ಜು.4ಕ್ಕೆ ಬಾಹ್ಯಾಕಾಶದಿಂದ ಬೆಂಗಳೂರಿಗೆ ಶುಕ್ಲಾ ಹ್ಯಾಮ್‌ ಕರೆ

Published : Jul 01, 2025, 04:56 AM ISTUpdated : Jul 01, 2025, 08:06 AM IST
Axiom 4 Mission Shubhanshu Shukla

ಸಾರಾಂಶ

 ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗೆ ಹೋದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬೆಂಗಳೂರಿನಲ್ಲಿರುವ ಯು.ಆರ್. ರಾವ್ ಉಪಗ್ರಹ ಕೇಂದ್ರ (ಯುಆರ್‌ಸಿಎಸ್‌) ಜತೆ ಹ್ಯಾಮ್‌ ರೇಡಿಯೋ ಮೂಲಕ ಸಂಪರ್ಕ ಸಾಧಿಸಿ ಮಾತನಾಡಲಿದ್ದಾರೆ.

 ನವದೆಹಲಿ: ಬಾಹ್ಯಾಕಾಶಕ್ಕೆ ನೆಗೆದ 2ನೆಯ ಹಾಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗೆ ಹೋದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬೆಂಗಳೂರಿನಲ್ಲಿರುವ ಯು.ಆರ್. ರಾವ್ ಉಪಗ್ರಹ ಕೇಂದ್ರ (ಯುಆರ್‌ಸಿಎಸ್‌) ಜತೆ ಹ್ಯಾಮ್‌ ರೇಡಿಯೋ ಮೂಲಕ ಸಂಪರ್ಕ ಸಾಧಿಸಿ ಮಾತನಾಡಲಿದ್ದಾರೆ.

ನಾಸಾದ ಆಕ್ಸಿಯೋಂ-4 ಮಿಷನ್‌ನ ಭಾಗವಾಗಿ ಐಎಸ್‌ಎಸ್‌ಗೆ ಹೋಗಿರುವ ಶುಕ್ಲಾರ ಜು.4ರಂದು ಮಧ್ಯಾಹ್ನ 3:47ಕ್ಕೆ ಹ್ಯಾಮ್‌ ರೇಡಿಯೋ ಮೂಲಕ ಮಾತನಾಡಲಿದ್ದು, ಇದನ್ನು ದೇಶಾದ್ಯಂತವಿರುವ ಶಾಲಾ ಮಕ್ಕಳು ಕೇಳಿಸಿಕೊಳ್ಳುವ ವ್ಯವಸ್ಥೆಯನ್ನು ಇಸ್ರೋ ಮಾಡಲಿದೆ.

ಈ ಮೂಲಕ, ಮಕ್ಕಳು ಮತ್ತು ವಿಜ್ಞಾನಾಸಕ್ತರು ಭೂಮಿಯಿಂದ ನೇರವಾಗಿ ಬಾಹ್ಯಾಕಾಶದಲ್ಲಿರುವ ವ್ಯಕ್ತಿಯೊಂದಿಗೆ ಮಾತನಾಡಬಹುದು ಹಾಗೂ ಅಲ್ಲಿನ ಜೀವನ, ಪ್ರಯೋಗಗಳು ಇತ್ಯಾದಿಗಳ ಬಗ್ಗೆ ಸಂವಾದ ನಡೆಸಬಹುದು. ಸಾಮಾನ್ಯವಾಗಿ ಐಎಸ್‌ಎಸ್‌ನಲ್ಲಿರುವ ಗಗನಯಾತ್ರಿಗಳು ಹ್ಯಾಮ್‌ ರೇಡಿಯೋ ಬಳಸಿ ವಿದ್ಯಾರ್ಥಿಗಳು ಮತ್ತು ರೇಡಿಯೋ ಕ್ಲಬ್‌ಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ. ಈ ಸಾಹಸಕ್ಕೀಗ ಶುಕ್ಲಾ ಮುಂದಾಗಿದ್ದಾರೆ.

ಏನಿದು ಹ್ಯಾಮ್‌ ರೇಡಿಯೋ?:

ಇಂಟರ್‌ನೆಟ್‌ ಅಥವಾ ನೆಟ್‌ವರ್ಕ್‌ ಬದಲು ಹ್ಯಾಮ್‌ ರೇಡಿಯೋ ಫ್ರೀಕ್ವೆನ್ಸಿಗಳನ್ನು ಬಳಸಿ ಕೆಲಸ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ತುರ್ತು ಸಂದರ್ಭಗಳಲ್ಲಿ, ನೆಟ್‌ವರ್ಕ್‌ ಇರದ ಜಾಗಗಳಲ್ಲಿ ಬಳಸಲಾಗುತ್ತದೆ. ಇದನ್ನು ಬಳಸಲು ಲೈಸೆನ್ಸ್‌ ಹೊಂದಿರುವುದು ಕಡ್ಡಾಯ.

ಬಾಹ್ಯಾಕಾಶ ಯಾನದಲ್ಲಿ ಜಾತಿ ಮೀಸಲಾತಿ ಬೇಕೆ? ಚರ್ಚೆ ಹುಟ್ಟುಹಾಕಿದ ಶುಭಾಂಶು ಶುಕ್ಲಾ

ಶುಭಾಂಶು ಶುಕ್ಲಾ ಅವರು ಗಗನಯಾನ ಮಾಡಿ ಅಂತಾರಾಷ್ಟ್ರೀಯ ಬಾಹ್ಯಾಕಾಶ (ಐಎಸ್‌ಎಸ್‌) ಕೇಂದ್ರವನ್ನು ಸೇರಿಕೊಂಡಿದ್ದಾರೆ. ಆ ಮೂಲಕ ಐಎಸ್‌ಎಸ್‌ ಸೇರಿದ ಮೊದಲ ಭಾರತೀಯ ಅನ್ನಿಸಿಕೊಂಡಿದ್ದಾರೆ. ಈ ಹಿಂದೆ ಭಾರತ ಮೂಲದ ಸುನೀತಾ ವಿಲಿಯಮ್ಸ್‌ ಅವರು ಬಾಹ್ಯಾಕಾಶ ಕೇಂದ್ರದಲ್ಲಿ ಸಾಕಷ್ಟು ಕಾಲ ಇದ್ದರು ನಿಜ. ಆದರೆ ಅವರು ಹೆಸರಿನಿಂದ ಮಾತ್ರ ಭಾರತೀಯರು; ಅವರ ಹುಟ್ಟಿ ಬೆಳೆದದ್ದೆಲ್ಲಾ ಅಮೆರಿಕದಲ್ಲೇ. ಅವರ ಪೌರತ್ವವೂ ಅಮೆರಿಕದ್ದೇ. ಹೀಗಾಗಿ ಶುಭಾಂಶು ಶುಕ್ಲಾ ಅವರೇ ಅಧಿಕೃತವಾಗಿ ಮೊದಲ ಭಾರತೀಯ.

ವಿಚಿತ್ರ ಅಂದರೆ ಅವರ ಜಾತಿಯ ಬಗ್ಗೆ ಆನ್‌ಲೈನ್‌ನಲ್ಲಿ ಶುರುವಾಗಿರುವ ಚರ್ಚೆ. ಶುಭಾಂಶು ಶುಕ್ಲಾ ಎಂಬ ಹೆಸರಿನಿಂದಲೇ ಅವರು ಬ್ರಾಹ್ಮಣ ಎಂಬುದು ಗೊತ್ತಾಗುತ್ತೆ. ಇನ್ನು ಈ ಹಿಂದೆ ಬಾಹ್ಯಾಕಾಶಕ್ಕೆ ಹೋದ ಭಾರತದ ಮೊದಲ ವ್ಯೋಮಯಾನಿ ರಾಕೇಶ್‌ ಶರ್ಮಾ ಅವರೂ ಬ್ರಾಹ್ಮಣನೇ. 1984ರಲ್ಲಿ ಅವರನ್ನು ಬಾಹ್ಯಾಕಾಶಕ್ಕೆ ಕಳಿಸಲಾಗಿತ್ತು. ಇಸ್ರೋ ಹೀಗೆ 75 ವರ್ಷಗಳಲ್ಲಿ ಬಾಹ್ಯಾಕಾಶಕ್ಕೆ ಕಳಿಸಿರುವ ಗಗನಯಾನಿಗಳು ಇಬ್ಬರೂ ಬ್ರಾಹ್ಮಣರೇ. ಯಾಕೆ ಇಸ್ರೋಗೆ ಬೇರೆ ಜಾತಿಯವರು ಯಾರೂ ಸಿಗಲಿಲ್ಲವೇ? ಭಾರತದಲ್ಲಿ ಬ್ರಾಹ್ಮಣರ ಶೇಕಡಾವಾರು ಜನಸಂಖ್ಯೆ 3 ಶೇಕಡಾ ಮಾತ್ರ. ಆದರೆ ಬಾಹ್ಯಾಕಾಶ ಯಾನದಲ್ಲಿ ಅವರ ಪರ್ಸೆಂಟೇಜ್‌ ನೂರು ಆಗಿದೆಯಲ್ಲ. ಎಸ್‌ಸಿ, ಎಸ್‌ಟಿ, ಒಬಿಸಿ, ದಲಿತ, ಮುಸ್ಲಿಮರಲ್ಲಿ ಯಾರೂ ಸಿಗಲಿಲ್ಲವೇ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ