ಮೋದಿ ಭೇಟಿ ವೇಳೆ ಪ್ರತಿಭಟನೆಗೆ ಹಣಕಾಸಿನ ನೆರವು: ಐಎ​ಸ್‌ಐ ಸಂಚಿ​ನ ಟೂಲ್‌ಕಿಟ್‌ ಬಹಿ​ರಂಗ?

By Kannadaprabha NewsFirst Published Jun 21, 2023, 9:07 AM IST
Highlights

ಅಮೆರಿಕಾಗೆ ಐತಿಹಾಸಿಕ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲು ಅಮೆರಿಕ ಸಜ್ಜಾಗಿರುವ ಹೊತ್ತಿನಲ್ಲೇ, ಅವರ ಪ್ರವಾಸಕ್ಕೆ ನಾನಾ ರೀತಿಯ ವಿಘ್ನ ಒಡ್ಡಲು ಮತ್ತು ಭಾರತದ ಹೆಸರಿಗೆ ಕಳಂಕ ಮೆತ್ತಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮುಂದಾಗಿದೆ.

ವಾಷಿಂಗ್ಟನ್‌: ಅಮೆರಿಕಾಗೆ ಐತಿಹಾಸಿಕ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲು ಅಮೆರಿಕ ಸಜ್ಜಾಗಿರುವ ಹೊತ್ತಿನಲ್ಲೇ, ಅವರ ಪ್ರವಾಸಕ್ಕೆ ನಾನಾ ರೀತಿಯ ವಿಘ್ನ ಒಡ್ಡಲು ಮತ್ತು ಭಾರತದ ಹೆಸರಿಗೆ ಕಳಂಕ ಮೆತ್ತಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮುಂದಾಗಿದೆ. ಈ ನಿಟ್ಟಿನಲ್ಲಿ ಅದು ಅಮೆರಿಕದಲ್ಲಿ ಹಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಜೊತೆಗೆ ಇಂಥ ಕಾರ್ಯಾಚರಣೆ ಹೇಗಿರಬೇಕು ಎಂಬ ಬಗ್ಗೆ ಸಿದ್ಧಪಡಿಸಲಾದ ಟೂಲ್‌ಕಿಟ್‌ ಇದೀಗ ಬಹಿರಂಗಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಾಗತಿಕವಾಗಿ ಭಾರತ, ಪ್ರಧಾನಿ ಮೋದಿ (Prime Minister Narendra Modi) ಅವರಿಗೆ ಸಿಗುತ್ತಿರುವ ಮನ್ನಣೆ, ಭಾರತದ ಜೊತೆಗಿನ ಅಮೆರಿಕ (America) ಸಂಬಂಧ ಸುಧಾರಣೆಯಿಂದ ಕಸಿವಿಸಿಗೊಂಡಿರುವ ಪಾಕಿಸ್ತಾನ (Pakistan), ತನ್ನ ಗುಪ್ತಚರ ಸಂಸ್ಥೆಯಾದ (Inteligency) ಐಎಸ್‌ಐ (ISI) ಮೂಲಕ ಮೋದಿ ಅಮೆರಿಕ ಭೇಟಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಈ ನಿಟ್ಟಿನಲ್ಲಿ ಹಲವು ದಿನಗಳಿಂದ ಅಮೆರಿಕದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಐಎಸ್‌ಐ, ಈಗಾಗಲೇ ಪ್ರತ್ಯೇಕತಾವಾದಿ ಖಲಿಸ್ತಾನಿ ಹೋರಾಟಗಾರರು (Khalistani fighters), ಭಾರತ ವಿರೋಧಿ ಸಂಘಟನೆಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ಮತ್ತು ಮೋದಿ ಭೇಟಿ ವೇಳೆ ಯಾವ್ಯಾವ ರೀತಿಯಲ್ಲಿ ಅಡ್ಡಿ ಮಾಡಬಹುದು ಎಂಬ ಕುರಿತು ಯೋಜನೆ ರೂಪಿಸಿದ್ದು, ಅದರ ಜಾರಿಗೆ ಹಣಕಾಸಿನ (Economic Help) ನೆರವನ್ನು ನೀಡಿದೆ ಎನ್ನಲಾಗಿದೆ.

ಟೂಲ್‌ಕಿಟ್‌ನಲ್ಲೇನಿದೆ?:

ಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭೇಟಿಯಾಗುವ ವೇಳೆ ಯಾವ ರೀತಿ ಪ್ರತಿಭಟನೆ ನಡೆಸಬೇಕು? ಎಲ್ಲೆಲ್ಲಿ ಪ್ರತಿಭಟನೆ ನಡೆಸಬೇಕು? ಯಾವ್ಯಾವ ರೀತಿಯ ಮೋದಿ ವಿರೋಧಿ ಭಿತ್ತಿಪತ್ರ ಪ್ರದರ್ಶಿಸಬೇಕು? ಮೋದಿ ಅವರ ವ್ಯಕ್ತಿತ್ವಕ್ಕೆ ಯಾವ ರೀತಿಯಲ್ಲಿ ಮಸಿ ಬಳಿಯಬಹುದು, ಭಾರತೀಯ ಸೇನೆಯ (Indian Army) ಕುರಿತು ಏನೇನು ಸುಳ್ಳು ಪ್ರಚಾರ ಮಾಡಬೇಕು, ಸಾಮಾಜಿಕ ಜಾಲತಾಣಗಳಲ್ಲಿ ಯಾವ ರೀತಿ ಮೋದಿ ಮತ್ತು ಭಾರತದ ಹೆಸರನ್ನು ಕೆಡಿಸಬಹುದು, ಇಂಥ ವಿಷಯಗಳನ್ನು ಹೆಚ್ಚು ಪ್ರಚುರಪಡಿಸಬಹುದು ಎಂಬ ಕುರಿತು ವಿವರವಾಗಿ ಚರ್ಚಿಸಿ ಅದರ ಜಾರಿಗೆ ಯೋಜಿಸಲಾಗಿದೆ. ಇದಲ್ಲದೇ ಈ ದುಷ್ಕೃತ್ಯ ಜಾರಿಗೆ ನೆರವಾಗಲೆಂದೇ ಪ್ರತ್ಯೇಕ ವೆಬ್‌ಸೈಟ್‌ (Website) ಆರಂಭಿಸಲಾಗಿದ್ದು, ಅದರಲ್ಲಿ ಭಾರತ ವಿರೋಧಿಗಳಿಗೆ ಹೆಸರು ನೊಂದಾಯಿಸಿಕೊಂಡು, ಟೂಲ್‌ಕಿಟ್‌ ಯೋಜನೆ (Toolkit) ಜಾರಿಯಲ್ಲಿ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ.

ಸತತ 14 ಗಂಟೆ 37 ನಿಮಿಷ ಪ್ರಯಾಣ; ನ್ಯೂಯಾರ್ಕ್ ಬಂದಿಳಿದ ಮೋದಿಗೆ ಅದ್ಧೂರಿ ಸ್ವಾಗತ

click me!