
ನವದೆಹಲಿ(ಜೂ.20): ಭಾರತ-ಚೀನಾ ಯೋಧರ ಸಂಘರ್ಷದ ನೆಲೆ ಆಗಿರುವ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯ ಗಲ್ವಾನ್ ನದಿ ಮೇಲೆ ಸೇತುವೆ ಕಾಮಗಾರಿಯನ್ನು ಭಾರತೀಯ ಸೇನೆ ಪೂರ್ಣಗೊಳಿಸಿದೆ.
ಸಂಘರ್ಷಕ್ಕೆ ಕಾರಣವಾದ ಅಂಶಗಳಲ್ಲಿ ಈ ಸೇತುವೆ ವಿಚಾರವೂ ಕಾರಣವಾಗಿತ್ತು. ಸೇತುವೆ ನಿರ್ಮಾಣಕ್ಕೆ ಚೀನಾ ಆಕ್ಷೇಪಿಸಿತ್ತು. ಇದೀಗ ಈ ಆಕ್ಷೇಪವನ್ನು ಮೆಟ್ಟಿನಿಂತು ಭಾರತವು ಸೇತುವೆ ಕಾಮಗಾರಿ ಪೂರ್ಣಗೊಳಿಸಿದೆ. ಇದು ವ್ಯೂಹಾತ್ಮಕವಾಗಿ ಭಾರತಕ್ಕೆ ನೆರವಾಗಲಿದೆ.
'ಭಾರತದ ಸೇನೆಗೆ ಹೋರಾಡಲು ಅವಕಾಶವೇ ಸಿಗ್ಲಿಲ್ಲ, ಒಬ್ಬ ಚೀನಾ ಸೈನಿಕನೂ ಸತ್ತಿಲ್ಲ'
ಸೇತುವೆ ನಿರ್ಮಾಣದಿಂದ ಯೋಧರಿಗೆ ಅತ್ಯಂತ ಕೊರೆವ ಚಳಿಯ ಪರಿಸ್ಥಿತಿಯಲ್ಲಿ ಸರಾಗವಾಗಿ ನದಿ ದಾಟಿ ಸಂಚರಿಸಲು ಹಾಗೂ ಸೇನಾ ಸರಕು ಸಾಗಿಸಲು ಸಾಧ್ಯವಾಗಲಿದೆ ಹಾಗೂ ದಬ್ರುಕ್‌ನಿಂದ ದೌಲತ್ ಬೇಗ್ ಓಲ್ಡಿ ನಡುವಿನ 255 ಕಿ.ಮೀ. ವ್ಯೂಹಾತ್ಮಕ ರಸ್ತೆಯ ರಕ್ಷಣೆ ಸಾಧ್ಯವಾಗಲಿದೆ. ಸೇತುವೆಯ ಸನಿಹದಲ್ಲೇ ಭಾರತದ ಸೇನಾ ಕ್ಯಾಂಪ್ ಇದೆ.
‘ಜೂನ್ 15ರಂದು ಭಾರತ-ಚೀನಾ ಯೋಧರ ಸಂಘರ್ಷದ ನಡುವೆಯೂ ನಾವು ಕಾಮಗಾರಿ ನಿಲ್ಲಿಸಲಿಲ್ಲ. ಗುರುವಾರ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ’ ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೀನಾ ದಾಳಿ ಪ್ಲಾನ್ ಮಾಡ್ತಿತ್ತು, ಸರ್ಕಾರ ಮಲಗಿತ್ತು: 50ನೇ ಬರ್ತ್‌ಡೇ ದಿನ ರಾಹುಲ್ ವಾಗ್ದಾಳಿ
ಗಲ್ವಾನ್ ಕಣವೆ ತನ್ನದು ಎಂಬುದು ಚೀನಾದ ವಾದವಾಗಿದ್ದು, ಇದು ಸಂಘರ್ಷದ ಮೂಲವಾಗಿದೆ. ಹೀಗಾಗಿಯೇ ಈ ಗಲ್ವಾನ್ ನದಿ ಮೇಲೆ ಸೇತುವೆ ನಿರ್ಮಾಣಕ್ಕೆ ಚೀನಾ ಆಕ್ಷೇಪಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ