
ಔರಂಗಬಾದ್(ಮಾ.08): ರಾಜ್ಯಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಬೆನ್ನಲ್ಲೇ, ಇದರ ನಿಯಂತ್ರಣಕ್ಕಾಗಿ ಔರಂಗಬಾದ್ ಜಿಲ್ಲಾಡಳಿತ ಮಾ.11ರಿಂದ ಏ.4ರವರೆಗೆ ಭಾಗಶಃ ಲಾಕ್ಡೌನ್ ಜಾರಿ ಮಾಡಲು ನಿರ್ಧರಿಸಿದೆ.
ಈ ಪ್ರಕಾರ ವಾರಾಂತ್ಯದಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಮಾರುಕಟ್ಟೆಗಳು, ಮಾಲ್ಗಳು, ಸಿನಿಮಾ ಥಿಯೇಟರ್ ಸೇರಿದಂತೆ ಇನ್ನಿತರ ಇನ್ನಿತರ ಮನೋರಂಜನೆಯ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ಶನಿವಾರ ಮತ್ತು ಭಾನುವಾರವು ವಿಶ್ವ ಪ್ರಸಿದ್ಧ ಪಾರಂಪರಿಕ ಐತಿಹಾಸಿಕ ಕ್ಷೇತ್ರಗಳಾದ ಅಜಂತಾ ಮತ್ತು ಎಲ್ಲೋರಾ ಸೇರಿದಂತೆ ಜಿಲ್ಲೆಯಲ್ಲಿರುವ ಇನ್ನಿತರ ಪ್ರವಾಸಿ ತಾಣಗಳು ನಿಷ್ಕಿ್ರಯವಾಗಿರಲಿವೆ. ಶಾಲಾ, ಕಾಲೇಜುಗಳು ಸೇರಿ ಇನ್ನಿತರ ಶೈಕ್ಷಣಿಕ ಸಂಸ್ಥೆಗಳು ಬಂದ್ ಆಗಿರಲಿವೆ.
ಜೊತೆಗೆ ಈ ಅವಧಿಯಲ್ಲಿ ಕಲ್ಯಾಣ ಮಂಟಗಳು ಮತ್ತು ಬ್ಯಾಂಕ್ವೆಟ್ ಹಾಲ್ಗಳಲ್ಲಿ ಮದುವೆಗಳಿವೆ ಅವಕಾಶವಿರಲ್ಲ. ಆದರೆ ನೋಂದಾಯಿತ ಮದುವೆಗಳಿಗೆ ವಿನಾಯ್ತಿ ನೀಡಲಾಗಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ