ಭಾರತದ ದಾಳಿಗೆ ಪಾಕ್‌ ಉಗ್ರ ನೆಲೆ ಛಿದ್ರ : ಇನ್ನಷ್ಟು ಚಿತ್ರಗಳು ಬಹಿರಂಗ

Published : Jul 01, 2025, 05:14 AM ISTUpdated : Jul 01, 2025, 05:15 AM IST
Pakistan terror camp destroyed in Indian strike: More images revealed

ಸಾರಾಂಶ

ಕಳೆದ ತಿಂಗಳು ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್‌ ಸಿಂದೂರದ ತೀವ್ರತೆ ಎಷ್ಟಿತ್ತು ಎಂಬುದನ್ನು ತೋರಿಸುವ ಮತ್ತಷ್ಟು ಚಿತ್ರಗಳು ಬಹಿರಂಗವಾಗಿವೆ.

ನವದೆಹಲಿ: ಕಳೆದ ತಿಂಗಳು ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್‌ ಸಿಂದೂರದ ತೀವ್ರತೆ ಎಷ್ಟಿತ್ತು ಎಂಬುದನ್ನು ತೋರಿಸುವ ಮತ್ತಷ್ಟು ಚಿತ್ರಗಳು ಬಹಿರಂಗವಾಗಿವೆ. ಮ್ಯಾಕ್ಸಾರ್‌ ಸಂಸ್ಥೆ ಸೆರೆಹಿಡಿದಿರುವ ಉಪಗ್ರಹ ಚಿತ್ರಗಳಲ್ಲಿ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಮುಝಾಫರಾಬಾದ್‌ನ ಸೈಯದ್ನಾ ಬಿಲಾಲ್ ಉಗ್ರನೆಲೆ ಮತ್ತು ಕೋಟ್ಲಿ-ಗುಲ್ಪುರ ಕ್ಯಾಂಪ್‌ಗಳು ದಾಳಿಯಿಂದ ಛಿದ್ರವಾಗಿರುವುದು ಕಂಡುಬಂದಿವೆ.

ಅವುಗಳ ಮೇಲೆ ನಿಖರ ದಾಳಿ ನಡೆಸಲಾಗಿದ್ದು, ಇದಕ್ಕೆ ಡ್ರೋನ್‌ಗಳನ್ನು ಬಳಸಲಾಗಿತ್ತು ಎನ್ನಲಾಗಿದೆ. ಜೈಷ್‌ ಸಂಘಟನೆಗೆ ಸೇರಿದ್ದ ಬಿಲಾಲ್ ಕ್ಯಾಂಪ್‌ನಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರ ನಿರ್ವಹಣೆ, ಕಾಡಿನಲ್ಲಿ ಕಾರ್ಯನಿರ್ವಹಿಸುವುದು ಇತ್ಯಾದಿಗಳನ್ನು ಕಲಿಸಲಾಗುತ್ತಿತ್ತು. ಅತ್ತ ಕೋಟ್ಲಿಯ ಜೈಷ್‌ ಕ್ಯಾಂಪ್‌ನಲ್ಲಿ ರಜೌರಿ ಮತ್ತು ಪೂಂಚ್‌ ದಾಳಿಗಳ ಸಿದ್ಧತೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಈ ಚಿತ್ರಗಳಿಂದ ಪಾಕಿಸ್ತಾನದ ಉಗ್ರರಿಗೆ ಆಗಿರುವ ಅಪಾರ ಹಾನಿಯ ಪ್ರಮಾಣ ಮತ್ತು ತೀವ್ರತೆ ಬಯಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ, ಭಾರತದ ನಿಖರ ದಾಳಿಯ ಸಾಮರ್ಥ್ಯದ ಅನಾವರಣವೂ ಆಗಿದೆ.

ಸಿಂದೂರ ವೇಳೆ ಹಾನಿಗೆ ಒಳಗಾಗಿದ್ದ ಜೈಷ್‌ ಈಜುಕೊಳ ಪುನಾರಂಭ

ಇಸ್ಲಾಮಾಬಾದ್‌: ಇತ್ತೀಚೆಗೆ ಆಪರೇಷನ್‌ ಸಿಂದೂರದಲ್ಲಿ ಭಾರತವು ಜೈಷ್‌ ಎ ಮೊಹಮ್ಮದ್‌ ಉಗ್ರರ ತಾಣವಾದ ಬಹಾಲ್ಪುರದ ಉಗ್ರ ತರಬೇತಿ ಶಿಬಿರವನ್ನು ನಾಶ ಮಾಡಿತ್ತು. ಆದರೆ ಒಂದು ತಿಂಗಳಲ್ಲೇ ಈ ಉಗ್ರರ ಶಿಬಿರ ನಿಧಾನವಾಗಿ ತಲೆಯೆತ್ತುತ್ತಿದ್ದು, ಇದರ ಅಂಗವಾದ ಈಜುಕೊಳ ಪುನಾರಂಭವಾಗಿದೆ.ಈ ಈಜುಕೊಳದಲ್ಲಿ ಈಗ ಉಗ್ರರಿಗೆ ತರಬೇತಿ ನೀಡುವಿಕೆ ಪುನಾರಂಭವಾಗಿದೆ. ಉಗ್ರರು ಕಾಶ್ಮೀರಕ್ಕೆ ತೆರಳುವ ಮುನ್ನ ಇಲ್ಲಿ ಈಜು ತರಬೇತಿ ಪಡೆದು ಪಾಸಾಗುವುದು ಕಡ್ಡಾಯವಾಗಿದೆ.

2019ರಲ್ಲಿ ಭಾರತದ ಪುಲ್ವಾಮಾದಲ್ಲಿ 40 ಯೋಧರ ಕೊಂದು ಹಾಕಿದ್ದ ಉಗ್ರರದ ಮೊಹಮ್ಮದ್ ಉಮರ್ ಫಾರೂಕ್, ತಲ್ಹಾ ರಶೀದ್ ಅಲ್ವಿ, ಮೊಹಮ್ಮದ್ ಇಸ್ಮಾಯಿಲ್ ಅಲ್ವಿ ಮತ್ತು ರಶೀದ್ ಬಿಲ್ಲಾ ಅವರು ಕಾಶ್ಮೀರಕ್ಕೆ ತೆರಳುವ ಮೊದಲುದಿದೇ ಕೊಳದಲ್ಲಿ ತಮ್ಮ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದರು.

ನೌಕಾಸೇನೆಯ ದಾಳಿಯಿಂದ ಜಸ್ಟ್‌ ಮಿಸ್‌ ಆದ ಕರಾಚಿ ಬಂದರು!

ನವದೆಹಲಿ : ಆಪರೇಷನ್‌ ಸಿಂದೂರ್‌ ವೇಳೆ ಭಾರತ ಪಾಕಿಸ್ತಾನದ ವಾಯುನೆಲೆಯ ಮೇಲೆ ದಾಳಿ ಮಾಡಿದ  ಪ್ರಮುಖ ವಿವರಗಳು ಬಿತ್ತರವಾಗಿದೆ. ಆಪರೇಷನ್‌ ಸಿಂದೂರ್‌ ವೇಳೆ ಮೇ.7 ರಂದು ಮಾತ್ರವಲ್ಲ, ಮೇ. 10 ಕೂಡ ಭಾರತಕ್ಕೆ ಮಹತ್ವದ ದಿನ. ಮೇ. 7 ರಂದು ಭಾರತ ಪಾಕಿಸ್ತಾನದಲ್ಲಿನ ಟೆರರಿಸ್ಟ್‌ ಕ್ಯಾಂಪ್‌ಗಳ ಮೇಲೆ ದಾಳಿ ಮಾಡಿದ್ದರೆ, ಮೇ. 10 ರಂದು ಪಾಕಿಸ್ತಾನದ ವಾಯುನೆಲೆಗಳ ಮೇಲೆ ಅತ್ಯಂತ ನಿಖರವಾದ ದಾಳಿ ಮಾಡಿ ಮಂಡಿಯೂರುವಂತೆ ಮಾಡಿತ್ತು.

ಮೇ 10 ರಂದು ಭಾರತದ ಸೇನಾ ಪಡೆಗಳು ಪಾಕಿಸ್ತಾನದ ವಾಯು ರಕ್ಷಣಾ ಪಡೆಗಳು ಮತ್ತು ಪ್ರಮುಖ ಮಿಲಿಟರಿ ಸ್ವತ್ತುಗಳನ್ನು ಧ್ವಂಸಗೊಳಿಸಿದವು. ಇದರಿಂದಾಗಿ ಭಾರತದ ಆಪರೇಷನ್‌ ಸಿಂದೂರ್‌ಗೆ ಪ್ರತಿಯಾಗಿ ಇಸ್ಲಾಮಾಬಾದ್ ಆರಂಭಿಸಿದ್ದ ಪ್ರತೀಕಾರದ ಆಪರೇಷನ್ ಬನ್ಯನ್ ಅಲ್-ಮರ್ಸೂಸ್ ಕೇವಲ ಎಂಟೇ ಗಂಟೆಗಳಲ್ಲಿ ವಿಫಲವಾಯಿತು. ಅಷ್ಟು ಮಾತ್ರವಲ್ಲದೆ, ಭಾರತದ ದಾಳಿಯಿಂದ ತಡೆಯಿರಿ ಎಂದು ಅಮೆರಿಕದ ಬಳಿ ಗೋಗೆರೆದುಕೊಂಡಿತು  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ