
ವಿಶ್ವಸಂಸ್ಥೆ(ಮಾ.06): 2019ರಲ್ಲಿ ವಿಶ್ವಾದ್ಯಂತ ಒಟ್ಟಾರೆ 93 ಕೋಟಿ ಟನ್ನಷ್ಟುಪ್ರಮಾಣದ ಆಹಾರ ವ್ಯರ್ಥವಾಗಿದೆ ಎಂದು ವಿಶ್ವಸಂಸ್ಥೆ ವರದಿಯೊಂದು ಹೇಳಿದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಆಹಾರ ಪೋಲು ಸೂಚ್ಯಂಕ ವರದಿ-2021ರ ಅನ್ವಯ ಭಾರತದಲ್ಲೂ 1 ವರ್ಷದಲ್ಲಿ 6.8 ಕೋಟಿ ಟನ್ನಷ್ಟುಪ್ರಮಾಣದ ಆಹಾರ ಉಪಯೋಗಕ್ಕೆ ಬಾರದೆ ಹಾಳಾಗಿದೆ ಎಂದು ಉಲ್ಲೇಖಿಸಲಾಗಿದೆ.
ಇದರಲ್ಲಿ ಶೇ.69ರಷ್ಟುಪ್ರಮಾಣದ ಆಹಾರವು ಮನೆಗಳಿಂದ ಆದರೆ, ಶೇ.26ರಷ್ಟುಆಹಾರ ಸೇವೆ ಕಲ್ಪಿಸುವ ಹೋಟೆಲ್ ಸೇರಿ ಇನ್ನಿತರ ಸಂಸ್ಥೆಗಳಿಂದ ಮತ್ತು ಶೇ.13ರಷ್ಟುಆಹಾರ ನಿರುಪಯೋಗವು ಚಿಲ್ಲರೆ ಮಳಿಗಳಿಂದ ಪೋಲಾಗುತ್ತಿದೆ. ತನ್ಮೂಲಕ ಜಾಗತಿಕ ಆಹಾರ ಉತ್ಪಾದನೆಯ ಶೇ.17ರಷ್ಟು ಪ್ರಮಾಣದ ಆಹಾರವು ವ್ಯರ್ಥವಾಗುತ್ತಿದೆ ಎಂದು ತಿಳಿಸಲಾಗಿದೆ.
ವರ್ಷಕ್ಕೆ 6,87,60,163 ಟನ್ನಷ್ಟುಆಹಾರ ವ್ಯರ್ಥವಾಗಿರುವ ಭಾರತದಲ್ಲಿ ಪ್ರತಿಯೊಬ್ಬ ಭಾರತೀಯನಿಂದ ವರ್ಷಕ್ಕೆ ಸರಾಸರಿ 50 ಕೇಜಿಯಷ್ಟುಆಹಾರ ನಿರುಪಯುಕ್ತವಾಗುತ್ತಿದೆ. ಆದರೆ ಅಮೆರಿಕದ ಪ್ರಜೆಯೊಬ್ಬ ವರ್ಷಕ್ಕೆ 59 ಕೇಜಿ ಮತ್ತು ಚೀನಾದಲ್ಲಿ 64 ಕೇಜಿಯಷ್ಟುಆಹಾರವನ್ನು ವ್ಯರ್ಥ ಮಾಡುತ್ತಾನೆ. ಹೀಗಾಗಿ ಹವಾಮಾನ ವೈಪರಿತ್ಯದ ವಿರುದ್ಧ ನಾವು ಗಂಭೀರ ಕ್ರಮ ವಹಿಸಬೇಕಾದರೆ ಮೊದಲು ಆಹಾರದ ವ್ಯರ್ಥ ತಡೆಯಬೇಕು ಎಂದು ವಿಶ್ವಸಂಸ್ಥೆಯ ಪರಿಸರ ವಿಭಾಗದ ಕಾರ್ಯಕಾರಿ ನಿರ್ದೇಶಕ ಪ್ರತಿಪಾದಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ