Assembly Elections: ಪಿಕೆ ಜೊತೆ ಮಾತುಕತೆ ವಿಫಲಗೊಂಡಿದ್ದೇಕೆ? ಗುಟ್ಟು ಬಿಚ್ಚಿಟ್ಟ ಪ್ರಿಯಾಂಕಾ

By Suvarna News  |  First Published Jan 22, 2022, 9:32 AM IST

* ಪ್ರಶಾಂತ್ ಕಿಶೋರ್ ಜೊತೆ ಮುರಿದು ಬಿದ್ದ ಕಾಂಗ್ರೆಸ್ ಮಾತುಕತೆ

* ಮಾತುಕತೆ ಅರ್ಧದಲ್ಲೇ ನಿಂತಿದ್ದೇಕೆ?

* ವಾಸ್ತವ ವಿಚಾರ ಬಹಿರಂಗಪಡಿಸಿದ ಪ್ರಿಯಾಂಕಾ ಗಾಂಧಿ


ನವದೆಹಲಿ(ಜ.22): ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರೊಂದಿಗಿನ ಮಾತುಕತೆ ನಡೆಸಿದ್ದು ಹೌದು ಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಒಂದು ಹಂತದಲ್ಲಿ ಪ್ರಶಾಂತ್ ಕಾಂಗ್ರೆಸ್ ಸದಸ್ಯತ್ವ ಪಡೆಯಲು ಮುಂದಾಗಿದ್ದರು, ಆದರೆ ನಂತರ ಇಬ್ಬರ ನಡುವಿನ ಮಾತುಕತೆ ಫಲಕಾರಿಯಾಗದೆ ಕಾಂಗ್ರೆಸ್ ಸದಸ್ಯತ್ವವನ್ನು ತೆಗೆದುಕೊಳ್ಳಲಿಲ್ಲ ಎಂದು ಅವರು ಹೇಳಿದರು.

ತಮ್ಮ ಪಕ್ಷ ಮತ್ತು ಪ್ರಶಾಂತ್ ನಡುವೆ ಹಲವು ಸುತ್ತಿನ ಮಾತುಕತೆ ನಡೆದರೂ ಹಲವು ವಿಚಾರಗಳಲ್ಲಿ ಒಮ್ಮತದ ಕೊರತೆಯಿಂದಾಗಿ ಅವರೊಂದಿಗೆ ಮಾತುಕತೆ ನಡೆಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಖಾಸಗಿ ಸುದ್ದಿ ವಾಹಿನಿಯೊಂದರೊಂದಿಗಿನ ಸಂವಾದದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಹಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ ಎಂದು ನಾನು ಭಾವಿಸುತ್ತೇನೆ. ಕೆಲವು ಅವರಿಗೆ ಇಷ್ಟವಾಗದಿದ್ದರೆ, ಇನ್ನು ಕೆಲ ವಿಚಾರಗಳು ನಮಗೆ ಇಷ್ಟವಾಗಲಿಲ್ಲ. ಈ ಬಗ್ಗೆ ವಿವರವಾಗಿ ಹೇಳಲು ನಾನು ಬಯಸುವುದಿಲ್ಲ ಆದರೆ ಕೆಲವು ವಿಷಯಗಳ ಬಗ್ಗೆ ನಮಗೆ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಕೆಲಸಗಳು ಕಾರ್ಯರೂಪಕ್ಕೆ ಬರಲಿಲ್ಲ ಎಂದಿದ್ದಾರೆ.

Tap to resize

Latest Videos

ಇದೇ ವೇಳೆ ಕಾಂಗ್ರೆಸ್‌ಗೆ ಹೊರಗಿನವರನ್ನು ಕರೆತರಬಾರದು ಎಂಬ ವಿಷಯವನ್ನು ಸಾರಾಸಗಟಾಗಿ ತಳ್ಳಿಹಾಕಿದ ಅವರು, ನಾವು ಅವರ ಜತೆ ಹಲವು ಬಾರಿ ಮಾತನಾಡಿದ್ದೇವೆ ಎಂಬುವುದು ಸತ್ಯವಲ್ಲ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಶಾಂತ್ ಕಿಶೋರ್ ಅವರು ಗಾಂಧಿ ಕುಟುಂಬದ ಮೂವರು ಪ್ರಮುಖರಾದ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ.

ಈ ಸಭೆಗಳ ಚಿತ್ರಗಳು ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಪ್ರಶಾಂತ್ ಕಿಶೋರ್ ಈಗ ಕಾಂಗ್ರೆಸ್‌ನ ಭಾಗವಾಗಬಹುದೆಂದು ಚರ್ಚಿಸಲಾಗಿದೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಪಾತ್ರವನ್ನು ವಹಿಸಲಿದೆ ಎಂದು ಪ್ರಶಾಂತ್ ಕಿಶೋರ್ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದು ಗಮನಾರ್ಹವಾಗಿದೆ, ಆದರೆ ಅದರ ಪ್ರಸ್ತುತ ನಾಯಕತ್ವದಿಂದ ಅದು ಸಾಧ್ಯವಾಗುತ್ತಿಲ್ಲ ಎಂದೂ ಉಲ್ಲೇಖಿಸಿದ್ದರು. 

click me!