
ಮುಂಬೈ: ಅಕ್ಟೋಬರ್ 14 ರಂದು ಅಂದರೆ ನಿನ್ನೆಯ ದಿನ ಮುಖೇಶ್ ಅಂಬಾನಿ (Mukesh Ambani) ಅವರು ಜಿಯೋ 30 ಸಾವಿರ ಕೋಟಿ ಐಪಿಓ (IPO) ಘೋಷಿಸಿ ತನ್ನ ಗ್ರಾಹಕರಿಗೆ ಗುಡ್ನ್ಯೂಸ್ ಕೊಟ್ಟಿದ್ದರು. ವಿಪರ್ಯಾಸ ಏನೆಂದರೆ ಇದೇ ದಿನವೇ ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿಗೆ (Anil Ambani) ಆಘಾತ ಆಗಿದೆ. ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಅನಿಲ್ ಅಂಬಾನಿಗೆ ಸೇರಿದ ಬರೋಬ್ಬರಿ 2 ಸಾವಿರ ಕೋಟಿಯನ್ನ ಜಪ್ತಿ ಮಾಡಿದೆ.
ರಿಲಯನ್ಸ್ ಪವರ್ ಲಿಮಿಟೆಡ್ನ (Reliance Power Ltd) 2,032.81 ಕೋಟಿ ಮೌಲ್ಯದ ಆಸ್ತಿಗಳನ್ನು ED ಮುಟ್ಟುಗೋಲು ಹಾಕಿಕೊಂಡಿದೆ. ಫೆಮಾ (ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆ) ಸೆಕ್ಷನ್ 3A ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿದೆ. ಜಪ್ತಿ ಆಗಿರುವ ಒಟ್ಟು ಮೊತ್ತವು ರಿಲಯನ್ಸ್ ಪವರ್ ಬ್ಯಾಂಕ್ ಖಾತೆಯಲ್ಲಿರುವ ಹಣ ಹಾಗೂ ಸಸಾನ್ ಪವರ್ ಲಿಮಿಟೆಡ್ನ (Sasan Power Limited) ಮೊತ್ತ ಎಂದು ಹೇಳಲಾಗಿದೆ.
ಅಂದರೆ ಅನಿಲ್ ಅಂಬಾನಿ ಅವರು ವಿದೇಶದಲ್ಲಿ ಅಕ್ರಮವಾಗಿ ಕರೆನ್ಸಿ ಇರಿಸಲಾಗಿದ್ದಾರೆ ಎನ್ನಲಾಗಿರುವ ಒಟ್ಟು ಮೊತ್ತಕ್ಕೆ ಸಮವಾಗಿ ಹಣವನ್ನು ಜಪ್ತಿ ಮಾಡಲಾಗಿದೆ. ಅನಿಲ್ ಅಂಬಾನಿ ಅವರ ವಿದೇಶಿ ಕರೆನ್ಸಿ ವಿಚಾರಣೆ ತನಿಖೆ ವೇಳೆ ಸೆಬಿಯಿಂದ ಇಡಿ ಮಾಹಿತಿಯನ್ನು ಪಡೆದುಕೊಂಡಿತ್ತು. ಸೆಬಿ ಮಾಹಿತಿಯಂತೆ.. ಕಂಪನಿಯ ಖಾತೆಯಲ್ಲಿದ್ದ 2,032.81 ಕೋಟಿ ಹಣವನ್ನು ಸೀಜ್ ಮಾಡಿದೆ.
ಜೊತೆಗೆ ಅನಿಲ್ ಅಂಬಾನಿಗೆ ಸೇರಿದ ಕಂಪನಿಯ ವಿದೇಶಿ ಹೂಡಿಕೆ ಹಾಗೂ ಮುಂಗಡಗಳಿಗೆ ಸಂಬಂಧಿಸಿದ ತನಿಖೆಗಳು ವಿಚಾರಣೆಯ ಹಂತದಲ್ಲಿದೆ.
ರಿಲಯನ್ಸ್ ನ್ಯಾಚುರಲ್ ರಿಸೋರ್ಸಸ್ ಲಿಮಿಟೆಡ್ 2006ರಲ್ಲಿ ವಿದೇಶಿ ಕರೆನ್ಸಿ ಕನ್ವರ್ಟಿಬಲ್ ಬಾಂಡ್ಗಳ ಮೂಲಕ ಸುಮಾರು 300 ಮಿಲಿಯನ್ ಡಾಲರ್ ಸಂಗ್ರಹಿಸಿದೆ. ಇದರಲ್ಲಿ 275 ಮಿಲಿಯನ್ ಡಾಲರ್ ಹಣವನ್ನು ಸಿಂಗಾಪುರ ಮೂಲದ ಅಂಗಸಂಸ್ಥೆಯಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪ ಇದೆ. ಈ ನಿಧಿಯ ಆಧಾರದ ಮೇಲೆ ಬಿವಿಐನಲ್ಲಿರುವ ಕಂಪನಿಗಳಿಗೆ ಸಾಲಗಳನ್ನು ನೀಡಲಾಗಿದೆ. ಈ ಕಂಪನಿಗಳನ್ನು ಭಾರತದಿಂದ ರಿಲಯನ್ಸ್ನ ಅನಿಲ್ ಅಂಬಾನಿ ಗುಂಪು ನಿಯಂತ್ರಿಸುತ್ತದೆ ಎಂಬ ಆರೋಪ ಇದೆ. ಇದೇ ಕಾರಣಕ್ಕೆ ಇಡಿ ತನಿಖೆ ನಡೆಸುತ್ತಿದೆ.
ಅಂದ್ಹಾಗೆ ಇಡಿ ಅಧಿಕಾರಿಗಳು ಅನಿಲ್ ಅಂಬಾನಿಗೆ ಈ ರೀತಿಯ ಶಾಕ್ ನೀಡೋದು ಹೊಸದೇನೂ ಅಲ್ಲ. ಈ ಹಿಂದೆ 9 ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. 2025ರಲ್ಲಿ ಜಾರಿ ನಿರ್ದೇಶನಾಲಯವು ರಿಲಯನ್ಸ್ ಗ್ರೂಪ್ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಂಡಿತ್ತು. ಆಗ ರಿಲಯನ್ಸ್ ಗ್ರೂಪ್ಗೆ ಸಂಬಂಧಿಸಿದ 1400 ಕೋಟಿ ಹಣವನ್ನು ಜಪ್ತಿ ಮಾಡಿತ್ತು. ಹಾಗೆ ನೋಡಿದ್ರೆ ಅನಿಲ್ ಅಂಬಾನಿಗೆ ಸೇರಿದ 9000 ಕೋಟಿ ಮೌಲ್ಯದ ಆಸ್ತಿಯನ್ನ ಇಡಿ ಅಧಿಕಾರಿಗಳು ಇಲ್ಲಿಯವರೆಗೆ ಜಪ್ತಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ