ಭಾರತಕ್ಕೆ ನುಗ್ಗಲು ಹೊಸ ದಾರಿ ಹುಡುಕ್ತಿದೆ ಪಾಕ್: ಗುಜರಾತ್‌, ರಾಜಸ್ಥಾನದ ಮೂಲಕ ಪ್ರವೇಶ ಯತ್ನ

Kannadaprabha News   | Asianet News
Published : Dec 27, 2020, 08:16 AM IST
ಭಾರತಕ್ಕೆ ನುಗ್ಗಲು ಹೊಸ ದಾರಿ ಹುಡುಕ್ತಿದೆ ಪಾಕ್: ಗುಜರಾತ್‌, ರಾಜಸ್ಥಾನದ ಮೂಲಕ ಪ್ರವೇಶ ಯತ್ನ

ಸಾರಾಂಶ

ಉಗ್ರರ ಒಳನುಸುಳಿಸಲು ಹೊಸ ಮಾರ್ಗಗಳಿಗಾಗಿ ಪಾಕ್‌ ಶೋಧ | ಗುಜರಾತ್‌, ರಾಜಸ್ಥಾನ ಮೂಲಕವೂ ಪ್ರವೇಶ ಯತ್ನ

ನವದೆಹಲಿ(ಡಿ.27): ಈವರೆಗೆ ಕೇವಲ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ ಗಡಿಗಳ ಮೂಲಕ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಉಗ್ರರು, ಈಗ ಗುಜರಾತ್‌ ಹಾಗೂ ರಾಜಸ್ಥಾನದ ಮೂಲಕವೂ ನುಸುಳಲು ಯತ್ನಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.

2020ರಲ್ಲಿ ಈ ಎರಡೂ ರಾಜ್ಯಗಳ ಮೂಲಕ ಉಗ್ರರನ್ನು ನುಸುಳಿಸಲು ಪಾಕಿಸ್ತಾನ ಯತ್ನಿಸಿತ್ತು ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಹೇಳಿದೆ. ಗಡಿಯಲ್ಲಿ ಒಳನುಸುಳುವಿಕೆ ಯತ್ನಗಳ ಪ್ರಮಾಣ ಹೆಚ್ಚಿದೆ ಎಂದೂ ಬಿಎಸ್‌ಎಫ್‌ ವರದಿ ಕಳವಳ ವ್ಯಕ್ತಪಡಿಸಿದೆ.

ಸೂಪರ್‌ಸ್ಟಾರ್ ಬಿಪಿ ಏರು ಪೇರು: ಡಿಸ್ಚಾರ್ಜ್ ಯಾವಾಗ..?

‘ಕಳೆದ ವರ್ಷ ಗುಜರಾತ್‌ ಹಾಗೂ ರಾಜಸ್ಥಾನದ ಗಡಿಗಳಲ್ಲಿ ಇಂತಹ ಯಾವುದೇ ಯತ್ನಗಳು ನಡೆದಿರಲಿಲ್ಲ. ಆದರೆ ಈ ವರ್ಷ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಈ ರಾಜ್ಯಗಳ ಗಡಿ ಮೂಲಕ ನುಸುಳುವ ಯತ್ನಗಳು ನಡೆದಿವೆ’ ಎಂದು ಅದು ತಿಳಿಸಿದೆ.

ಆದರೆ ಕಾಶ್ಮೀರದ ಗಡಿಯಲ್ಲಿ ಕಳೆದ ವರ್ಷ 4 ನುಸುಳುವಿಕೆ ಯತ್ನಗಳು ನಡೆದಿದ್ದರೆ, ಈ ಸಲ ಕೇವಲ 1 ಯತ್ನ ದಾಖಲಾಗಿದೆ ಎಂಬ ಅಚ್ಚರಿಯ ಮಾಹಿತಿಯನ್ನು ಇದರಲ್ಲಿ ನೀಡಲಾಗಿದೆ.

ಬ್ರಿಟನ್‌ನಂಥದ್ದೇ ವೈರಸ್‌ ಭಾರತದಲ್ಲಿ ಮಾರ್ಚ್‌ನಲ್ಲೇ ಇತ್ತು: ಜೀನೋಮಿಕ್ಸ್

ಇದರರ್ಥ, ಪಾಕಿಸ್ತಾನವು ಭಾರತಕ್ಕೆ ಉಗ್ರರನ್ನು ಕಳಿಸಲು ಹೊಸ ಮಾರ್ಗಗಳನ್ನು ಶೋಧಿಸುತ್ತಿದೆ. ಆದರೆ ಗಡಿಯಲ್ಲಿ 24 ತಾಸೂ ಹದ್ದಿನ ಕಣ್ಣು ಇಟ್ಟಿರುವ ಬಿಎಸ್‌ಎಫ್‌, ಈ ಯತ್ನಗಳನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ಜಮ್ಮು-ಕಾಶ್ಮೀರ, ಪಂಜಾಬ್‌, ರಾಜಸ್ಥಾನ ಹಾಗೂ ಗುಜರಾತ್‌- ಈ ಗಡಿಗಳ ಮೂಲಕ 11 ಒಳನುಸುಳುವಿಕೆ ಯತ್ನಗಳು ಈ ವರ್ಷದ ನವೆಂಬರ್‌ 1ನೇ ವಾರದವರೆಗೆ ದಾಖಲಾಗಿವೆ. ಜಮ್ಮು ಹಾಗೂ ಪಂಜಾಬ್‌ ಗಡಿಗಳಲ್ಲಿ ಅತಿ ಹೆಚ್ಚು ಎಂದರೆ ತಲಾ 4 (ಒಟ್ಟಾರೆ 8) ನುಸುಳುವಿಕೆ ಯತ್ನಗಳು ನಡೆದಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Maharashtra Municipal Corporation Results: ಬಿಎಂಸಿಯಲ್ಲಿ ಬಹುಮತದ ಗಡಿ ದಾಟಿದ ಮಹಾಯುತಿ, ಠಾಕ್ರೆ ಸರ್ಕಾರ್‌ ಅಧಿಕಾರ ಅಂತ್ಯ!
ಅಳಿಯನಿಗೆ ರಾಜ ಮರ್ಯಾದೆ: 158 ಬಗೆಯ ಭಕ್ಷ್ಯ ಸಿದ್ಧಪಡಿಸಿ ಬಡಿಸಿದ ಆಂಧ್ರದ ಕುಟುಂಬ