ವಿಪಕ್ಷಕ್ಕೆ ಮತ್ತೊಂದು ಶಾಕ್, 33 ಸಂಸದರು ಲೋಕಸಭೆಯಿಂದ ಅಮಾನತು!

By Suvarna NewsFirst Published Dec 18, 2023, 3:49 PM IST
Highlights

ಲೋಕಸಭೆಯಲ್ಲಿ ಭದ್ರತಾ ಲೋಪ ವಿಚಾರ ಮುಂದಿಟ್ಟು ಗದ್ದಲ ನಡೆಸುತ್ತಿರುವ ವಿಪಕ್ಷಗಳಿಂದ ಪ್ರತಿ ದಿನ ಹಿನ್ನಡೆಯಾಗುತ್ತಿದೆ. ಇದೀಗ ಲೋಕಸಭೆಯಿಂದ 33 ಸಂಸದರು ಅಮಾನತ್ತಾಗಿದ್ದಾರೆ.
 

ನವದೆಹಲಿ(ಡಿ.18) ಲೋಕಸಭೆಯಲ್ಲಿನ ಭದ್ರತಾ ಲೋಪ ವಿಚಾರ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಭಾರಿ ಗದ್ದಲ ನಡೆಯುತ್ತಿದೆ. ವಿಪಕ್ಷ ನಾಯಕರು ಭದ್ರತಾ ಲೋಪ ವಿಚಾರ ಮುಂದಿಟ್ಟು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸದನದ ಬಾವಿಯೊಳಗೆ ಭಾರಿ ಗದ್ದಲ ನಡೆಸಿದ್ದಾರೆ. ಈಗಾಗಲೇ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಸೇರಿ 2 ಸುತ್ತಿನ ಅಮಾನತು ನಡೆದಿದೆ. ಇದೀಗ 3ನೇ ಸುತ್ತಿನಲ್ಲಿ ಬರೋಬ್ಬರಿ 33 ವಿಪಕ್ಷದ ಸಂಸದರನ್ನು ಅಮಾನತು ಮಾಡಿದ್ದಾರೆ. 

ಲೋಕಸಭೆಯ ಭದ್ರತಾ ಲೋಪ ವಿಚಾರದಲ್ಲಿ ಪ್ರತಿಭಟನೆ ನಡೆಸಿ ಶಿಸ್ತು ಉಲ್ಲಂಘಿಸಿದ ವಿಪಕ್ಷ ನಾಯಕರನ್ನು ಕಳೆದ ವಾರ ಅಮಾನತು ಮಾಡಲಾಗಿತ್ತು. ಕಳೆದ ಒಟ್ಟು 13 ವಿಪಕ್ಷ ಸಂಸದರನ್ನು ಅಮಾನತು ಮಾಡಲಾಗಿತ್ತು. ಇದೀಗ 33 ಸಂಸದರು ಅಮಾನತು ಮಾಡಲಾಗಿದೆ. ಲೋಕಸಭೆಯ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ಪ್ರಮುಖ ನಾಯಕರನ್ನು ಅಮಾನತು ಮಾಡಲಾಗಿದೆ.  

 

ದೇಶಕ್ಕೆ ದೇಣಿಗೆ ಆರಂಭಿಸಿದ ಕಾಂಗ್ರೆಸ್, ಬಿಜೆಪಿ ಹೆಸರಿನಲ್ಲಿದೆ ಡೋನೇಶನ್ ವೆಬ್‌ಸೈಟ್!

ಅಶಿಸ್ತಿನ ನಡವಳಿಕೆಯಿಂದ ಕಳೆದ ವಾರ ಅಮಾನತ್ತಾಗಿರುವ 13 ಸಂಸದರು ಕುರಿತ ನಿರ್ಧಾರವನ್ನು ಲೋಕಸಭೆ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಲೋಕಸಭೆಯಲ್ಲಿ ನಡೆದಿರುವ ಅತೀ ದೊಡ್ಡ ಭದ್ರತಾ ಲೋಪ ವಿಚಾರ ಕುರಿತು ಅಮಿತ್ ಶಾ ಉತ್ತರ ನೀಡಬೇಕು. ಸದನದಲ್ಲಿ ಅಮಿತ್ ಶಾ ಉತ್ತರಿಸಬೇಕು ಎಂದು ವಿಪಕ್ಷ ಸಂಸದರು ಪಟ್ಟು ಹಿಡಿದು ಗದ್ದಲ ಆರಂಭಿಸಿದ್ದರು. ಗದ್ದಲ ತೀವ್ರಗೊಳ್ಳಿುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಹಲವು ಸೂಚನೆ ನೀಡಿದ್ದಾರೆ. ಆದರೆ ಪ್ರತಿಭಟನೆ ಮುಂದುವರಿದಿದೆ. ಇಷ್ಟೇ ಅಲ್ಲ ಗದ್ದಲ ಮುಂದುವರಿಸಿದ ಸಂಸದರನ್ನು ಓಂ ಬಿರ್ಲಾ ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಿದ್ದಾರೆ.  ಅಮಾನತು ಪ್ರಕರಣ ಪ್ರಜಾಸತ್ತೆಗೇ ಕಪ್ಪುಚುಕ್ಕೆ’ ಎಂದು ವಿಪಕ್ಷ ನಾಯಕರು ಕಿಡಿ ಕಾರಿದ್ದಾರೆ.

ಕಳೆದ ವಾರ ಲೋಕಸಭೆ ಸ್ಪೀಕರ್‌ ನಾಲ್ವರು ಕಾಂಗ್ರೆಸ್‌ ಸದಸ್ಯರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಿದ್ದರು. ಕಾಂಗ್ರೆಸ್‌ನ ದಕ್ಷಿಣ ಭಾರತದ ರಾಜ್ಯಗಳ ಸಂಸದರಾದ ಮಾಣಿಕ್ಯಂ ಟ್ಯಾಗೋರ್‌, ಟಿ.ಎನ್‌. ಪ್ರತಾಪನ್‌, ಜ್ಯೋತಿಮಣಿ ಹಾಗೂ ರಮ್ಯಾ ಹರಿದಾಸ್‌ ಅವರೇ ಸಸ್ಪೆಂಡ್‌ ಆದ ಕಾಂಗ್ರೆಸ್‌ ಸಂಸದರು. ಬಳಿಕ ತಮ್ಮ ಅಮಾನತು ಖಂಡಿಸಿ ಸಂಸತ್‌ ಆವರಣದ ಗಾಂಧಿ ಪ್ರತಿಮೆ ಮುಂದೆ ಅವರು ಪ್ರತಿಭಟನೆ ನಡೆಸಿದ್ದರು. 

ಸಂಸಂತ್ ಒಳಗೆ 3 ಸಂಚು ರೂಪಿಸಿದ್ದಾಗಿ ಬಾಯ್ಬಿಟ್ರಾ ಆರೋಪಿಗಳು..? ಬಗೆದಷ್ಟು ಬಯಲಾಗ್ತಿದೆ ಭಯಾನಕ ಸತ್ಯ !
 

click me!