ಮಗನಿಗೆ ಬ್ಲೂಫಿಲಂನಲ್ಲಿ ಕೆಲಸ ಸಿಕ್ಕ ವಿಷಯ ಕೇಳಿದಾಗ ಅಮ್ಮನ ರಿಯಾಕ್ಷನ್ ಹೇಗಿತ್ತು ನೋಡಿ

By Mahmad Rafik  |  First Published Oct 28, 2024, 4:41 PM IST

ವಯಸ್ಕರ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದ ಮಗನ ವಿಡಿಯೋ ವೈರಲ್ ಆಗಿದೆ. ತಾಯಿಯ ರಿಯಾಕ್ಷನ್ ಕಂಡು ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಗನಿಗೆ ಆಫರ್ ಬಂದ ವಿಷಯ ತಿಳಿದ ತಾಯಿ ಮೊದಲು ಸಂತೋಷಪಟ್ಟು, ನಂತರ ಕೋಪಗೊಂಡಿದ್ದಾರೆ.


ಬೆಂಗಳೂರು: ಕಂಟೆಂಟ್ ಸೋಶಿಯಲ್ ಮೀಡಿಯಾದ ಜೀವವಾಗಿದೆ. ಬಹುತೇಕರು ಹೊಸ ಕಂಟೆಂಟ್ ಮೂಲಕ ನೆಟ್ಟಿಗರನ್ನು ರಂಜಿಸಲು ಪ್ರಯತ್ನಿಸುತ್ತಿರುತ್ತಾರೆ. ಹೊಸ ಕಂಟೆಂಟ್ ಹೊಂದಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸಹ ಆಗುತ್ತಿರುತ್ತವೆ. ಇದೀಗ ಇಂತಹುವುದೇ ವಿಭಿನ್ನ ಕಂಟೆಂಟ್ ವಿಡಿಯೋ ವೈರಲ್ ಆಗಿದ್ದು, ತಾಯಿಯ ರಿಯಾಕ್ಷನ್ ಕಂಡು ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದು ತಾಯಿ ಮತ್ತು ಮಗನ ವಿಡಿಯೋ ಆಗಿದ್ದು, ಪುತ್ರನಿಗೆ ವಯಸ್ಕರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ ವಿಷಯ ಕೇಳಿದ ತಾಯಿ ಮಾಡಿದ್ದೇನು ಗೊತ್ತಾ? 

ಅಮ್ಮನ್ನ ರಿಯಾಕ್ಷನ್ ನೋಡಿ ಎಂಬ ಶೀರ್ಷಿಕೆಯಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಅಶ್ವಿನ್ ಉನ್ನಿ ಎಂಬವರ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ಮಗ ಅಮ್ಮನಿಗೆ ಕರೆಯುತ್ತಾನೆ. ಅಲ್ಲಿಂದ ಈ ವಿಡಿಯೋ ಶುರುವಾಗುತ್ತದೆ.

Tap to resize

Latest Videos

ಇದನ್ನೂ ಓದಿ: ಹಾಡು ಹೇಳಲಿಲ್ಲ, ಸೊಂಟವೂ ಬಳುಕಿಸಲಿಲ್ಲ; ಆದ್ರೂ ಈ ವಿಡಿಯೋಗೆ 3 ಕೋಟಿಗೂ ಅಧಿಕ ವ್ಯೂವ್

ನನಗೆ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂದು ತಾಯಿಗೆ ಮಗ ಹೇಳುತ್ತಾನೆ. ಈ ವಿಷಯ ತಿಳಿಯುತ್ತಿದ್ದಂತೆ ಮಗನನ್ನು ಅಪ್ಪಿಕೊಂಡ ತಾಯಿ ಮುದ್ದು ಮಾಡುತ್ತಾರೆ. ಆದರೂ ಮಗನ ಮೇಲೆ ಅನುಮಾನಗೊಂಡು ಇದು ನಿಜ ಅಲ್ವಾ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಮಗ, ಹೌದು ಅಮ್ಮಾ.. ಸಿನಿಮಾದಲ್ಲಿ ಕೆಲಸ ಸಿಕ್ಕಿದೆ ಎನ್ನುತ್ತಾನೆ. ಆದ್ರೆ ಇದೊಂದು ಬ್ಲೂ ಫಿಲಂ ಎಂದು ಮಗ ಹೇಳುತ್ತಲೇ ತಾಯಿ ಕೋಪಗೊಳ್ಳುತ್ತಾರೆ. ಅಮ್ಮ ಕೋಪಗೊಳ್ಳುತ್ತಿದ್ದಂತೆ, ವಯಸ್ಕರ ಸಿನಿಮಾದಿಂದ ಆಫರ್ ಬಂದಿರೋದು ನಿಜ. ಆದ್ರೆ ನಾನು ಅದನ್ನು ಒಪ್ಪಿಕೊಂಡಿಲ್ಲ. ಈ ಸಿನಿಮಾ ಮಾಡಿ 4 ಲಕ್ಷ ರೂಪಾಯಿ ಪಡೆಯೋದು ನನಗೆ ಬೇಕಿಲ್ ಎಂದು ತಿಳಿ ಹೇಳುತ್ತಾನೆ. ಅಶ್ವಿನ್ ಉನ್ನಿ ತಮಗೆ ಆಫರ್ ಬಂದಿರುವ ಸ್ಕ್ರೀನ್‌ಶಾಟ್ ಸಹ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋಗೆ ಆರು ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದ್ದು, ಹಲವರು ಮಗನ ನಡೆ ಮತ್ತು ತಾಯಿಯ ರಿಯಾಕ್ಷನ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ಎಲ್ಲರೂ ಕೆಲಸದ ಆಫರ್‌ ಬಗ್ಗೆ ಕೇಳಲು ಕುತೂಹಲ ಹೊಂದಿದ್ದರೆ, ನಾನು ತಾಯಿಯ ರಿಯಾಕ್ಷನ್ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ ಎಂದು ಓರ್ವ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ನೀವು ಆ ಆಫರ್ ರಿಜೆಕ್ಟ್ ಮಾಡಿದ್ದು, ಒಂದು ಅವಾರ್ಡ್‌ಗೆ ಸಮ. ಮಗನಿಗೆ ಕೆಲಸ ಸಿಕ್ಕಾಗ ಹೆಚ್ಚು ಖುಷಿಪಡೋದು ತಾಯಿ. ಆದ್ರೆ ಅದು ಬೇರೆಯ ಕೆಲಸ ಅಂದಾಗ ತಾಯಿ ಮುಖದಲ್ಲಾಗುವ ಬದಲಾವಣೆ ತುಂಬಾ ಅದ್ಭುತವಾಗಿದೆ ಎಂದು ಕಮೆಂಟ್‌ ಬಾಕ್ಸ್‌ನಲ್ಲಿ ಬರೆಯಲಾಗಿದೆ. ಒಂದು ವೇಳೆ ಅಲ್ಲಿ ನಮ್ಮ ತಾಯಿ ಇದ್ರೆ ನಾಲ್ಕು ಏಟು ಬೀಳುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅಂಬಾನಿ ಕುಟುಂಬದ ಕಿರಿ ಸೊಸೆ ರಾಧಿಕಾ ಮರ್ಚೆಂಟ್ ಅಸಲಿ ಮುಖ ಇದೇ ನೋಡಿ; ವೈರಲ್ ಆಗ್ತಿದೆ ವಿಡಿಯೋ

click me!