ನನ್ನ ದೇಶ ಕೇವಲ ದೆಹಲಿಯಲ್ಲ, ಬೆಂಗಳೂರು ಕೂಡ ನನ್ನ ದೇಶ; ವಿಪಕ್ಷಗಳಿಗೆ ಚಾಟಿ ಬಿಸಿದ ಪ್ರಧಾನಿ ಮೋದಿ !

Published : Feb 07, 2024, 03:23 PM IST
ನನ್ನ ದೇಶ ಕೇವಲ ದೆಹಲಿಯಲ್ಲ, ಬೆಂಗಳೂರು ಕೂಡ ನನ್ನ ದೇಶ; ವಿಪಕ್ಷಗಳಿಗೆ ಚಾಟಿ ಬಿಸಿದ ಪ್ರಧಾನಿ ಮೋದಿ !

ಸಾರಾಂಶ

ಜಗತ್ತಿಗೆ ಭಾರತದ ದರ್ಶನ ಮಾಡಿದ್ದೇವೆ. ರಾಜ್ಯ ರಾಜ್ಯಗಳ ಐತಿಹಾಸಿಕ ಸ್ಥಳವನ್ನು ಜಗತ್ತಿಗೆ ಪರಿಚಯಿಸಿದ್ದೇವೆ. ನನ್ನ ದೇಶ ಕೇವಲ ದೆಹಲಿ ಮಾತ್ರವಲ್ಲ, ಬೆಂಗಳೂರು, ಚೆನ್ನೈ ಸೇರಿದಂತೆ ಇಡೀ ದೇಶ ನನ್ನದು ಎಂದು ಮೋದಿ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮೋದಿ ಭಾಷಣದ ವಿವರ ಇಲ್ಲಿದೆ.

ನವದೆಹಲಿ(ಫೆ.07)ಜಿ20 ಅಧ್ಯಕ್ಷತೆಯನ್ನು ಭಾರತ ವಹಿಸಿತ್ತು. ಜಿಟಿ20ಯನ್ನು ದೆಹಲಿಯಲ್ಲಿ ನಡೆಸಬಹುದಿತ್ತು. ಆದರೆ ನಾವು ಪ್ರತಿಯೊಂದ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ನಾವು 200ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದವು. ಇದರಿಂದ ಆಯಾ ರಾಜ್ಯಗಳಿಗೂ ಹೆಚ್ಚಿನ ಉತ್ತೇಜನ ಸಿಕ್ಕಿತ್ತು. ವಿಶ್ವಮಟ್ಟದಲ್ಲಿ ಆಯಾ ರಾಜ್ಯದ ಐತಿಹಾಸಿಕ ಸ್ಥಳಗಳ, ರಾಜ್ಯಗಳ ಮೂಲಭೂತ ಸೌಕರ್ಯ, ಪ್ರವಾಸಿ ಸ್ಥಳಗಳು ವಿಶ್ವಕ್ಕೆ ಪರಿಚಯವಾಗಿತ್ತು ಎಂದು ಮೋದಿ ಹೇಳಿದರು.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ, ಪ್ರತಿಪಕ್ಷಗಳ ಟೀಕೆ ಹಾಗೂ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಇದೇ ವೇಳೆ ಜಿ20 ಅಧ್ಯಕ್ಷತೆ ಹಾಗೂ ಸಭೆ ಕುರಿತು ಟೀಕಿಸಿದ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೆಹಲಿಗೆ ದೊಡ್ಡ ದೊಡ್ಡ ನಾಯಕರನ್ನು ಕರೆಸಿ ಸಭೆ ನಡೆಸಿ ಸುಲಭವಾಗಿ ಮುಗಿಸಬಹುದಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ. ದೇಶದ ಪರಿಚಯ ಮಾಡಿದೆವು. ಈ ಮೂಲಕ ವಿಶ್ವಕ್ಕೆ ಭಾರತ ದರ್ಶನವಾಯಿತು. ನನ್ನ ದೇಶ ಕೇವಲ ದಹೆಲಿ ಮಾತ್ರವಲ್ಲ, ಬೆಂಗಳೂರು ಕೂಡ ನನ್ನ ದೇಶ, ಚೆನ್ನೈ ಕೂಡ ನನ್ನ ದೇಶ. ಭಾರತದ ಸೌಂದರ್ಯ, ದರ್ಶನ ದೆಹಲಿಯಿಂದ ಮಾತ್ರ ಸಾಧ್ಯವಿಲ್ಲ ಅನ್ನೋದನ್ನು ಜಗತ್ತಿಗೆ ಸಾರಿ ಹೇಳಿದ್ದೇವೆ ಎಂದು ಮೋದಿ ಹೇಳಿದರು.

 

ಬ್ರಿಟಿಷರ ನೆರಳಿನಲ್ಲಿ ಆಡಳಿತದ ನಡೆಸಿತ್ತು ಕಾಂಗ್ರೆಸ್, ರಾಜ್ಯಸಭೆಯಲ್ಲಿ ಇತಿಹಾಸ ಬಿಚ್ಚಿಟ್ಟ ಮೋದಿ!

ಏರ್ ಇಂಡಿಯಾವನ್ನು ಮುಳುಗಿಸಿದವರು ಯಾರು , ಕಾಂಗ್ರೆಸ್ ಆಡಳಿತದ 10 ವರ್ಷದಲ್ಲಿ ಎಷ್ಟು ಸಂಸ್ಥೆಗಳು ಮುಳುಗಿದೆ? ಕಾಂಗ್ರೆಸ್ BSNL ರೆಕ್ಕೆ ತುಂಡರಿಸಿ ಮುಳಗುವ ಹಡಗಿನ ರೀತಿ ಮಾಡಿದ್ದೀರಿ, ಇಂದು BSNL ಮೇಡ್ ಇನ್ ಇಂಡಿಯಾ 4ಜಿ ಹಾಗೂ ಮೇಡ್ ಇನ್ ಇಂಡಿಯಾ 5ಜಿ ಸೇವೆ ನೀಡುತ್ತಿದೆ. ಹೆಚ್ಎಎಲ್ ಮುಗಿಸಲು ಹೊರಟವರು 2019ರಲ್ಲಿ ಅದೇ ವಿಚಾರದಲ್ಲಿ ಚುನಾವಣೆ ವಿಷಯವನ್ನಾಗಿ ಮಾಡಿದರು. ಹೆಚ್‌ಎಎಲ್ ಸೇವೆ ಬಂದ್ ಮಾಡಲು ಪ್ರಯತ್ನ ಮಾಡಿದವರೂ, ರಾಜಕೀಯವಾಗಿ ಬಳಸಿಕೊಂಡು ಚುನಾವಣೆ ಗೆಲ್ಲಲು ಯತ್ನಿಸಿದರು. ಆದರೆ ಹೆಚ್ಎಎಲ್ ಇಂದು ಕರ್ನಾಟಕದಲ್ಲಿ ಅತೀ ದೊಡ್ಡ ಕಾರ್ಖಾನೆ ಹೊಂದಿದೆ. ಲಾಭದಾಯಕ ಸಂಸ್ಥೆಗಳಲ್ಲಿ ಹೆಚ್ಎಎಲ್ ಕೂಡ ಒಂದು ಎಂದು ಮೋದಿ ಹೇಳಿದ್ದಾರೆ. 

ಎಲ್‌ಐಸಿ ಮುಳುಗಿದೆ, ಮುಳುಗುತ್ತಿದೆ ಎಂದು ಕಾಂಗ್ರೆಸ್ ಸುಳ್ಳುಗಳನ್ನು ಹರಡಿತ್ತು. ಆದರೆ ಇಂದು ಎಲ್‌ಐಸಿ ಷೇರುಗಳು ದಾಖಲೆ ಮಟ್ಟಕ್ಕೆ ತಲುಪಿದೆ ಎಂದು ಮೋದಿ ಹೇಳಿದ್ದಾರೆ. ಒಂದೊಂದೆ ಸಂಸ್ಥೆಗಳನ್ನು ನಿರ್ಲಕ್ಷ್ಯವಹಿಸಿ ಮುಗಿಸಲು ಯತ್ನಿಸಿದರು. ಇದೇ ವಿಚಾರವನ್ನು ಮುಂದಿಟ್ಟು ರಾಜಕೀಯ ಮಾಡಲು ಹೊರಟರು. ಆದರೆ ಇಂದು ಅಂಕಿ ಅಂಶಗಳೇ ಎಲ್ಲವನ್ನೂ ಹೇಳುತ್ತಿದೆ ಎಂದು ಮೋದಿ ಹೇಳಿದ್ದಾರೆ. 

 

ಮೊದಲ ಬಾರಿಗೆ ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸಲಿದೆ ಕೇಂದ್ರ ಸರ್ಕಾರ, ಏನಿದು ವೈಟ್ ಪೇಪರ್?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!