ಭಾರತ-ಚೀನಾ ಗಡಿ ಸಮಸ್ಯೆಗೆ ಕಳೆದ ಕೆಲ ತಿಂಗಳುಗಳಿಂದ ನಡೆಯುತ್ತಿದೆ. ಆದರೆ ಇದಕ್ಕಾಗಿ ಚೀನಾ ಬರೋಬ್ಬರಿ 3 ವರ್ಷಗಳ ಹಿಂದೆ ಪ್ಲಾನ್ ಮಾಡಿತ್ತು. 2017ರಲ್ಲಿ ಡೋಕ್ಲಾಂ ಬಿಕ್ಕಟ್ಟಿನ ಬೆನ್ನಲ್ಲೇ ಚೀನಾ ರಹಸ್ಯ ಪ್ಲಾನ್ ರೆಡಿ ಮಾಡಿಕೊಂಡಿದೆ. ಇದಕ್ಕಾಗಿ ಚೀನಾ ಸೇನೆ ತಮ್ಮ ನೆಲೆಗಳನ್ನು ದ್ವಿಗುಣಗೊಳಿಸಿದೆ. ಇದೇ ಇಂದಿನ ಬಿಕ್ಕಟ್ಟಿಗೆ ಕಾರಣವಾಗಿದೆ.
ನವದೆಹಲಿ(ಸೆ.22): ಗಡಿಯಲ್ಲಿ ವಾಸ್ತರ ಗಡಿ ರೇಖೆ ಬದಲಿಸುವ ಪ್ರಯತ್ನ, ಅತಿಕ್ರಮ ಪ್ರವೇಶ ಹಾಗೂ ಯಥಾ ಸ್ಥಿತಿ ಕಾಪಾಡಿಕೊಳ್ಳುವ ನಿಯಮ ಉಲ್ಲಂಘಿಸಿರುವ ಚೀನಾ ಸೇನೆ, ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಇದರಿಂಗ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಣವಾಗಿದೆ. ಗಲ್ವಾಣ್ ಕಣಿವೆಯಲ್ಲಿ ಚೀನಾ ಆಕ್ರಮಣದಿಂದ ಭಾರತೀಯ 20 ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲಾ ಭಾರತೀಯ ಸೈನಿಕರ ಅತಿಕ್ರಮ ಪ್ರವೇಶ ಕಾರಣ ಎಂದು ಚೀನಾ ಕತೆ ಹೇಳುತ್ತಿದೆ. ಆದರೆ ಇಂದಿನ ಗಡಿ ಬಿಕ್ಕಟ್ಟಿಗೆ ಚೀನಾ 3 ವರ್ಷದ ಹಿಂದೆ ಪ್ಲಾನ್ ಮಾಡಿತ್ತು
ಗಡಿ ಸಂಘರ್ಷ ನಡುವೆ ಚಳಿಗಾಲದ ಪಹರೆ ಸವಾಲು; ಭಾರತೀಯ ಸೇನೆಗೆ ವಿಶೇಷ ಟೆಂಟ್!
2017ರಲ್ಲಿ ಭಾರತ ಹಾಗೂ ಚೀನಾ ಗಡಿಯಾದ ಡೋಕ್ಲಾಂನಲ್ಲಿ ಚೀನಾ ಕಿರಿಕ್ ಮಾಡಿತ್ತು. ಯಥಾ ಸ್ಥಿತಿ ನಿಯಮ ಉಲ್ಲಂಘಿಸಿದ ಚೀನಾ, ಗಡಿ ವಾಸ್ತವ ನಿಯಂತ್ರಣ ರೇಖೆ ಬಳಿ ರಸ್ತೆ ಹಾಗೂ ಇತರ ಕಾಮಗಾರಿ ಆರಂಭಿಸಿತು. ಇಷ್ಟೇ ಅಲ್ಲ ವಾಸ್ತವ ರೇಖೆ ಬದಲಿಸುವ ಯತ್ನ ಮಾಡಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಭಾರತೀಯ ಸೇನೆ ಚೀನಾಗೆ ಎಚ್ಚರಿಕೆ ನೀಡಿತ್ತು. ಇದರಿಂದ ಡೋಕ್ಲಾಂ ಬಿಕ್ಕಟ್ಟು ಸೃಷ್ಟಿಯಾಗಿತ್ತು. 2017ರ ಬಿಕ್ಕಟ್ಟಿನಿಂದ ಚೀನಾ ಗಡಿಯಲ್ಲಿ ತನ್ನ ವಾಯು ನೆಲೆ, ಏರ್ ಡಿಪೆನ್ಸ್, ಹೆಲಿಪೋರ್ಟ್ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿತು.
ಲಡಾಖ್ ಗಡಿ ಸಂಘರ್ಷ; 6 ವಲಯ ಪ್ರದೇಶ ವಶಪಡಿಸಿಕೊಂಡ ಭಾರತೀಯ ಸೇನೆ!...
ಭಾರತವನ್ನು ಎದುರಿಸಲು ಗಡಿಯಲ್ಲಿ ಹೆಚ್ಚಿನ ಸೈನಿಕರು, ಶಸ್ತಾಸ್ತ್ರ, ಯುದ್ಧ ವಿಮಾನಗಳ ಅವಶ್ಯಕತೆ ಇದೆ. ಇಷ್ಟೇ ಅಲ್ಲ ತಕ್ಷಣವೇ ಪೂರೈಕೆಯಾಗಬೇಕು ಅನ್ನೋದು ಚೀನಾ ನಿಲುವಾಗಿತ್ತು. ಹೀಗಾಗಿ ಕಳೆದ 3 ವರ್ಷಗಳಿಂದ ವಾಯು ನೆಲೆ, ಸೇನಾ ನೆಲೆ ಹಾಗೂ ಸೇನಾ ಹೆಲಿಕಾಪ್ಟರ್ ನೆಲೆಗಳನ್ನು ನಿರ್ಮಾಣ ಮಾಡಿತು. ಚೀನಾ ಗಡಿಯೊಳಗೆ ಎಲ್ಲಾ ನೆಲೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದ ಚೀನಾ ಸೇನೆ, ಭಾರತದ ಗಡಿ ರೇಖೆ ಬದಲಿಸಿ ಅಲ್ಲೂ ಕೂಡ ರಸ್ತೆ ನಿರ್ಮಾಣ ಹಾಗೂ ವಾಯು ನೆಲೆ ನಿರ್ಮಾಣಕ್ಕೆ ಚೀನಾ ಮುಂದಾಗಿತ್ತು. ಇದು ಲಡಾಖ್ ಬಿಕ್ಕಟ್ಟಿಗೆ ಕಾರಣವಾಯಿತು.
ಭಾರತದ ಸೈನಿಕರ ಗಮನ ಬೇರೆಡೆ ಸೆಳೆಯಲು ಪಂಜಾಬಿ, ಹಿಂದಿ ಹಾಡು ಹಾಕಿ ಚೀನಾ ಟಾಂಗ್!
ಡೋಕ್ಲಾಂ ಬಿಕ್ಕಟ್ಟಿನ ಬಳಿಕ ಚೀನಾ ಸೇನೆ ಭಾರತದ ಗಡಿ ಭಾಗದಲ್ಲಿ ಸೇನೆಯನ್ನು ಸಜ್ಜುಗೊಳಿಸಲು ನಿರ್ಧರಿಸಿದೆ. ಇದಕ್ಕಾಗಿ ಮೊದಲ ಹಂತದಲ್ಲಿ ತನ್ನ ನೆಲೆಗಳನ್ನು ಹೆಚ್ಚಿಸಿಕೊಳ್ಳುವುದು ಹಾಗೂ ಭಾರತದ ಗಡಿ ವಾಸ್ತವ ರೇಖೆ ಬಳಿ ನೆಲೆ ನಿರ್ಮಾಣ ಹಾಗೂ ಶಕ್ತಿ ಪ್ರದರ್ಶನಕ್ಕೆ ನಿರ್ಧರಿಸಿತ್ತು. ಈ ಯೋಜನೆ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣಗೊಂಡಿದೆ. 2017ರಲ್ಲಿ ಕೇವಲ 2 ವಾಯು ನೆಲೆ, 2 ಸೇನಾ ನೆಲೆ, 1 ಹೆಲಿಪೋರ್ಟ್ ಹಾಗೂ 1 EW ಸ್ಟೇಶನ್ ಸೇರಿಂತೆ 6 ನೆಲೆಗಳನ್ನು ಹೊಂದಿದ್ದ ಚೀನಾ, 2019ರ ವೇಳೆಗೆ ಈ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಇನ್ನು 2020ರಲ್ಲಿ 9 ಸೇನಾ ನೆಲೆಗಳನ್ನು ನಿರ್ಮಾಣ ಮಾಡಿದೆ. ಈ ಮೂಲಕ ಒಟ್ಟು ನೆಲೆಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಭಾರತದ ಗಡಿ ನಿಯಂತ್ರಣ ರೇಖೆ ಬಳಿ ಚೀನಾ ರಸ್ತೆ ಕಾಮಾಗಾರಿ ಹಾಗೂ ನೆಲೆ ನಿರ್ಮಾಣಕ್ಕೆ ಭಾರತ ವಿರೋಧ ವ್ಯಕ್ತಪಡಿಸಿತು. ಇಲ್ಲಿಂದ ಆರಂಭಗೊಂಡ ಬಿಕ್ಕಟ್ಟು ಇನ್ನೂ ನಿಂತಿಲ್ಲ. ಗಲ್ವಾಣ್ ಕಣಿವೆ , ಪ್ಯಾಂಗಾಂಗ್ ಸರೋವರದ ಬಳಿ ಚೀನಾ ಅತಿಕ್ರಮ ಮಾಡಲು ಪ್ರಯತ್ನಿಸಿತ್ತು. ಇದಕ್ಕೆ ತಕ್ಕ ತಿರುಗೇಟನ್ನು ಭಾರತ ನೀಡಿದೆ. ಭಾರತದ ಮೇಲೆ ಬೊಟ್ಟು ಮಾಡುತ್ತಿರುವ ಚೀನಾದ ಅಸಲಿ ಪ್ಲಾನ್ ಇದೀಗ ಬಹಿರಂಗವಾಗಿದೆ.