ಮೂರನೇ ಅವಧಿ ದೂರವಿಲ್ಲ. ಎಲ್ಲರೂ ಮೋದಿ 3.O ಎಂದು ಬಹುತೇಕರ ಹೇಳುತ್ತಿದ್ದಾರೆ. ಮೂರನೇ ಅವಧಿಯಲ್ಲಿ ಭಾರತ ಏನಾಗಲಿದೆ? ಪ್ರತಿ ಕ್ಷೇತ್ರದಲ್ಲಿನ ವಿಕಾಸ ಯಾವ ರೀತಿ ಆಗಲಿದೆ? ದೇಶದ ಭವಿಷ್ಯ ಏನು? ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬರಲಿರುವ ಮೋದಿ ಸರ್ಕಾರ ಮುಂದಿನ 5 ಏನು ಮಾಡಲಿದೆ ಅನ್ನೋದನ್ನು ವಿವರಿಸಿದ್ದಾರೆ.
ನವದೆಹಲಿ(ಫೆ.07) ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಬಾಕಿ. ಕೇಂದ್ರ ಬಿಜೆಪಿ ಸರ್ಕಾರ 3ನೇ ಅವಧಿಗೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಇಂದು ರಾಜ್ಯಸಸೆಯಲ್ಲಿ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ 5 ವರ್ಷ ದೇಶದಲ್ಲಿ ಆಗಲಿರುವ ಬದಲಾವಣೆ ಕುರಿತು ಸೂಚಿಸಿದ್ದಾರೆ.
ಮೆಡಿಕಲ್ ಕಾಲೇಜು ಸಂಖ್ಯೆ ದುಪ್ಪಟ್ಟಾಗಲಿದೆ. ವ್ಯದ್ಯರ ಸಂಖ್ಯೆ ಹೆಚ್ಚಾಗಲಿದೆ. ಮುಂದಿನ 5 ವರ್ಷ, ಪ್ರತಿ ಮನೆಯಲ್ಲಿ ಶುದ್ಧ ನೀರು ಸಿಗಲಿದೆ. ಮುಂದಿನ 5 ವರ್ಷ ಸೋಲಾರ್ ಪವರ್ ಮೂಲಕ ಶೂನ್ಯ ವಿದ್ಯುತ್ ಬಿಲ್ ಜೊತೆಗೆ ಸರ್ಕಾರಕ್ಕೆ ಮಾರಾಟ ಮಾಡಿ ಆದಾಯಗಳಿಸುವವರ ಸಂಖ್ಯೆ ಹೆಚ್ಚಾಗಲಿದೆ. ಮುಂದಿನ 5 ವರ್ಷ ಗ್ಯಾಸ್ ಸಂಪರ್ಕದಲ್ಲಿ ಕ್ರಾಂತಿಯಾಗಲಿದೆ. ಯುವ ಶಕ್ತಿಯ ತಾಕತ್ತು ವಿಶ್ವಕ್ಕೆ ದರ್ಶನವಾಗಲಿದೆ. ನಮ್ಮ ಸ್ಟಾರ್ಟ್‌ಅಪ್ ಸಂಖ್ಯೆ ಯಾವ ಮಟ್ಟದಲ್ಲಿದೆ ಅನ್ನೋದು ಈಗಾಗಲೇ ಬಹಿರಂಗವಾಗಿದೆ ಎಂದು ಮೋದಿ ಹೇಳಿದರು.
ನನ್ನ ದೇಶ ಕೇವಲ ದೆಹಲಿಯಲ್ಲ, ಬೆಂಗಳೂರು ಕೂಡ ನನ್ನ ದೇಶ; ವಿಪಕ್ಷಗಳಿಗೆ ಚಾಟಿ ಬಿಸಿದ ಪ್ರಧಾನಿ ಮೋದಿ !
ಮಧ್ಯಮ ವರ್ಗದ ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದೇಶಕ್ಕೆ ವಿಧ್ಯಾಬ್ಯಾಸಕ್ಕಾಗೆ ತೆರಳುತ್ತಾರೆ. ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ಮುಂದಿನ 5 ವರ್ಷ ಅತ್ಯುತ್ತಮ ವೈದ್ಯಕೀಯ ಕಾಲೇಜು, ಶಿಕ್ಷಣ ಇಲ್ಲೇ ಸಿಗಲಿದೆ. ಇದರಿಂದ ಮಧ್ಯಮ ವರ್ಗದ ವಿದ್ಯಾರ್ಥಿಗಳ ಆರ್ಥಿಕ ಹೊರೆ ಕಡಿಮೆಯಾಗವು ದಿನ ಬರುತ್ತಿದೆ. ಮುಂದಿನ 5 ವರ್ಷದಲ್ಲಿ ಬುಲೆಟ್ ರೈಲು, ವಂದೇ ಭಾರತ್ ಹೆಚ್ಚಿನ ರೈಲು ನೋಡುತ್ತೀರಿ. ಮಂದಿನ 5 ವರ್ಷ ಆತ್ಮನಿರ್ಭರ ಭಾರತ ಎಲ್ಲಾ ಕ್ಷೇತ್ರದಲ್ಲೂ ಕಾಣಲಿದೆ. ಮುಂದಿನ 5 ವರ್ಷದಲ್ಲಿ ಮೇಡ್ ಇಂಡಿಯಾ, ಸಮಿಕಂಡಕ್ಟರ್ ಭಾರತದಲ್ಲೇ ನಿರ್ಮಾಣವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಇಂದು ಭಾರತ ಲಕ್ಷ ಕೋಟಿ ರೂಪಾಯಿ ಇಂದನ ಆಮದು ಮಾಡುತ್ತಿದೆ. ವಿದೇಶಗ ಮೇಲೆ ಇಂಧನದ ಅವಲಂಬನೆ ಕಡಿಮೆ ಮಾಡಲು ನಾವು ಪ್ರಯತ್ನ ಮಾಡಿದ್ದೇವೆ. ಗ್ರೀನ್ ಹೈಡ್ರೋಜನ್ ಯೋಜನೆ ವೇಗಾಗಿ ಸಾಗುತ್ತಿದೆ. ಈ ಮೂಲಕ ನಮ್ಮ ಜನರಿಗೆ ಸಾರಿಗೆ ಸಂಪರ್ಕದಲ್ಲಿ ಸುಲಭ ಹಾಗೂ ಕೈಗೆಟುಕುವ ದರದಲ್ಲಿ ಲಭ್ಯವಾಗಲಿ ಎಂದರು.
ಬ್ರಿಟಿಷರ ನೆರಳಿನಲ್ಲಿ ಆಡಳಿತದ ನಡೆಸಿತ್ತು ಕಾಂಗ್ರೆಸ್, ರಾಜ್ಯಸಭೆಯಲ್ಲಿ ಇತಿಹಾಸ ಬಿಚ್ಚಿಟ್ಟ ಮೋದಿ!
ನಮ್ಮ ರೈತರಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದ್ದೇವೆ. ಇದರಿಂದ ಮುಂದಿನ 5 ವರ್ಷದಲ್ಲಿ ಭಾರತ ಆಹಾರದಲ್ಲಿ ಸಂಪೂರ್ಣ ಸ್ವಾವಲಂಬನೆಯಾಗುವ ನಿಟ್ಟಿನಲ್ಲಿ ಸಾಗಲಿದೆ. ಶ್ರೀ ಅನ್ನ ಸೇರಿದಂತೆ ಸಿರಿ ಧಾನ್ಯಗಳು ವಿದೇಶಗಳಿಗೆ ರಫ್ತಾಗುತ್ತಿದೆ. ಪ್ರವಾಸೋದ್ಯಮದಲ್ಲಿ ಭಾರತ ಇತರ ಎಲ್ಲಾ ದೇಶಗಳನ್ನು ಹಿಂದಿಕ್ಕುವತ್ತ ಸಾಗುತ್ತಿದೆ.ಡಿಜಿಟಲ್ ಆರ್ಥಿಕತೆಯಲ್ಲಿ ಭಾರತ ಅಗ್ರಗಣ್ಯವಾಗಲಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಉಪಯೋಗದ ಮೂಲಕ ನಾವಿನ್ಯತೆಯೊಂದಿಗೆ ಭಾರತ ಮುನ್ನಡೆಯಲಿದೆ ಎಂದು ಮೋದಿ ಹೇಳಿದ್ದಾರೆ.
ಇಸ್ರೋ ದೇಶದ ಬಾಹ್ಯಾಕಾಶ ಅಧ್ಯಯನ ಹಾಗೂ ಸಂಶೋಧನೆಯನ್ನು ವಿಶ್ವವೇ ಗಮನಿಸುತ್ತಿದೆ. ಮುಂದಿನ 5 ವರ್ಷದಲ್ಲಿ ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆಯಿಂದ ಭಾರತ ಹೆಮ್ಮೆ ಇಮ್ಮಡಿಯಾಗಲಿದೆ. ಇಂದಿನ ಯುವ ಪೀಳಿಗೆ ಪ್ರತಿ ಕ್ಷೇತ್ರದಲ್ಲಿನ ಬದಲಾವಣೆ ನೋಡಿದೆ.