
ನವದೆಹಲಿ(ಸೆ.05): ಪಾಕಿಸ್ತಾನ ಸೇನೆ ಹಾಗೂ ಪಾಕಿಸ್ತಾನ ಸರ್ಕಾರ ಉಗ್ರರನ್ನು ಸಾಕಿ ಸಲಹಿ ಭಾರತದ ವಿರುದ್ಧದ ಕೃತ್ಯಕ್ಕೆ ಬಳಸಿಕೊಳ್ಳುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಈ ಹಿಂದಿನ ಹಲವು ಭಯೋತ್ಪಾದಕ ದಾಳಿಯಲ್ಲಿ ಈ ಕೃತ್ಯ ಬಹಿರಂಗವಾಗಿದೆ. ಇದೀಗ ಮತ್ತೆ ಸಕ್ಷಿ ಸಮೇತ ಪಾಕಿಸ್ತಾನದ ಭಯೋತ್ಪದನಾ ಕೃತ್ಯ ಬಯಲಾಗಿದೆ. ಭಾರತದಲ್ಲಿ ಆತ್ಮಾಹುತಿ ದಾಳಿಗೆ ನಡೆಸಲು ಪಾಕಿಸ್ತಾನ ಗಡಿ ಭಾಗದಿಂದ ಒಳನುಸುಳಿದ್ದ ಉಗ್ರ ತಬ್ರಕ್ ಹುಸೈನ್ ಭಾರತದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಈತನ ಮೃತದೇಹವನ್ನು ಪಾಕಿಸ್ತಾನ ಸ್ವೀಕರಿಸಿದೆ. ಈ ಉಗ್ರ ನಮ್ಮವನೇ ಎಂದು ಒಪ್ಪಿಕೊಂಡ ಪಾಕಿಸ್ತಾನ, ಇದೀಗ ಉಗ್ರನ ಶವವನ್ನು ಸ್ವೀಕರಿಸಿದೆ. ವಿಚಾರಣೆ ವೇಳೆ ಈತ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಪಾಕಿಸ್ತಾನ ಸೇನೆ ಆತ್ಮಾಹುತಿ ದಾಳಿಗಾಗಿ ಭಾರತಕ್ಕೆ ಕಳುಹಿಸಿರುವುದಾಗಿ ಈತ ಹೇಳಿದ್ದ. ಇಷ್ಟೇ ಅಲ್ಲ ಈ ಉಗ್ರನಿಗೆ ಹಾಗೂ ಕುಟುಂಬಕ್ಕೆ ಪಾಕಿಸ್ತಾನ ಸೇನೆಯ ಅಧಿಕಾರಿ ಹಣ ಸಂದಾಯ ಮಾಡಿರುವು ಮಾಹಿತಿಯನ್ನು ಉಗ್ರ ಬಾಯ್ಬಿಟ್ಟಿದ್ದಾನೆ. ಈ ಘಟನೆ ಪಾಕಿಸ್ತಾನದ ಭಯೋತ್ಪಾದನಾ ಕೃತ್ಯವನ್ನು ಮತ್ತೆ ಬಹಿರಂಗಪಡಿಸಿದೆ.
ಆಗಸ್ಟ್ 21 ರಂದು ಭಾರತೀಯ ಸೇನೆ ರಜೌರಿ ಸೆಕ್ಟರ್‌ನಲ್ಲಿ ಉಗ್ರರ ಜೊತೆಗೆ ಗುಂಡಿನ ಚಕಮಕಿ ನಡೆಸಿತ್ತು. ನಾಲ್ಕರಿಂದ ಐದು ಉಗ್ರರು ಭಾರತದೊಳಕ್ಕೆ ನುಸುಳಲು ಯತ್ನಿಸಿದ್ದರು. ಈ ವೇಳೆ ತೀವ್ರ ಗುಂಡಿನ ಚಕಮಕಿ ನಡೆತ್ತು. ಈ ದಾಳಿಯಲ್ಲಿ ತಬ್ರಕ್ ಹುಸೈನ್ ಸೆರೆಸಿಕ್ಕಿದ್ದ. ಈ ಉಗ್ರನ ಕಾಲಿಗೆ ಹಾಗೂ ಭುಜಕ್ಕೆ ಗುಂಡು ತಗುಲಿತ್ತು. ಆದರೆ ಇತರರ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದರು.
ಗಡಿ ಒಳನುಸುಳುವಿಕೆ ಹೆಚ್ಚಿಸಲು ಪಾಪಿ Pakistan ಪ್ಲ್ಯಾನ್: ಗುಪ್ತಚರ ಸಂಸ್ಥೆ ಎಚ್ಚರಿಕೆ
ಸೆರೆ ಸಿಕ್ಕ ಉಗ್ರ ತಬ್ರಕ್ ಹುಸೈನ್(Pakistan Terrosit) ಸೇನಾ ಆಸ್ಪತ್ರೆಗೆ ದಾಖಲಿಸಿದ ಭಾರತೀಯ ಸೇನೆ(Indian Arm) ವಿಚಾರಣೆ ಆರಂಭಿಸಿತ್ತು. ಈ ವೇಳೆ ತಾನು ಸೇರಿದಂತೆ ಐವರು ಉಗ್ರರು ಭಾರತೀಯ ಸೇನೆ ಮೇಲೆ ಆತ್ಮಾಹುತಿ ದಾಳಿಗಾಗಿ ಒಳನುಸುಳಿರುವುದನ್ನು ಒಪ್ಪಿಕೊಂಡಿದ್ದ. ಪಾಕಿಸ್ತಾನ ಸೇನೆ(Pakistan Army) ಕರ್ನಲ್ ಯೂನಸ್ ಚೌಧರಿ ಆದೇಶದ ಪ್ರಕಾರ ಆತ್ಮಾಹುತಿ ದಾಳಿಗೆ(Terror Attack) ಮುಂದಾಗಿದ್ದ ಎಂಬುದನ್ನು ಬಾಯ್ಬಿಟ್ಟಿದ್ದ. ಗಡಿಯಲ್ಲಿ ಭಾರತೀಯ ಸೈನಿಕರಮೇಲೆಯೇ ಆತ್ಮಾಹುತಿ ದಾಳಿ ಮಾಡಲು ಪಾಕಿಸ್ತಾನ ಸೇನಾಧಿಕಾರಿ ಸೂಚಿಸಿದ್ದ. ಇದಕ್ಕಾಗಿ ಭಾರತದ ಗಡಿ ವರೆಗೆ ಕರೆದುಕೊಂಡು ಬಿಡಲಾಗಿತ್ತು ಎಂದು ವಿಚಾರಣೆಯಲ್ಲಿ ಹೇಳಿದ್ದ.
ಈ ಉಗ್ರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(PoK) ಕೊಟ್ಲಿ ಜಿಲ್ಲೆಯ ಸಬ್ಜ್‌ಕೋಟ್ ಗ್ರಾಮದವನು. ಈತನ ಕುರಿತು ಪಾಕಿಸ್ತಾನಕ್ಕೆ ಮಾಹಿತಿ ನೀಡಾಗಿತ್ತು. ಈ ವೇಳೆ ಈತ ಪಾಕಿಸ್ತಾನ ನಿವಾಸಿ ಅನ್ನೋದನ್ನು ಪಾಕಿಸ್ತಾನ ಒಪ್ಪಿಕೊಂಡಿತ್ತು. ಗುಂಡು ತಗುಲಿದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಗ್ರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈತನ ಶವವನ್ನು ಭಾರತೀಯ ಸೇನೆ ಚಕನ್ ದಾ ಬಾಗ್ ಗಡಿ ಬಳಿಕ ಪಾಕಿಸ್ತಾನ ಸೇನೆಗೆ ಹಸ್ತಾಂತರ ಮಾಡಿದೆ. ಈ ಘಟನೆ ಪಾಕಿಸ್ತಾನದ ಭಯೋತ್ಪಾದನಾ ಕೃತ್ಯಕ್ಕೆ ನೀಡುತ್ತಿರುವ ಸಹಕಾರ, ಹಾಗೂ ಪೋಷಣೆಯನ್ನು ಬಿಚ್ಚಿಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ