್ತಿ ಬೆದರಿಸಿದ ಪ್ರಯಾಣಿಕ, ಪೊಲೀಸ್ ವಶಕ್ಕೆ!

Published : Feb 22, 2024, 08:24 PM IST
ಭಯೋತ್ಪಾದಕ ಎಂದು ಬೆಂಗಳೂರು-ಲಖನೌ ವಿಮಾನ ಹತ್ತಿ ಬೆದರಿಸಿದ ಪ್ರಯಾಣಿಕ, ಪೊಲೀಸ್ ವಶಕ್ಕೆ!

ಸಾರಾಂಶ

ಇನ್ನೇನು ವಿಮಾನ ಟೇಕ್ ಆಫ್ ಆಗಬೇಕು ಅನ್ನುವಷ್ಟರಲ್ಲೇ ಪ್ರಯಾಣಿಕನೊಬ್ಬ ಭಯೋತ್ಪಾದಕ ಎಂದು ಬೆದರಿಕೆ ಹಾಕಿದ್ದಾನೆ. ಕುಳಿತಿದ್ದ ಇತರ ಪ್ರಯಾಣಿಕರ ಎದೆಬಡಿತ ಹೆಚ್ಚಾಗಿದೆ. ಆದರೆ ತಕ್ಷಣವೇ ಬೆಂಗಳೂರು ವಿಮಾನ ನಿಲ್ದಾಣದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು(ಫೆ.22) ಬೆಂಗಳೂರು ಲಖನೌ ವಿಮಾನ ಟೇಕ್ ಆಫ್ ಆಗಲು ಸಜ್ಜಾಗಿತ್ತು. ಎಲ್ಲಾ ಪ್ರಯಾಣಿಕರು ಕುಳಿತಿದ್ದರು. ತಕ್ಷಣವೇ ಪ್ರಯಾಣಿಕನೋರ್ವ ತಾನು ಭಯೋತ್ಪಾದಕ, ಉಗ್ರ ಸಂಘಟನೆ ಆದೇಶದಂತೆ ವಿಮಾನ ಹತ್ತಿದ್ದೇನೆ. ಈ ವಿಮಾನ ಲಖನೌ ತಲುಪಲ್ಲ ಎಂದು ಬೆದರಿಸಿದ್ದಾನೆ. ಇತರ ಪ್ರಯಾಣಿಕರ ಆತಂಕ ಹೆಚ್ಚಾಗಿದೆ. ಇತ್ತ ವಿಮಾನ ಸಿಬ್ಬಂದಿಗಳು ತಕ್ಷಣವೇ ಭದ್ರತಾ ಪಡೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ವಿಮಾನ ನಿಲ್ದಾಣದ ಪೊಲೀಸರು ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇತ್ತ ವಿಮಾನ ಯಾವುದೇ ಅಡ್ಡಿ ಆತಂಕವಿಲ್ಲದೆ ಟೇಕ್ ಆಫ್ ಆದ ಘಟನೆ ಫೆಬ್ರವರಿ 17ರಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಏರ್ ಇಂಡಿಯಾ ವಿಮಾನ 152731 ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್‌ಗೆ ಸಜ್ಜಾಗಿತ್ತು. ಸಮಯ ರಾತ್ರಿ 10.40ರ ವೇಳೆ ಎಲ್ಲಾ ಪ್ರಕ್ರಿಯೆ ಮುಗಿದು ಪ್ರಯಾಣಿಕರು ವಿಮಾನದಲ್ಲಿ ಕುಳಿತಿದ್ದರು. ಇನ್ನೇನು ವಿಮಾನ ಟೇಕ್ ಆಫ್ ಆಗಬೇಕು ಅನ್ನುವಷ್ಟರಲ್ಲಿ 20ರ ಹರೆಯದ ಪ್ರಯಾಣಿಕ ಆದರ್ಶ್ ಕುಮಾರ್ ಸಿಂಗ್ ಬೆದರಿಕೆ ಹಾಕಿದ್ದಾನೆ. ತಾನೊಬ್ಬ ಭಯೋತ್ಪಾದಕ, ಈ ವಿಮಾನ ಲಖನೌ ತಲುಪಲು ಬಿಡುವುದಿಲ್ಲ. ಉಗ್ರ ಸಂಘಟನೆ ಆದೇಶದಂತೆ ನಾನು ಈ ವಿಮಾನ ಹತ್ತಿದ್ದೇನೆ ಎಂದು ಕಿರುಚಾಡಿದ್ದಾನೆ.

ಸಾವಿನ ದವಡೆಯಿಂದ ಬಚಾವ್ ಆಗಿ ಬಂದ ಮಾರ್ಟಿನ್‌ ಚಿತ್ರತಂಡ : ಶ್ರೀನಗರಕ್ಕೆ ತೆರಳುತ್ತಿದ್ದಾಗ ಅವಘಡ

ಈತನ ಕಿರುಚಾಟ, ಭಯೋತ್ಪಾದಕ ಅನ್ನೋ ಬೆದರಿಕೆಯಿಂದ ಇತರ ಪ್ರಯಾಣಿಕರು ಆತಂಕಗೊಂಡಿದ್ದಾರೆ. ವಿಮಾನದೊಳಗೆ ಪರಿಸ್ಥಿತಿ ಬದಲಾಗಿತ್ತು. ಆದರೆ ವಿಮಾನ ಸಿಬ್ಬಂದಿಗಳು ತಕ್ಷಣವೇ ಭದ್ರತಾ ಪಡೆಗೆ ಸೂಚನೆ ನೀಡಿದ್ದಾರೆ. ಭದ್ರತಾ ಪಡೆಗಳು ಆಗಮಿಸಿ ಆದರ್ಶ್ ಕುಮಾರ್ ಸಿಂಗ್‌ನನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ಆದರ್ಶ್ ಸಿಂಗ್‌ನನ್ನು ಬಲವಂತವಾಗಿ ವಿಮಾನದಿಂದ ಹೊರತಂದಿದ್ದಾರೆ.

ವಿಚಾರಣೆ ವೇಳೆ ಆದರ್ಶ್ ಸಿಂಗ್ ಮಾನಸಿಕವಾಗಿ ಅಸ್ವಸ್ಥನಾಗಿರುವ ಮಾಹಿತಿ ಬಯಲಾಗಿದೆ. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಆದರೆ ಆದರ್ಶ್ ಸಿಂಗ್ ವಿರುದ್ದ ಪ್ರಕರಣ ದಾಖಲಾಗಿದೆ. ಎಲ್ಲಾ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ವಿಮಾನದಲ್ಲಿ ತಾಂತ್ರಿಕ ಸಮಸ್ಯೆ: ಸಾವಿನ ಬಾಯಿಗೆ ಹೋಗಿ ಬಂದ ಅನುಭವ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!