ನೃತ್ಯ ಕಲಿಸುವ ವೇಳೆ ಪುಟ್ಟ ಬಾಲೆಯ ಪಾದಸ್ಪರ್ಶ... ಕಥಕ್ ಮಾಂತ್ರಿಕನ ಸರಳತೆಗೆ ನೆಟ್ಟಿಗರ ಸೆಲ್ಯೂಟ್

Suvarna News   | Asianet News
Published : Jan 18, 2022, 06:44 PM IST
ನೃತ್ಯ ಕಲಿಸುವ ವೇಳೆ ಪುಟ್ಟ ಬಾಲೆಯ ಪಾದಸ್ಪರ್ಶ... ಕಥಕ್ ಮಾಂತ್ರಿಕನ ಸರಳತೆಗೆ ನೆಟ್ಟಿಗರ ಸೆಲ್ಯೂಟ್

ಸಾರಾಂಶ

  ಕಥಕ್ ಮಾಂತ್ರಿಕನ ಸರಳತೆ ಪುಟ್ಟ ಬಾಲೆಯ ಪಾದಸ್ಪರ್ಶ ಬಿರ್ಜು ಮಹಾರಾಜ್ ಸರಳತೆಗೆ ನೆಟ್ಟಿಗರು ಫಿದಾ

ದೆಹಲಿ(ಜ. 18): ಕಥಕ್ ಮಾಂತ್ರಿಕ ಪಂಡಿತ್ ಬಿರ್ಜು ಮಹಾರಾಜ್ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರ ನಿಧನದ ನಂತರ ಅವರ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೃತ್ಯ ಕಲಿಸುವ ವೇಳೆ ಬಿರ್ಜು ಮಹಾರಾಜ್  (Pandit Birju Maharaj) ಅವರು ಪುಟ್ಟ ಬಾಲೆಯ ಪಾದ ಮುಟ್ಟುವ ವಿಡಿಯೋ ಇದಾಗಿದೆ. ಮಹಾರಾಜ್ ಜಿ ಅವರ ಮರಣದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಹಲವಾರು ವೀಡಿಯೊಗಳಲ್ಲಿ, ಯುವ ವಿದ್ಯಾರ್ಥಿಯೊಂದಿಗೆ ಅವರ ಸಂವಾದದ ಹಳೆಯ ವೀಡಿಯೊವೊಂದು ವೈರಲ್‌ ಆಗಿದೆ. 

ಸರ್ವನ್_ಕೆ 86 (Sarvan_K86) ಎಂಬ ಖಾತೆಯಿಂದ ಪೋಸ್ಟ್ ಆಗಿರುವ ಈ ವಿಡಿಯೋದಲ್ಲಿ ಪಂಡಿತ್ ಬಿರ್ಜು ಮಹಾರಾಜ್ ಯುವ ವಿದ್ಯಾರ್ಥಿಗೆ ಆಶೀರ್ವಾದ ನೀಡುತ್ತಿರುವ ದೃಶ್ಯವಿದೆ. ಪಂಡಿತ್ ಬಿರ್ಜು ಮಹಾರಾಜ್ ಚಿಕ್ಕ ಹುಡುಗಿಗೆ ಒಂದು ಜೋಡಿ ಗೆಜ್ಜೆಗಳನ್ನು(ghungroos) ನೀಡುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಬಳಿಕ ಹುಡುಗಿಯ ಹಣೆಯ ಮೇಲೆ ತಿಲಕವನ್ನು ಹಾಕಿದ ಅವರು ಅವಳ ಪಾದಗಳನ್ನು ಸ್ಪರ್ಶಿಸುವ ಮೂಲಕ ಪ್ರದರ್ಶನದ ಆರಂಭದಲ್ಲಿ ಹೇಗೆ ನಿಲ್ಲಬೇಕು ಎಂಬುದನ್ನು ಕಲಿಸಲು ಮುಂದಾಗುತ್ತಾರೆ. ಕಥಕ್ ದಂತಕಥೆಯೊಬ್ಬರು ಇಷ್ಟೊಂದು ಸರಳವಾಗಿರುವುದನ್ನು ತೋರಿಸುವ ವಿಡಿಯೋ ಇದಾಗಿದೆ. 

ಕಥಕ್ ಮಾಂತ್ರಿಕ ಪಂಡಿತ್ ಬಿರ್ಜು ಮಹಾರಾಜ್ ಅವರು ಜನವರಿ 17 ರಂದು ತಮ್ಮ ದೆಹಲಿಯ ಮನೆಯಲ್ಲಿ ನಿಧನರಾದರು. ಅವರ ನಿಧನಕ್ಕೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಸಮಾಜದ ಎಲ್ಲಾ ವರ್ಗದ ಜನರು ಟ್ವಿಟರ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ( Narendra Modi), ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ (Ram Nath Kovind), ಗಾಯಕ ಅದ್ನಾನ್ ಸಾಮಿ (Adnan Sami), ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರು ಸಾಮಾಜಿಕ ಮಾಧ್ಯಮದಲ್ಲಿ ಬಿರ್ಜು ಮಹಾರಾಜ್ ಅವರೊಂದಿಗಿನ ಒಡನಾಟದ ಫೋಟೋಗಳನ್ನು ಪೋಸ್ಟ್‌ ಮಾಡುವ ಮೂಲಕ  ಮಹಾರಾಜ್ ಜಿಯನ್ನು ನೆನಪಿಸಿಕೊಂಡರು.

 

Pandit Birju Maharaj: ಜನಪ್ರಿಯ ಕಥಕ್ ನೃತ್ಯಗಾರ, ಪದ್ಮವಿಭೂಷಣ ಪುರಸ್ಕೃತ ಬಿರ್ಜು ಮಹಾರಾಜ್ ನಿಧನ

ಬಿರ್ಜು ಮಹಾರಾಜ್ ಅವರಿಗೆ ನೃತ್ಯ ಕ್ಷೇತ್ರದಲ್ಲಿ ಅವರ ಕೊಡುಗೆಗಳಿಗಾಗಿ 1986 ರಲ್ಲಿಯೇ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್