
ಲಖನೌ(ಮಾ.06): ಲಕ್ಕಿ ಡ್ರಾ ಮೂಲಕ ಯುವತಿಯೊಬ್ಬಳು ನಾಲ್ವರು ಯುವಕರ ಪೈಕಿ ಒಬ್ಬರನ್ನು ತನ್ನ ವರನಾಗಿ ಆಯ್ಕೆ ಮಾಡಿಕೊಂಡಿರುವ ವಿಚಿತ್ರಕಾರಿ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ನಗರ ಎಂಬ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ನಡೆಯುವ ಐದು ದಿನಗಳಿಗೂ ಮುನ್ನ ಯುವತಿಯು ನಾಲ್ವರು ಯುವಕರೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಆ ಬಳಿಕ ನಾಲ್ವರು ಯುವಕರ ಪೈಕಿ ಓರ್ವನ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಈ ಸಂಬಂಧ ವಿಚಾರ ತಿಳಿದ ಯುವತಿಯ ಪೋಷಕರು ದೂರು ನೀಡಲು ಮುಂದಾಗಿದ್ದು, ಈ ವೇಳೆ ಮಧ್ಯಸ್ಥಿಕೆ ವಹಿಸಿದ ಪಂಚಾಯ್ತಿಯು ಈ ನಾಲ್ವರು ಯುವಕರ ಪೈಕಿ ಒಬ್ಬರು ಯುವತಿಯನ್ನು ಮದ್ವೆಯಾಗಲು ಸೂಚಿಸಿದ್ದಾರೆ.
ಆದರೆ ಯಾರೊಬ್ಬರೂ ಮದ್ವೆಗೆ ಮುಂದೆ ಬರದ ಹಾಗೂ ಯುವತಿಯು ಸಹ ಯಾರನ್ನೂ ಸಹ ಆಯ್ಕೆ ಮಾಡಲಿಲ್ಲ. ಹೀಗಾಗಿ 4 ಚೀಟಿಗಳಲ್ಲಿ ಹೆಸರು ಬರೆಸಿ ಒಂದನ್ನು ಎತ್ತಿಸಿ ವರನನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ