ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿರುದ್ಧ ಅಬ್ಬರಿಸಿದ ಪಪ್ಪು ಯಾದವ್‌ಗೆ ಇದೀಗ ಬೆದರಿಕೆಯೊಂದು ಬಂದಿದೆ. ಬಿಷ್ಣೋಯ್ ಗ್ಯಾಂಗ್‌ನಿಂದ ಸಂದೇಶ ಬರುತ್ತಿದ್ದಂತೆ ಪೊಲೀಸರ ಬಳಿ ಝೆಡ್ ಪ್ಲಸ್ ಭದ್ರತೆಗೆ ಮನವಿ ಮಾಡಿದ್ದಾರೆ.
ಪಾಟ್ನಾ(ಅ.28) ಕಳೆದ ಕೆಲ ದಿನಗಳಿಂದ ಹಲವು ರಾಜಕಾರಣಗಳು, ಸೆಲೆಬ್ರೆಟಿಗಳಿಗೆ ಲಾರೆನ್ಸ್ ಬಿಷ್ಣೋಯ್ ಆತಂಕ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಮುಂಬೈನ ಮಾಜಿ ಸಚಿವ ಬಾಬಾ ಸಿದ್ದಿಕ್ಕಿ ಹತ್ಯೆ. ಹತ್ಯೆ ಬೆನ್ನಲ್ಲೇ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೂ ಬೆದರಿಕೆ ಬಂದಿದೆ. ಹೀಗಾಗಿ ಸಲ್ಮಾನ್ ಭದ್ರತೆ ಹೆಚ್ಚಿಸಲಾಗಿದೆ. ಇದರ ನಡುವೆ ಸಲ್ಮಾನ್ ಖಾನ್‌ಗೆ ಬೆಂಬಲ ಸೂಚಿಸಿ, ಲಾರೆನ್ಸ್ ಬಿಷ್ಣೋಯ್ ವಿರುದ್ಧ ಘರ್ಜಿಸಿದ್ದರು. ಆದರೆ ಈ ಘರ್ಜನೆ ಬೆನ್ನಲ್ಲೇ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಇದೀಗ ಪಪ್ಪು ಯಾದವ್‌ಗೆ ಬೆದರಿಕೆ ಕರೆ ಒಂದು ಬಂದಿದೆ. ನಿಮ್ಮ ರಾಜಕೀಯ ಏನಿದೆಯೋ ಅದನ್ನು ನೋಡಿಕೊಂಡು ತೆಪ್ಪಗಿರುವಂತೆ ಸೂಚಿಸಲಾಗಿದೆ. ಇದರ ನಡುವೆ ಸಲ್ಮಾನ್ ಖಾನ್ ಬೆಂಬಲಕ್ಕೆ ನಿಂತರೆ ಹತ್ಯೆಯಾಗುವುದಾಗಿ ಎಚ್ಚರಿಸಿದ್ದಾರೆ.
ನಿನ್ನೆ ಮೊನ್ನೆವರೆಗೆ ಲಾರೆನ್ಸ್ ಬಿಷ್ಣೋಯ್ ವಿರುದ್ಧ ಘರ್ಜಿಸಿದ ಪಪ್ಪು ಯಾದವ್ ಇದೀಗ ದಿಢೀರ್ ಪೊಲೀಸರ ಬಳಿ ಭದ್ರತೆಗೆ ಮನವಿ ಮಾಡಿದ್ದಾರೆ. ಬಿಹಾರದ ಡೈರೆಕ್ಟರ್ ಜನರಲ್ ಆಫ್ ಪೊಲೀಸರ ಬಳಿಕ ಪಪ್ಪು ಯಾದವ್ ಮನವಿ ಮಾಡಿದ್ದಾರೆ.ಇಷ್ಟೇ ಅಲ್ಲ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ತನಗೆ ಬೆದರಿಕೆ ಇರುವುದರಿಂದ ವೈ ಸೆಕ್ಯೂರಿಟಿಯಿಂದ ಝೆಡ್ ಸೆಕ್ಯೂರಿಟಿ ವರೆಗೆ ರಕ್ಷಣೆ ಒದಹಿಸುವಂತೆ ಆಗ್ರಹಿಸಿದ್ದಾರೆ. ಇದೇ ವೇಳೆ ಪೊಲೀಸರಿಗೆ ತಮ್ಮ ಸಾರ್ವಜನಿಕ ಸಮಾವೇಷ, ಸಂದರ್ಶನ, ಭೇಟಿ ವೇಳೆ ಹೆಚ್ಚಿನ ಭದ್ರತೆ ಒದಗಿಸುವಂತೆ ಆಗ್ರಹಿಸಿದ್ದಾರೆ.
undefined
ಬಿಷ್ಣೋಯ್ ವಿರುದ್ಧ ವೈರತ್ವ ಅಂತ್ಯಕ್ಕೆ 5 ಕೋಟಿ ರೂ, ಸಲ್ಮಾನ್‌ಗೆ ಬಂದ ಬೆದರಿಕೆ ಮೆಸೇಜ್‌ನಲ್ಲಿ ಟ್ವಿಸ್ಟ್!
ಬೆದರಿಕೆ ಕರೆ ಬರುತ್ತಿದ್ದಂತೆ ಬಿಹಾರ್ ಪೊಲೀಸರು ಅಲರ್ಟ್ ಆಗಿದ್ದಾರೆ. ಕರೆ ಮೂಲ ಪತ್ತೆ ಹಚ್ಚಿದ್ದಾರೆ. ಯುಎಇನಿಂದ ಈ ಕರೆ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಕುರಿತು ತನಿಖೆ ಆರಂಭಿಸಿದ್ದಾರೆ. ಈ ಕರೆಯನ್ನು ರೆಕಾರ್ಡ್ ಮಾಡಿರುವ ಪಪ್ಪು ಯಾದವ್, ಡಿಜಿಪಿಗೆ ಕಳುಹಿಸಿದ್ದಾರೆ. ಇತ್ತ ಪಪ್ಪು ಯಾದವ್ ಇದೀಗ ಹೆಚ್ಚಿನ ರಕ್ಷಣೆ ಬಯಸಿದ್ದಾರೆ. ಇಷ್ಟೇ ಅಲ್ಲ ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಎದುರಾಗಿದೆ.
ಬಾಬಾ ಸಿದ್ದಿಕಿ ಹತ್ಯೆ ಬಳಿಕ ಲಾರೆನ್ಸ್ ಬಿಷ್ಣೋಯ್ ತಂಡದಿಂದ ನಟ ಸಲ್ಮಾನ್ ಖಾನ್‌ಗೂ ಬೆದರಿಕೆ ಬಂದಿತ್ತು. ಈ ವೇಳೆ ಹಲವು ನಟರು ನೇರವಾಗಿ ಸಲ್ಮಾನ್ ಖಾನ್‌ಗೆ ಕರೆ ಮಾಡಿ ಧೈರ್ಯ ತುಂಬಿದ್ದರು. ಆದರೆ ಯಾರೂ ಕೂಡ ಬಹಿರಂಗವಾಗಿ ಸಲ್ಮಾನ್ ಖಾನ್‌ಗೆ ಬೆಂಬಲ ಸೂಚಿಸುವ ಧೈರ್ಯ ಮಾಡಿರಲಿಲ್ಲ. ಪಪ್ಪೂ ಯಾದವ್ ಸಲ್ಮಾನ್ ಖಾನ್‌ಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದು ಮಾತ್ರವಲ್ಲ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸವಾಲೆಸೆದಿದ್ದರು. ಇದರ ಬೆನ್ನಲ್ಲೇ ಬೆದರಿಕೆ ಬಂದಿದೆ.
ರಾಜಕೀಯ ನೋಡಿಕೊಂಡು ಇರುವಂತೆ ಕರೆಯಲ್ಲಿ ಸೂಚಿಸಲಾಗಿದೆ. ಸಲ್ಮಾನ್ ವಿಚಾರಕ್ಕೆ ಬಂದರೆ ಪರಿಣಾಮ ನೆಟ್ಟಗಿರಲಿಲ್ಲ. ಖುದ್ದು ಲಾರೆನ್ಸ್ ಬಿಷ್ಣೋಯ್ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಸಬರಮತಿ ಜೈಲಿನಲ್ಲಿ ಅಳವಡಿಸಿರುವ ಜ್ಯಾಮರ್ ವಿರುದ್ಧ ಗಂಟೆಗೆ 1 ಲಕ್ಷ ರೂಪಾಯಿ ಪಾವತಿ ಮಾಡಿ ಕರೆ ಮಾಡಲು ಯತ್ನಿಸಿದ್ದಾರೆ. ರಾಜಕೀಯದಲ್ಲಿದ್ದರೆ ಒಳಿತು. ಇತರ ವಿಚಾರಕ್ಕೆ ತಲೆ ಹಾಕಬೇಡಿ ಎಂದು ಕರೆ ಮಾಡಿ ಬೆದರಿಕೆ ಹಾಕಲಾಗಿದೆ.