ಸೋನಿಯಾ ಕುಟುಂಬದ ಟ್ರಸ್ಟ್‌ನಲ್ಲಿ ವಿದೇಶಿ ಹಣ..? ತನಿಖೆಗೆ ಸಚಿವರ ತಂಡ ರೆಡಿ

By Kannadaprabha News  |  First Published Jul 9, 2020, 8:39 AM IST

ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಚೀನಾದಿಂದ ಹಣ ಹರಿದುಬಂದಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಈಗ ನೆಹರು- ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಮೂರು ಟ್ರಸ್ಟ್‌ಗಳ ಹಣಕಾಸು ವ್ಯವಹಾರಗಳ ತನಿಖೆಗೆ ಅಂತರ್‌-ಸಚಿವಾಲಯ ತಂಡವೊಂದನ್ನು ಕೇಂದ್ರ ಸರ್ಕಾರ ರಚಿಸಿದೆ.


ನವದೆಹಲಿ(ಜು.09): ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಚೀನಾದಿಂದ ಹಣ ಹರಿದುಬಂದಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಈಗ ನೆಹರು- ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಮೂರು ಟ್ರಸ್ಟ್‌ಗಳ ಹಣಕಾಸು ವ್ಯವಹಾರಗಳ ತನಿಖೆಗೆ ಅಂತರ್‌-ಸಚಿವಾಲಯ ತಂಡವೊಂದನ್ನು ಕೇಂದ್ರ ಸರ್ಕಾರ ರಚಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸತ್ಯದ ಪರ ಹೋರಾಡುವವರನ್ನು ಬೆದರಿಸಲಾಗದು ಎಂದು ಕಿಡಿಕಾರಿದ್ದಾರೆ.

ರಾಜೀವ್‌ ಗಾಂಧಿ ಫೌಂಡೇಶನ್‌, ರಾಜೀವ್‌ ಗಾಂಧಿ ಚಾರಿಟೇಬಲ್‌ ಟ್ರಸ್ಟ್‌ ಹಾಗೂ ಇಂದಿರಾ ಗಾಂಧಿ ಮೆಮೋರಿಯಲ್‌ ಟ್ರಸ್ಟ್‌ಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ, ವಿದೇಶಿ ದೇಣಿಗೆ ಸಂಗ್ರಹ, ತೆರಿಗೆ ವಂಚನೆ ಮುಂತಾದ ಆರೋಪಗಳ ಕುರಿತು ತನಿಖೆ ನಡೆಯಲಿದೆ.

Tap to resize

Latest Videos

undefined

ಸಾಂವಿಧಾನಿಕ ಹಕ್ಕು ಅಧ್ಯಾಯಕ್ಕೆ CBSE ಕೊಕ್‌: ಶೇ. 30 ಪಠ್ಯಕ್ಕೆ ಕತ್ತರಿ

ಜಾರಿ ನಿರ್ದೇಶನಾಲಯ(ಇ.ಡಿ)ದ ವಿಶೇಷ ನಿರ್ದೇಶಕರು ಈ ತಂಡದ ನೇತೃತ್ವ ವಹಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ರಾಜೀವ್‌ ಗಾಂಧಿ ಹೆಸರಿನ ಟ್ರಸ್ಟ್‌ಗಳಿಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮುಖ್ಯಸ್ಥೆಯಾಗಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಅವರು ಸೋನಿಯಾ ಗಾಂಧಿ ಅಧ್ಯಕ್ಷತೆಯ, ರಾಹುಲ್‌ ಮತ್ತು ಪ್ರಿಯಾಂಕಾ ವಾದ್ರಾ ಸದಸ್ಯರಾಗಿರುವ ಈ ಟ್ರಸ್ಟ್‌ಗಳು ಹಣಕಾಸು ಅವ್ಯವಹಾರ ನಡೆಸಿವೆ ಎಂದು ಆರೋಪಿಸಿದ್ದರು.

1 ತಿಂಗಳೊಳಗೆ ಗುತ್ತಿಗೆ ವೈದ್ಯರು ಕಾಯಂ, ಮುಷ್ಕರ ನಿಲ್ಲಿಸಿ ವೈದ್ಯರು ಇಂದು ಕೆಲಸಕ್ಕೆ ಹಾಜರ್

ರಾಜೀವ್‌ ಪ್ರತಿಷ್ಠಾನಕ್ಕೆ ಚೀನಾದಿಂದ ಹಣ ದೇಣಿಗೆ ಬಂದಿದ್ದು, ಇದು ದೇಶದ ಭದ್ರತೆಯ ಜೊತೆ ರಾಜಿ ಮಾಡಿಕೊಂಡಿದ್ದಕ್ಕೆ ಸಂದಾಯವಾದ ಲಂಚವೇ ಎಂದೂ ಪ್ರಶ್ನಿಸಿದ್ದರು. ರಾಜೀವ್‌ ಪ್ರತಿಷ್ಠಾನದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಹಾಗೂ ಮಾಜಿ ವಿತ್ತ ಮಂತ್ರಿ ಪಿ.ಚಿದಂಬರಂ ಕೂಡ ಸದಸ್ಯರಾಗಿದ್ದಾರೆ.

click me!