
ವಡೋದರ(ಜೂ.20): ಗುಜರಾತಿನ ವಡೋದರ ಜಿಲ್ಲೆಯಲ್ಲಿ ಗರ್ಭಿಣಿಯಾಗಿದ್ದ 17 ವರ್ಷದ ಯುವತಿಯನ್ನು ಪೋಷಕರೇ 50 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ನಡೆದಿದೆ.
ಯುವತಿ ವಿಕಾಸ್ ವಾಸವ್ ಎಂಬ ಯುವಕನೊಂದಿಗೆ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಳು. ಈ ಬಗ್ಗೆ ಆಕೆಯ ಪೋಷಕರಿಗೂ ತಿಳಿದಿತ್ತು. ಆಕೆ ಗರ್ಭಿಣಿ ಎಂದು ತಿಳಿದಾಗ ಆಕೆಯನ್ನು ಸ್ವೀಕರಿಸಲು ಪೋಷಕರು ನಿರಾಕರಿಸಿದ್ದು, ವಾಸವನಿಗೆ ಕರೆ ಮಾಡಿ 50 ಸಾವಿರ ರೂಪಾಯಿಗೆ ಡೀಲ್ ಮಾಡಿ ಮಾರಾಟ ಮಾಡಿದ್ದಾರೆ.
ಪತಿಯ ಕಿರುಕುಳ ದೂರು ನೀಡಿದಾಕೆಯ ಮನೆಗೆ ಬಂದು ಪೇದೆಯಿಂದ ಅತ್ಯಾಚಾರ
ನಂತರದಲ್ಲಿ ಹಣದ ಬಗ್ಗೆ ಅತಿ ಆಸೆ ಬಂದು ಪೋಷಕರು ಇನ್ನಷ್ಟು ಹಣ ಬ ಏಕೆಂದು ಬೇಡಿಕೆ ಇರಿಸಿದ್ದಾರೆ. ಆದರೆ ಅದಕ್ಕಿಂತ ಹೆಚ್ಚು ನೀಡಲು ಸಾಧ್ಯವಿರದ ಕಾರಣ ವಾಸವ ನಿರಾಕರಿಸಿದ್ದ. ಹಾಗಾಗಿ ಯುವತಿಯನ್ನು ಜೂ.1ರಂದು ಆಕೆಯ ಪೋಷಕರ ಮನೆಗೆ ಕಳುಹಿಸಿದ್ದ.
ಈ ಬೆಳವಣಿಗೆಯ ನಂತರ ವಡೋದರ ಜಿಲ್ಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಯುವತಿ ಘಟನೆ ಬಗ್ಗೆ ದೂರು ದಾಖಲಿಸಿದ್ದಾಳೆ. ಪೊಲೀಸರು ಯುವತಿಯ ಪೋಷಕರು ಹಾಗೂ ವಾಸವನನ್ನು ಬಂಧಿಸಿದ್ದಾರೆ . ಕೊರೋನಾ ಭೀತಿಯಿಂದಾಗಿ ಬಂಧಿತರನ್ನು ಕ್ವಾರೆಂಟೈನ್‌ನಲ್ಲಿರಿಸಲಾಗಿದೆ.
ಸುಶಾಂತ್ ಅಗಲಿಕೆ ನೋವು; ನಾಲ್ವರು ಮಕ್ಕಳ ಆತ್ಮಹತ್ಯೆ
ಆರಂಭದಲ್ಲಿ 50 ಸಾವಿರಕ್ಕೆ ವಾಸವಗೆ ಮಗಳನ್ನು ಮಾರಾಟ ಮಾಡಿದ್ದ ಪೋಷಕರಿಗೆ ಸಂಬಂಧಿಯೊಬ್ಬರು ಇನ್ನಷ್ಟು ಹಣ ಪೀಕಿಸುವಂತೆ ಹೇಳಿದ್ದರು. ಯುವತಿ ಅಪ್ರಾಪ್ತೆ ಆಗಿದ್ದು, 5 ಲಕ್ಷ ರೂ ಕೇಳುವಂತೆ ಸಂಬಂಧಿಕರೊಬ್ಬರು ಯುವತಿಯ ಪೋಷಕರಿಗೆ ತಿಳಿಸಿದ್ದರು. ಇದೀಗ ಯುವತಿ ಅಪ್ರಾಪ್ತೆ ಎಂದು ತಿಳಿದ ನಂತ ವಾಸವನ ವಿರುದ್ಧ ಅತ್ಯಾಚಾರ ಪ್ರಕರಣವನ್ನೂ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ