ಪನ್ನೂನ್ ಹತ್ಯೆ ಸಂಚು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅಮೆರಿಕ ಕೋರ್ಟ್‌ನಲ್ಲಿ ನಿಖಿಲ್ ಗುಪ್ತಾ ದಿಢೀರ್ ತಪ್ಪೊಪ್ಪಿಗೆ!

Kannadaprabha News, Ravi Janekal |   | Kannada Prabha
Published : Feb 15, 2026, 10:51 AM IST
Pannun Murder Plot Nikhil Gupta Pleads Guilty in US Court Sentencing Likely on May 29

ಸಾರಾಂಶ

ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಯ ಸಂಚಿನ ಆರೋಪ ಎದುರಿಸುತ್ತಿದ್ದ ಭಾರತ ಮೂಲದ ನಿಖಿಲ್ ಗುಪ್ತಾ, ಅಮೆರಿಕದ ನ್ಯಾಯಾಲಯದಲ್ಲಿ ತನ್ನ ಅಪರಾಧ ಒಪ್ಪಿಗೆ ಈ ಹಿಂದೆ ಆರೋಪಗಳನ್ನು ನಿರಾಕರಿಸಿದ್ದ ಆತನ ಮೇಲೆ ಇದೀಗ ದೋಷಾರೋಪ ಹೊರಿಸಲಾಗಿದ್ದು, ಮೇ 29 ರಂದು ತೀರ್ಪು ಪ್ರಕಟವಾಗಲಿದೆ.

ನ್ಯೂಯಾರ್ಕ್‌ (ಫೆ.15): ಅಮೆರಿಕ/ಕೆನಡಾ ಪ್ರಜೆ ಆಗಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್‌ ಸಿಂಗ್‌ ಪನ್ನು ಹತ್ಯೆಯ ಸಂಚಿನಲ್ಲಿ ತಾನು ಈವರೆಗೂ ಭಾಗಿಯಾಗಿಲ್ಲ ಎಂದು ಭಾರತ ಮೂಲದ ನಿಖಿಲ್ ಗುಪ್ತಾ ಈವರೆಗೆ ನಿರಾಕರಿಸಿದ್ದರೂ. ಹಠಾತ್‌ ವಿದ್ಯಮಾನವೊಂದರಲ್ಲಿ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಸಾರಾ ನೆಟ್‌ಬರ್ನ್‌ ಅವರೆದುರು ಶುಕ್ರವಾರ ತನ್ನ ಅಪರಾಧ ಒಪ್ಪಿಕೊಂಡಿದ್ದಾನೆ.

ಇದರ ಬೆನ್ನಲ್ಲೇ ಆತನ ಮೇಲೆ ದೋಷಾರೋಪ ಹೊರಿಸಲಾಗಿದೆ. ಮೇ 29ರಂದು ಈ ಸಂಬಂಧ ತೀರ್ಪು ಪ್ರಕಟವಾಗಲಿದೆ.

ಭಾರತದ ವಿರುದ್ಧ ಸದಾ ನಾಲಗೆ ಹರಿಬಿಡುತ್ತಾ, ಪ್ರಧಾನಿ ಸೇರಿ ಇಲ್ಲಿನ ನಾಯಕರಿಗೆ ಜೀವಬೆದರಿಕೆ ಒಡ್ಡುತ್ತಿದ್ದ ಪನ್ನು ಹತ್ಯೆಗೆ ಭಾರತದ ಗುಪ್ತಚರ ಸಂಸ್ಥೆ ರಾ ನಿಖಿಲ್‌ ಗಪ್ತಾರನ್ನು ನೇಮಿಸಿಕೊಂಡಿದೆ ಎಂಬ ಸುದ್ದಿ ಈ ಹಿಂದೆ ಸದ್ದು ಮಾಡಿತ್ತು. ಭಾರತ ಹಾಗೂ ಭಾರತದೊಂದಿಗೆ ನಂಟಿರುವವರ ಜತೆ ಸೇರಿಕೊಂಡು ಗುಪ್ತಾ ಪನ್ನು ಹತ್ಯೆಗೆ ಸಂಚು ರೂಪಿಸಿರುವುದಾಗಿ ಆರೋಪಪಟ್ಟಿ, ಕೋರ್ಟ್‌ ದಾಖಲೆ ಹಾಗೂ ಹೇಳಿಕೆಗಳ ಆಧಾರದಲ್ಲಿ ಆರೋಪಿಸಲಾಗಿತ್ತು. ಆದರೆ ಈತ ಭಾರತ ಸರ್ಕಾರದ ನೌಕರ ಅಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿತ್ತು.

ಶಿಕ್ಷೆಯೆಷ್ಟು?:

ಅಮೆರಿಕದ ಕಾನೂನಿನ ಪ್ರಕಾರ, ಸುಪಾರಿ ಕೊಲೆಗೆ 10 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಅದರ ಸಂಚಿಗೂ ಸಮಾನ ಶಿಕ್ಷೆಯಿದೆ. ಅಕ್ರಮ ಹಣ ವರ್ಗಾವಣೆಗೆ ಗರಿಷ್ಠ 20 ವರ್ಷ ಸೆರೆವಾಸದ ಸಜೆ ಕೊಡಲಾಗುವುದು. ಗುಪ್ತಾ ವಿರುದ್ಧ ಮೂರೂ ಆರೋಪಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೀರತ್‌ನಲ್ಲಿ ಐತಿಹಾಸಿಕ ಹೆಜ್ಜೆ: ಡ್ರೋನ್‌ಗಳಿಗಾಗಿಯೇ ಮೀಸಲಾದ ದೇಶದ ಮೊಟ್ಟಮೊದಲ ರನ್‌ವೇ!
India Latest News Live: ಪನ್ನೂನ್ ಹತ್ಯೆ ಸಂಚು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಅಮೆರಿಕ ಕೋರ್ಟ್‌ನಲ್ಲಿ ನಿಖಿಲ್ ಗುಪ್ತಾ ದಿಢೀರ್ ತಪ್ಪೊಪ್ಪಿಗೆ!