ಭಾರತದ ಪರ ಸದಾ ಧ್ವನಿ ಎತ್ತುವ ಪಾಕ್ ಮೂಲದ ಲೇಖಕ ತಾರೆಕ್ ಫತಹ್ ನಿಧನ!

By Suvarna NewsFirst Published Apr 24, 2023, 8:17 PM IST
Highlights

ಭಾರತ, ಹಿಂದೂ ದೇಗಲು, ಇಲ್ಲಿನ ನೈಜ ಇತಿಹಾಸದ ಕುರಿತು ನಿರ್ಭೀತಿಯಿಂದ ಮಾತನಾಡುವ, ಭಾರತದ ಪರ ಧ್ವನಿ ಎತ್ತುವ ಪಾಕಿಸ್ತಾನ ಮೂಲಕ ಜನಪ್ರಿಯ ಲೇಖಕ ತಾರೆಕ್ ಫತಹ್ ನಿಧನರಾಗಿದ್ದಾರೆ. 

ನವದೆಹಲಿ(ಏ.24): ಭಾರತದ ಪರ ಮಾತನಾಡುವ, ಭಾರತದ ಸನಾತನ ಧರ್ಮ, ಹಿಂದೂ ದೇಗಲು, ನಗರಗಳ ಮರುನಾಮಕರಣ ಸೇರಿದಂತೆ ಭಾರತೀಯತೆ ಕುರಿತು ಸದಾ ಧ್ವನಿ ಎತ್ತುವ ಪಾಕಿಸ್ತಾನ ಮೂಲದ ಖ್ಯಾತ ಲೇಖಕ ತಾರೆಕ್ ಫತಹ್ ನಿಧನರಾಗಿದ್ದಾರೆ. 73 ವರ್ಷದ ತಾರೆಕ್ ಫತಹ್ ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ತಾರೆಕ್ ಫತಹ್ ಮೂಲ ಪಾಕಿಸ್ತಾನ. ಆದರೆ ಕೆನಡಾದಲ್ಲಿ ನೆಲೆಸಿದ್ದ ತಾರೆಕ್ ಫತಹ್ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಇಷ್ಟೇ ಅಲ್ಲ ಪಾಕಿಸ್ತಾನದ ಭಯೋತ್ಪಾದಕತೆ, ಕುತಂತ್ರ ಬುದ್ದಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಇಸ್ಲಾಂ ಹಾಗೂ ಭಯೋತ್ಪಾದನೆ ಕುರಿತು ನಿರ್ಭೀತಿಯಿಂದ ಮಾತನಾಡುತ್ತಿದ್ದ ತಾರೆಕ್ ಫತೇಹ್ ಭಾರತದಲ್ಲೂ ಅತ್ಯಂತ ಜನಪ್ರಿಯರಾಗಿದ್ದರು.

ಪಂಜಾಬ್ ಸಿಂಹ್, ಹಿಂದೂಸ್ಥಾನದ ಪುತ್ರ, ಕೆನಡಾದ ಸಂಗಾತಿ, ಸತ್ಯವನ್ನು ನಿರ್ಭೀತಿಯಿಂದ ಹೇಳುವ, ನ್ಯಾಯಕ್ಕಾಗಿ ಹೋರಾಡುವ, ತುಳಿತಕ್ಕೊಳಗಾಗಿರುವ ಪರವಾಗಿ ನಿಲ್ಲುವ ಅಪರೂಪದ ವ್ಯಕ್ತಿತ್ವ ಹೊಂದಿರುವ ಖ್ಯಾತ ಲೇಖಕ ತಾರಕ್ ಫತಹ್ ನಿಧನರಾಗಿದ್ದಾರೆ ಎಂದು ಪುತ್ರಿ ನತಾಶ ಫತಹ ಟ್ವಿಟರ್ ಮೂಲಕ ಮಾಹಿತಿ ಬಹಿರಂಗಪಡಿಸಿದ್ದಾರೆ. 

Latest Videos

ದೇಶದ ಸ್ಥಿತಿ ಮೊದಲಿನಂತಿಲ್ಲ, ಎಲ್ಲದಕ್ಕೂ ಈಗ ಉತ್ತರ: ಚೀನಾ, ಪಾಕ್‌ಗೆ ಜೈಶಂಕರ್‌ ಎಚ್ಚರಿಕೆ

ತಾರಕ್ ಪತೇಹ್ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲ ಸೂಚಿಸಿದ್ದರು. ಭಾರತದ ಹಲವು ಖಾಸಗಿ ಸುದ್ದಿ ವಾಹನಿಗಳ ಸಂದರ್ಶನದಲ್ಲಿ ಫತೇಹ್ ಪಾಲ್ಗೊಂಡು ನಿರ್ಭಿತಿಯಿಂದ ಮಾತನಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ರೈಲು ನಿಲ್ದಾಣದ ಹೆಸರು, ನಗರಗಳ ಹೆಸರು ಮರುನಾಮಕರಣ ನಿರ್ಧಾರವನ್ನು ತಾರೆಕ್ ಫತಹ್ ಸಮರ್ಥಿಸಿಕೊಂಡಿದ್ದರು. ಭಾರತ, ಭಾರತವಾಗಿ ಉಳಿಯಬೇಕು ಎಂದರೆ ಇದರ ಅಗತ್ಯವಿದೆ. ಇದು ಪವಿತ್ರ ಹಿಂದೂ ದೇಶ ಎಂದು ತಾರಕ್ ಫತಹ್ ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿಯ ವಿದೇಶಾಂಗ ನೀತಿ, ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಜಾಗತಿಕವಾಗಿ ಮನ್ನಣೆಗಳಿಸುಂತೆ ಮಾಡಿದ ನಾಯಕ ಮೋದಿ ಎಂದಿದ್ದರು. ಭಾರತದ ವಿರೋಧಿ, ಕಾಶ್ಮೀರ ಭಯೋತ್ಪಾದನೆ ವಿರುದ್ಧ ಕಠು ಶಬ್ದಗಳಿಂದಲೇ ಮಾತನಾಡುತ್ತಿದ್ದ ತಾರೆಕ್ ಫತೇಹ್, ಪಾಕಿಸ್ತಾನ ಬಿಸು ತುಪ್ಪವಾಗಿದ್ದರು. 1949ರಲ್ಲಿ ಪಾಕಿಸ್ತಾನದಲ್ಲಿ ಹುಟ್ಟಿದ ತಾರೆಕ್ ಫತಹ್, 1980ರಲ್ಲಿ ಕೆನಡಾಗೆ ಸ್ಥಳಾಂತರಗೊಂಡರು. 

ಪಾಕಿಸ್ತಾನದ ಮಕ್ಕಳಿಗೆ ಭಾರತ ಪೌರತ್ವ ಸದ್ಯಕ್ಕಿಲ್ಲ: ಹೈಕೋರ್ಟ್‌

ಇಸ್ಲಾಮಿಕ್ ದೇಶ ಮಾಡುವ ಮೂಲಭೂತವಾದಿಗಳ ವಿರುದ್ಧ ಬರೆದಿರುವ ಚೇಸಿಂಗ್ ಮಿರಾಜ್ ಬಹುಬೇಡಿಕೆಯ ಹಾಗೂ ವಿವಾದಾತ್ಮಕ ಪುಸ್ತಕವಾಗಿದೆ. ಜ್ಯೂ ಈಸ್ ನಾಟ್ ಮೈ ಎನಿಮಿ ಸೇರಿದಂತೆ ಹಲವು ಪುಸ್ತಕ ಅತ್ಯಂತ ಜನಪ್ರಿಯವಾಗಿದೆ. ರಾಜಕೀಯ ವಿಶ್ಲೇಷಕ, ಪತ್ರಕರ್ತನ, ಟಿವಿ ನಿರೂಪಕ, ಲೇಖಕನಾಗಿಯೂ ತಾರೆಕ್ ಫತೇಹ್ ಜನಪ್ರಿಯರಾಗಿದ್ದಾರೆ.

click me!