ಲಾಕ್‌ಡೌನ್ ಮಧ್ಯೆ ಅತಿ ಹೆಚ್ಚು ಮಾರಾಟವಾದ 'ಪಾರ್ಲೆ-ಜಿ', 82 ವರ್ಷದ ದಾಖಲೆ ಉಡೀಸ್!

By Suvarna NewsFirst Published Jun 9, 2020, 3:35 PM IST
Highlights

'ಪಾರ್ಲೆ-ಜಿ' ಬಿಸ್ಕೆಟ್ ಅದೆಷ್ಟು ಮಾರಾಟವಾಗಿದೆ ಎಂದರೆ ಇದು ಕಳೆದ 82 ವರ್ಷದ ದಾಖಲೆಯನ್ನೇ ಮುರಿದಿದೆ. ಕೇವಲ ಐದು ರೂಪಾಯಿಗೆ ಸಿಗುವ ಪಾರ್ಲೆ-ಜಿ ಪ್ಯಾಕೆಟ್‌ ನೂರಾರು, ಸಾವಿರಾರು ಕಿ. ಮೀ ದೂರ ಕಾಲ್ನಡಿಗೆಯಲ್ಲೇ ಪ್ರಯಾಣಿಸಿದ ಕಾರ್ಮಿಕರ ಹಸಿವು ನೀಗಿಸಿದೆ. 

ಬೆಂಗಳೂರು(ಜೂ.09): ಕೊರೋನಾ ವೈರಸ್ ನಿಗ್ರಹಕ್ಕೆ ಹೇರಲಾದ ಲಾಕ್‌ಡೌನ್‌ನಿಂದ ಬಹುತೇಕ ಎಲ್ಲಾ ಉದ್ಯಮಗಳು ನೆಲ ಕಚ್ಚಿದ್ದವು. ಆದರೆ ಇವೆಲ್ಲದರ ನಡುವೆ 'ಪಾರ್ಲೆ-ಜಿ' ಬಿಸ್ಕೆಟ್ ಅದೆಷ್ಟು ಮಾರಾಟವಾಗಿದೆ ಎಂದರೆ ಇದು ಕಳೆದ 82 ವರ್ಷದ ದಾಖಲೆಯನ್ನೇ ಮುರಿದಿದೆ. ಕೇವಲ ಐದು ರೂಪಾಯಿಗೆ ಸಿಗುವ ಪಾರ್ಲೆ-ಜಿ ಪ್ಯಾಕೆಟ್‌ ನೂರಾರು, ಸಾವಿರಾರು ಕಿ. ಮೀ ದೂರ ಕಾಲ್ನಡಿಗೆಯಲ್ಲೇ ಪ್ರಯಾಣಿಸಿದ ಕಾರ್ಮಿಕರ ಹಸಿವು ನೀಗಿಸಿದೆ. ಕೆಲವರು ತಾವೇ ಖುದ್ದು ಖರೀದಿಸಿ ತಿಂದರೆ, ಇನ್ನು ಕೆಲವರು ಇದನ್ನು ಖರೀದಿಸಿ ಬಡವರ ಹಸಿವು ನೀಗಿಸಲು ದಾನ ಮಾಡಿದ್ದಾರೆ. ಇನ್ನು ಅನೇಕ ಮಂದಿ ಲಾಕ್‌ಡೌನ್ ನಡುವೆ ತಿನ್ನಲೆಂದು ತಮ್ಮ ಮನೆಗಳಲ್ಲಿ ಪಾರ್ಲೆಜೀ ಸ್ಟಾಕ್ ಮಾಡಿಟ್ಟಿದ್ದಾರೆ.

ಕ್ಯಾಡ್‌ಬರಿ ಸಂಸ್ಥೆಯಿಂದ 71 ಟನ್‌ ಬಿಸ್ಕಟ್‌, ಚಾಕಲೇಟ್‌ ವಿತರಣೆ!

82 ವರ್ಷಗಳಲ್ಲೇ ದಾಖಲೆಯ ಮಾರಾಟ

ಪಾರ್ಲೇಜಿ 1938ರಿಂದಲೇ ಜನರ ನಡುವೆ ಅತ್ಯಂತ ಪ್ರಸಿದ್ಧ ಬ್ರಾಂಡ್‌ ಆಗಿ ಉಳಿದುಕೊಂಡಿದೆ. ಆದರೆ ಲಾಕ್‌ಡೌನ್ ನಡುವೆ ಇದು ತನ್ನ ಇತಿಹಾಸದಲ್ಲೇ ಅತಿ ಹೆಚ್ಚು ಬಿಸ್ಕೆಟ್ ಮಾರಾಟ ಮಾಡಿದ ದಾಖಲೆ ನಿರ್ಮಿಸಿದೆ. ಈವರೆಗೂ ಪಾರ್ಲೆ ಕಂಪನಿ ಮಾರಾಟವಾದ ಅಂಕಿ ಅಂಶಗಳನ್ನು ಬಹಿರಂಗಪಡಿಸಿಲ್ಲವಾದರೂ, ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಕಳೆದ ಎಂಟು ದಶಕಗಳಲ್ಲೇ ಅತಿ ಉತ್ತಮ ತಿಂಗಳಾಗಿದೆ ಎಂದು ತಿಳಿಸಿದೆ.

ಕಂಪೆನಿ ಬೆಳವಣಿಗೆ

ಇನ್ನು ಪಾರ್ಲೆ ಪ್ರಾಡಕ್ಟ್‌ನ ವಿಭಾಗಿಯ ಮುಖ್ಯಸ್ಥ ಮಯಾಂಕ್ ಶಾಹ್ ಈ ಸಂಬಂಧ ಮಾಹಿತಿ ನೀಡಿದ್ದು, ಕಂಪನಿಯ ಒಟ್ಟು ಮಾರ್ಕೆಟ್ ಶೇರ್ ಶೇ. 5ರಷ್ಟು ಬೆಳವಣಿಗೆ ಕಂಡಿದೆ. ಇದರಲ್ಲಿ ಶೇ. 80-90 ರಷ್ಟು ಅಭಿವೃದ್ಧಿ ಪಾರ್ಲೇಜಿಯ ಮಾರಾಟದಿಂದಾಗಿದೆ ಎಂದಿದ್ದಾರೆ.

ಕಂಪನಿಗೆ ಲಾಭವಾಗಿದ್ದು ಹೇಗೆ?

ಕೆಲ ಸಂಘಟಿತ ಬಿಸ್ಕೆಟ್ ಉತ್ಪಾದಕರಾದ , ಪಾರ್ಲೆಯಂತಹ ಕಂಪನಿಗಳು ಲಾಕ್‌ಡೌನ್‌ ಹೇರಲಾದ ಕೆಲ ದಿನಗಳೊಳಗೇ ಚಟುವಟಿಕೆ ಮತ್ತೆ ಆರಂಭಿಸಿದ್ದವು. ಕೆಲ ಕಂಪನಿಗಳಂತೂ ತಮ್ಮ ಉದ್ಯೋಗಿಗಳಿಗೆ ಬಂದು ಹೋಗುವ ವ್ಯವಸ್ಥೆಯನ್ನೂ ಕಲ್ಪಿಸಿದ್ದವು. ಈ ಮೂಲಕ ಆರಾಮಾಗಿ ಅವರು ಕೆಲಸಕ್ಕೆ ಬಂದು ಹೋಗಿ, ಉತ್ಪಾದನೆ ಜಾಸ್ತಿಇಯಾಗಲಿ ಎಂಬ ನಿಟ್ಟಿನಲ್ಲಿ ಈ ವ್ಯವಸ್ಥೆ  ಮಾಡಿದ್ದರು. ಇನ್ನು ಫ್ಯಾಕ್ಟರಿಗಳು ಆರಂಭವಾಗುತ್ತಿದ್ದಂತೆಯೇ ಈ ಕಂಪನಿಗಳು ಯಾವ ಉತ್ಪನ್ನ ಹೆಚ್ಚು ಮಾರಾಟವಾಗುತ್ತದೋ ಅದನ್ನು ತಯಾರಿಸುವಲ್ಲಿ ಹೆಚ್ಚು ಪರಿಶ್ರಮ ಹಾಕಿದವು.

ಕೊರೋನಾ ಸಮರಕ್ಕೆ 'ಪಾರ್ಲೆ-ಜಿ' ಸಾಥ್: ಬಡವರಿಗೆ ಫ್ರೀ ಬಿಸ್ಕೆಟ್!

ಇನ್ನು ಅಧ್ಯಯನವೊಂದರಲ್ಲಿ ಜನರು ಕಡಿಮೆ ಬೆಲೆಗೆ ಸಿಗುವ ಹಾಗೂ ಅಗತ್ಯವೆನಿಸುವ, ಹಸಿವು ನೀಗಿಸುವ ವಸ್ತುಗಳನ್ನು ಹೆಚ್ಚು ಖರೀದಿಸುವ ವಿಚಾರ ಬೆಳಕಿಗೆ ಬಂದಿದೆ. ಇದರ ಅನ್ವಯ ಜನರು ಪಾರ್ಲೆ-ಜಿ ಹೆಚ್ಚು ಪ್ರಮಾಣದಲ್ಲಿ ಖರೀದಿಸಿದ್ದಾರೆಂಬುವುದರಲ್ಲಿ ಅನುಮಾನವಿಲ್ಲ.

ಬ್ರಿಟಾನಿಯಾ ಬೆಸ್ಕೆಟ್‌ಗಳೂ ಹಚ್ಚು ಮಾರಾಟ

ಕೇವಲ ಪಾರ್ಲೆ-ಜಿ ಮಾತ್ರವಲ್ಲ, ಕಳೆದ ಮೂರು ತಿಂಗಳ ಲಾಕ್‌ಡೌನ್‌ ನಡುವೆ ಇತರ ಕಂಪನಿಗಳ ಬಿಸ್ಕೆಟ್‌ಗಳೂ ಹೆಚ್ಚು ಮಾರಾಟ ಕಂಡಿವೆ. ತಜ್ಞರ ಅನ್ವಯ ಬ್ರಿಟಾನಿಯಾದ ಗುಡ್‌-ಡೆ, ಟೈಗರ್, ಮಿಲ್ಕ್ ಬಿಸ್ಕೆಟ್, ಬಾರ್ಬರ್ನ್ ಹಾಗೂ ಮಾರಿ ಬಿಸ್ಕೆಟ್ ಅಲ್ಲದೇ ಪಾರ್ಲೆಯ ಕ್ರ್ಯಾಕ್‌ ಜ್ಯಾಕ್, ಹೈಡ್ ಆಂಡ್ ಸೀಕ್‌ನಂತಹ ಬಿಸ್ಕೆಟ್‌ಗಲೂ ಹೆಚ್ಚು ಮಾರಾಟವಾಗಿದೆ ಎಂದಿದ್ದಾರೆ.

ಲಾಕ್‌ಡೌನ್‌ ನಡುವೆ ಜನರ ಏಕೈಕ ತಿಂಡಿಯಾಗಿತ್ತು ಪಾರ್ಲೆ-ಜಿ

ಪಾರ್ಲೆ ಪ್ರಾಡಕ್ಟ್ ತನ್ನ ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ಆದರೆ ಕಡಿಮೆ ಬೆಲೆಯ ಬ್ರಾಂಡ್ ಪಾರ್ಲೆ-ಜಿ ಮೇಲೆ ಎಚ್ಚು ಫೋಕಸ್ ಮಾಡಿದೆ. ಯಾಕೆಂದರೆ ಗ್ರಾಹಕರಿಂದ ಇದಕ್ಕಾಗಿ ಹೆಚ್ಚು ಬೇಡಿಕೆ ಕಂಡು ಬಂತು. ಕಂಪನಿ ತನ್ನ ಡಿಸ್ಟ್ರಿಬ್ಯೂಟರ್ ಚಾನೆಲ್‌ನ್ನು ಕೂಡಾ ಒಂದು ವಾರದೊಳಗೆ ರೀಸೆಟ್ ಮಾಡಿತು. ಈ ಮೂಲಕ ಬಿಸ್ಕೆಟ್ ಪೂರೈಕೆಯಲ್ಲಿ ಕೊರತೆ ಕಂಡು ಬರಲಿಲ್ಲ. ಈ ಸಂಬಂಧ ಪ್ರತಿಕ್ರಿಯಿಸಿರುವ ಮಯಾಂಕ್ ಪಾರ್ಲೆ-ಜೀ ಅನೇಕ ಮಂದಿಗೆ ಬಹಳ ಸುಲಭವಾಗಿ ಕೈಗೆಟಕುವ ಆಹಾರವಾಗಿ ಪರಿಣಮಿಸಿತು. ಕಲವರಿಗಂತೂ ಇದೊಂದೇ ಅವರ ಆಹಾರವಾಗಿತ್ತು. ಯಾರಿಗೆ ರೊಟ್ಟಿ ಖರೀದಿಸಲು ಸಾಧ್ಯವಿಲ್ಲವೋ ಅವರು ಕೂಡಾ ಪಾರ್ಲೇ-ಜೀ ಖರೀದಿಸಬಹುದು ಎಂದಿದ್ದಾರೆ.

click me!