
ನವದೆಹಲಿಮ(ಮೇ.10) ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಶನ್ ಸಿಂದೂರ್ ಪಾಕಿಸ್ತಾನವನ್ನು ಬೆಚ್ಚಿ ಬೀಳಿಸಿದೆ. ಇದರಿಂದ ದಿಕ್ಕಾಪಾಲಾಗಿರುವ ಪಾಕಿಸ್ತಾನ ಇದೀಗ ಭಾರತದ ವಿರುದ್ದ ಸತತ ಡ್ರೋನ್ ದಾಳಿ ನಡೆಸುತ್ತಿದೆ. ಮೇ.7 ರಂದು ಭಾರತ ನಡೆಸಿದ ಆಪರೇಶನ್ ಸಿಂದೂರ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ದಾಳಿ ನಡೆಸುತ್ತಿದೆ. ಇದು ಸತತ 3ನೇ ದಿನವೂ ಮುಂದುವರಿದಿ. ಇಂದು ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿ ಜಮ್ಮು ಕಾಶ್ಮೀರದ ಬಾರಾಮುಲ್ಲದಿಂದ ಗುಜರಾತಿನ ಭುಜ್ ವರೆಗೆ ವ್ಯಾಪಿಸಿದೆ ಎಂದು ರಕ್ಷಣಾ ಪಡೆಗಳು ತಿಳಿಸಿವೆ.
ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಪಾಕ್ ಡ್ರೋನ್‌ಗಳು ಕಾಣಿಸಿಕೊಂಡಿವೆ. ಪಂಜಾಬಿನ ಫಿರೋಜ್‌ಪುರದಲ್ಲಿ ಮಾತ್ರ ಪಾಕ್ ಡ್ರೋನ್ ದಾಳಿ ಯಶಸ್ವಿಯಾಗಿದೆ. ಒಂದು ಮನೆಯ ಮೇಲೆ ಬಿದ್ದ ಡ್ರೋನ್ ದೊಡ್ಡ ಬೆಂಕಿ ಅವಘಡಕ್ಕೆ ಕಾರಣವಾಯಿತು. ಓರ್ವ ಮಹಿಳೆಗೆ ತೀವ್ರ ಸುಟ್ಟ ಗಾಯಗಳಾಗಿವೆ. ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ದಾಳಿ ಮುಂದುವರಿದಂತೆ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಪಾಕಿಸ್ತಾನದ ಡ್ರೋನ್ ದಾಳಿಗೆ ಭಾರತದ ಮೂವರು ನಾಗರೀಕರಿಗೆ ಗಾಯ, ಜನವಸತಿ ಟಾರ್ಗೆಟ್
ಇಂದು ಜಮ್ಮುವಿಗೆ ಮಾತ್ರ 100 ಡ್ರೋನ್‌ಗಳು ಬಂದಿವೆ ಎಂದು ತಿಳಿದುಬಂದಿದೆ. ಕಾಶ್ಮೀರ ಕಣಿವೆಯ ಬಾರಾಮುಲ್ಲದಿಂದ ಗುಜರಾತಿನ ಭುಜ್ ವರೆಗೆ 26 ಸ್ಥಳಗಳಲ್ಲಿ ಪಾಕ್ ಡ್ರೋನ್‌ಗಳು ಕಾಣಿಸಿಕೊಂಡಿವೆ. ಬಾರಾಮುಲ್ಲ, ಶ್ರೀನಗರ, ಅವಂತಿಪುರ, ನಗ್ರೋಟ, ಜಮ್ಮು, ಫಿರೋಜ್‌ಪುರ, ಪಠಾಣ್‌ಕೋಟ್, ಫಾಜಿಲ್ಕಾ, ಲಾಲ್‌ಗಢ್, ಜಾಟ್, ಜೈಸಲ್ಮೇರ್, ಬಾರ್ಮರ್, ಭುಜ್, ಕಾರ್ಬೆಟ್, ಲಾಖಿ ನಾಲ್ ಮುಂತಾದ ಸ್ಥಳಗಳಲ್ಲಿ ದಾಳಿ ನಡೆದಿದೆ.
ಮೊದಲು ದಾಳಿ ನಡೆದ ಜಮ್ಮು ನಗರದಲ್ಲಿ ಈಗ ಅಪಾಯದ ಮುನ್ಸೂಚನೆಯನ್ನು ಹಿಂಪಡೆಯಲಾಗಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡಿದ್ದ ಈ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲಾಗಿದೆ. ಆದರೆ ಪಾಕ್ ಪ್ರಚೋದನೆ ರಾತ್ರಿ ಮುಂದುವರಿಯಬಹುದು ಎಂದು ಭಾವಿಸಲಾಗಿದೆ. ಟರ್ಕಿ ಮತ್ತು ಚೀನಾದಿಂದ ಪಾಕಿಸ್ತಾನ ಖರೀದಿಸಿದ ಡ್ರೋನ್‌ಗಳನ್ನು ಭಾರತದ ನಿರಾಯುಧ ನಾಗರಿಕರನ್ನು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಹಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಎರಡು ದಿನಗಳಿಂದ ನಡೆಯುತ್ತಿರುವ ದಾಳಿಯಲ್ಲಿ ಇಂದು ಮಾತ್ರ ಒಂದು ಡ್ರೋನ್ ನೆಲಕ್ಕೆ ಬಿದ್ದಿದೆ. ಉಳಿದವುಗಳನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ನಾಶಪಡಿಸಿವೆ.
ಇದೇ ಮೊದಲ ಬಾರಿಗೆ ರೈಲಿನ ಮೂಲಕ ದೆಹಲಿಗೆ ಪ್ರಯಾಣಿಸಿದ ಐಪಿಎಲ್ ಕ್ರಿಕೆಟಿಗರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ