ರಸ್ತೆ ದಾಟುತ್ತಿದ್ದ ಯುವತಿಯ ಸ್ಕರ್ಟ್ ಎಳೆದ ಬೈಕ್ ಸವಾರನ ವಿಡಿಯೋ ವೈರಲ್

Published : Aug 26, 2025, 07:13 PM IST
Viral Video

ಸಾರಾಂಶ

ಬೈಕ್‌ನಲ್ಲಿದ್ದ ಇಬ್ಬರು ಪುಂಡರು ರಸ್ತೆ ದಾಟುತ್ತಿದ್ದ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಓರ್ವ ಯುವತಿಯ ಸ್ಕರ್ಟ್ ಎಳೆದ ಘಟನೆ ನಡೆದಿದೆ. ಈ ದೃಶ್ಯ ಕಾರ್ ಡ್ಯಾಶ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಂಡೀಗಢ: ಬೈಕ್‌ನಲ್ಲಿದ್ದ ಇಬ್ಬರು ಪುಂಡರು ರಸ್ತೆ ದಾಟುತ್ತಿದ್ದ ಯುವತಿಯರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಯುವತಿಯ ಸ್ಕರ್ಟ್ ಎಳೆದ ಬಳಿಕ ಪುಂಡರು ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಬೈಕ್ ಹಿಂದೆಯೇ ಬರುತ್ತಿದ್ದ ಕಾರ್ ಡ್ಯಾಶ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಾಡ ಹಗಲೇ ಇಂತಹ ಘಟನೆ ನಡೆದಿರೋದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ. ಈ ಘಟನೆ ನಡೆದಿದ್ದು ಎಲ್ಲಿ? ಮುಂದೇನಾಯ್ತು ಎಂದು ನೋಡೋಣ ಬನ್ನಿ.

ಈ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದ್ದು, ವಿಡಿಯೋ ವೈರಲ್ ಬೆನ್ನಲ್ಲೇ ಪ್ರಕರಣ ಮುನ್ನಲೆಗೆ ಬಂದಿದೆ. ಮೂವರು ಯುವತಿಯರು ಪಾಣಿಪತ್ ನಗರದ ಪ್ರಮುಖ ರಸ್ತೆಯನ್ನು ಕ್ರಾಸ್ ಮಾಡುತ್ತಿರುತ್ತಾರೆ. ಇದೇ ವೇಳೆ ಇಬ್ಬರು ಯುವಕರು ಹೋಗುತ್ತಿರುತ್ತಾರೆ. ಹಿಂಬದಿ ಸವಾರ, ರಸ್ತೆ ಕ್ರಾಸ್ ಮಾಡುತ್ತಿದ್ದ ಮೂವರು ಯುವತಿಯರನ್ನು ಮುಟ್ಟಲು ಪ್ರಯತ್ನಿಸುತ್ತಾನೆ. ಈ ವೇಳೆ ಯುವತಿಯೊಬ್ಬರ ಸ್ಕರ್ಟ್ ಆತ ಸ್ಪರ್ಶಿಸುತ್ತಾನೆ. ಇದೆಲ್ಲವೂ ಬೈಕ್ ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

 

 

ಈ ವಿಡಿಯೋ ವೈರಲ್ ಬೆನ್ನಲ್ಲೇ ಪಾಣಿಪತ್ ಪೊಲೀಸರು ಇಬ್ಬರು ಕಾಮುಕರ ಹೆಡೆಮುರಿ ಕಟ್ಟಿದ್ದಾರೆ. ನಂತರ ಇಬ್ಬರು ಕುಂಟುತ್ತಾ ಬರುವ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಪೊಲೀಸರು ಶೇರ್ ಮಾಡಿಕೊಂಡಿದ್ದಾರೆ. ಹಾಡ ಹಗಲೇ ಜನಸಂದಣಿ ಇರೋ ಪ್ರದೇಶದಲ್ಲಿ ಪುಂಡರು ಅಸಭ್ಯವಾಗಿ ನಡೆದುಕೊಂಡಿರೋದು ಮಹಿಳೆಯರಲ್ಲಿ ಭಯ ಹುಟ್ಟು ಹಾಕಿದೆ. ಹಗಲಿನಲ್ಲಿಯೂ ಮಹಿಳೆಯರಿಗೆ ಸುರಕ್ಷತೆ ಇಲ್ಲವಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

 

 

ತುಟಿಗೆ ತುಟಿ ಸೇರಿಸಿದ ಜೋಡಿ

ಉತ್ತರ ಪ್ರದೇಶದ ಲಕ್ನೋ ನಗರದ ಸಿಎಂ ನಿವಾಸದ ರಸ್ತೆಯಲ್ಲಿಯೇ ಜೋಡಿ ಅಸಭ್ಯವಾಗಿ ವರ್ತನೆ ತೋರಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೇಗವಾಗಿ ಚಲಿಸುತ್ತಿದ್ದ ಕಾರ್‌ನಲ್ಲಿ ಜೋಡಿ ಸನ್‌ರೂಫ್ ತೆಗೆದು ಹೊರ ಬಂದಿದ್ದಾರೆ. ಅಲ್ಲಿಯೇ ಒಬ್ಬರಿಗೊಬ್ಬರು ಮುದ್ದಿಸುತ್ತಾ ಅಪ್ಪಿಕೊಂಡು ತಂಪಾದ ಗಾಳಿಯಲ್ಲಿ ತುಟಿಗೆ ತುಟಿ ಸೇರಿಸಿದ್ದಾರೆ. ಈ ವಿಡಿಯೋದಲ್ಲಿ ಕಾರ್ ನಂಬರ್ UP 78, GB 0130 ಎಂದು ಸ್ಪಷ್ಟವಾಗಿ ಕಾಣಿಸುತ್ತದೆ. ಚಲಿಸುತ್ತಿರುವ ಬೈಕ್, ಕಾರ್‌ ಸನ್ ರೂಫ್ ತೆರೆದು ಚುಂಬಿಸೋದು ಟ್ರೆಂಡ್ ಬದಲಾಗಿದೆ. ಚೆನ್ನೈನ ವಾಹನ ದಟ್ಟನೆಯ ರಸ್ತೆಯಲ್ಲಿ ಕಾನೂನು ವಿದ್ಯಾರ್ಥಿ ತನ್ನ ಗೆಳತಿ ಜೊತೆ ಎಂಜಾಯ್ ಮಾಡಿ ಬಂಧನಕ್ಕೊಳಗಾಗಿದ್ದನು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್