ಪಾಕಿಸ್ತಾನದ ಮಹಿಳೆ ನಮ್ಮಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ..!

By Kannadaprabha News  |  First Published Jan 1, 2021, 9:08 AM IST

ಅಚ್ಚರಿಯಾದ್ರೂ ಇದು ಸತ್ಯ, ಪಾಕಿಸ್ತಾನದ ಪ್ರಜೆಯೊಬ್ಬಳು ನಮ್ಮ ದೇಶದ ಗ್ರಾಮಪಂಚಾಯತ್‌ವೊಂದರಲ್ಲಿ ಅಧ್ಯಕ್ಷೆಯಾಗಿದ್ದಾರೆ. ಎಲ್ಲಿ? ಹೇಗೆ? ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.


ಆಗ್ರಾ(ಜ.01): ಪಾಕಿಸ್ತಾನ ಮೂಲದ 65 ವರ್ಷದ ಬಾನೋ ಬೇಗಂ ಎಂಬ ಮಹಿಳೆಯೊಬ್ಬಳು ಉತ್ತರ ಪ್ರದೇಶದ ಎಟಾ ಜಿಲ್ಲೆಯ ಗ್ರಾಮ ಪಂಚಾಯ್ತಿಯೊಂದರ ಅಧ್ಯಕ್ಷೆಯಾಗಿರುವ ಅಚ್ಚರಿಯ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ದೀರ್ಘಕಾಲಿಕ ವೀಸಾ ಪಡೆದು ಆಕೆ ಭಾರತದಲ್ಲಿ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಮತ್ತಿತರ ದಾಖಲೆಗಳನ್ನು ಪಡೆದಿದ್ದಾಳೆಯೇ ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಈ ನಡುವೆ ಆಕೆ ವಿರುದ್ಧ ಎಫ್‌ಐಆರ್‌ ಕೂಡ ದಾಖಲಿಸಲಾಗಿದೆ.

Latest Videos

undefined

ಹೊಸ ವರ್ಷ: ಕೆಲವು ಮೊಬೈಲ್‌ಗಳಲ್ಲಿ ವಾಟ್ಸಪ್‌ ಸ್ಥಗಿತ, ಇಂದಿನಿಂದ ಏನೇನು ಬದಲಾಗುತ್ತೆ...? ಇಲ್ಲಿ ನೋಡಿ

ಪಾಕಿಸ್ತಾನದ ಕರಾಚಿ ನಿವಾಸಿ ಬಾನೋ ಬೇಗಂ 35 ವರ್ಷಗಳ ಹಿಂದೆ ಉತ್ತರ ಪ್ರದೇಶದ ಎಟಾ ಜಿಲ್ಲೆಯ ಸಂಬಂಧಿಕರ ಮನೆಗೆ ಬಂದು ನೆಲೆಸಿದ್ದಳು. ಬಳಿಕ ಆಕೆ ಸ್ಥಳೀಯ ವ್ಯಕ್ತಿಯೊಬ್ಬರನ್ನು ವಿವಾಹವಾಗಿ ದೀರ್ಘಕಾಲಿಕ ವೀಸಾದಡಿಯಲ್ಲಿ ಎಟಾದಲ್ಲಿಯೇ ವಾಸಿಸುತ್ತಿದ್ದಾಳೆ. ಈ ನಡುವೆ 2015ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗ್ವಾದೌ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಳು. ಆದರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದ ಶೆಹ್ನಾಜ್‌ ಬೇಗಂ ಇತ್ತೀಚೆಗೆ ಮೃತಪಟ್ಟ ಹಿನ್ನೆಲೆಯಲ್ಲಿ ಹಂಗಾಮಿ ಪಂಚಾಯ್ತಿ ಅಧ್ಯಕ್ಷೆಯಾಗಿ ಗ್ರಾಮ ಸಮಿತಿ ಬಾನೋ ಬೇಗಂಳನ್ನು ಆಯ್ಕೆ ಮಾಡಿತ್ತು. ಆದರೆ ಬಾನೋ ಪಾಕಿಸ್ತಾನಿ ನಿವಾಸಿ ಎಂದು ಗ್ರಾಮಸ್ಥರೊಬ್ಬರು ದೂರು ದಾಖಲಿಸದ ಬಳಿಕವಷ್ಟೇ ಈ ವಿಷಯ ಬೆಳಕಿಗೆ ಬಂದಿದೆ. ಈ ವಿಷಯ ಗ್ರಾಮಸ್ಥರು ಸೇರಿದಂತೆ ಸ್ಥಳೀಯ ಆಡಳಿತ ವರ್ಗಕ್ಕೇ ಅಚ್ಚರಿ ಮೂಡಿಸಿದೆ. ಇದರ ಬೆನ್ನಲ್ಲೇ ಬಾನೋ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾಳೆ.

click me!