ಪಾಕ್‌ನಲ್ಲಿ ಹಿಂದೂಗಳ ಸಂಖ್ಯೆ ಶೇ. 2ಕ್ಕೆ ಕುಸಿತ, ಹೇಗೆಲ್ಲಾ ಟಾರ್ಗೆಟ್ ಆಗ್ತಿದ್ದಾರೆ ಹೆಣ್ಮಕ್ಕಳು? ಕರಾಳ ಮುಖ ಬಿಚ್ಚಿಟ್ಟ Insight UK

Published : Oct 29, 2026, 09:36 PM IST
Pakistan Hindu population

ಸಾರಾಂಶ

ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಮತ್ತು ಬಲವಂತದ ಮತಾಂತರದ ಬಗ್ಗೆ ಇನ್‌ಸೈಟ್ ಯುಕೆ ಆಘಾತಕಾರಿ ವರದಿ ಬಿಡುಗಡೆ ಮಾಡಿದೆ. 1947ರಲ್ಲಿ ಶೇ.14ರಷ್ಟಿದ್ದ ಹಿಂದೂಗಳ ಜನಸಂಖ್ಯೆ ಈಗ ಶೇ.2ಕ್ಕಿಂತ ಕಡಿಮೆಯಾಗಿದ್ದು, ಪ್ರತಿ ವರ್ಷ ಸಾವಿರಾರು ಹೆಣ್ಣುಮಕ್ಕಳನ್ನು ಅಪಹರಿಸಲಾಗುತ್ತಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

ನವದೆಹಲಿ: ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ Insight UK ಆಘಾತಕಾರಿ ವರದಿ ಮಾಡಿದೆ. ಅಲ್ಲಿರುವ ಹಿಂದೂ ಹೆಣ್ಮಕ್ಕಳು ಹೇಗೆಲ್ಲ ಟಾರ್ಗೆಟ್ ಆಗುತ್ತಿದ್ದಾರೆ? ದೇಶ ವಿಭಜನೆ ಸಂದರ್ಭದಲ್ಲಿ ಪಾಕ್‌ನಲ್ಲಿ ಹಿಂದೂಗಳ ಸಂಖ್ಯೆ ಎಷ್ಟಿತ್ತು? ಈಗ ಅದು ಎಷ್ಟಕ್ಕೆ ಕುಸಿದಿದೆ ಎಂಬ ಶಾಕಿಂಗ್ ವಿಚಾರವನ್ನೂ Insight UK ಬಿಚ್ಚಿಟ್ಟಿದೆ.

ಪಾಕ್‌ನಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಆಗಲು ಕಾರಣ ಏನು?

ಇನ್‌ಸೈಟ್ ಯುಕೆ ವರದಿಯ ಪ್ರಕಾರ.. 1947 ರಲ್ಲಿ ದೇಶ ರಚನೆ ಆದಾಗಿನಿಂದ ಪಾಕಿಸ್ತಾನದಲ್ಲಿ ಆಸ್ತಿ ಮುಟ್ಟುಗೋಲು, ಬಲವಂತದ ಮತಾಂತರದಿಂದ ಹಿಡಿದು ಕೋಮು ಹಿಂಸಾಚಾರದವರೆಗೆ ಹಿಂದೂಗಳ ಮೇಲೆ ವ್ಯವಸ್ಥಿತ ಕಿರುಕುಳ ನಡೆಯುತ್ತಿದೆ.

ಆಧುನಿಕ ಪಾಕಿಸ್ತಾನದಲ್ಲಿ ವಿಭಜನೆಯ ಪೂರ್ವ ಹಿಂದೂ ಜನಸಂಖ್ಯೆಯು ಶೇಕಡಾ 14 ಕ್ಕಿಂತ ಹೆಚ್ಚಿತ್ತು. ಅಂದರೆ ಅದು 1941ರ ಜನಗಣತಿಯ ಪ್ರಕಾರ, ಈಗ ಅದು ಶೇಕಡಾ 2 ಕ್ಕಿಂತ ಕಡಿಮೆಯಾಗಿದೆ. ದೇಶ ರಚನೆ ಬಳಿಕ ಪಾಕಿಸ್ತಾನಿ ಹಿಂದೂಗಳು ತಾರತಮ್ಯ, ದೇವಾಲಯಗಳ ಮೇಲಿನ ದಾಳಿ ಮತ್ತು ಅವರ ಜೀವ ಮತ್ತು ಆಸ್ತಿಗೆ ಬೆದರಿಕೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ ಎಂದು ವರದಿ ಮಾಡಿದೆ.

'ಪಾಕಿಸ್ತಾನದಲ್ಲಿ ಹಿಂದೂಗಳ ಧಾರ್ಮಿಕ ಕಿರುಕುಳ' ಎಂಬ ಶೀರ್ಷಿಕೆಯ ವರದಿಯಲ್ಲಿ ವರದಿ ಮಾಡಿರುವ ಇನ್‌ಸೈಟ್ ಯುಕೆ.. ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡಲಾಗಿದೆ. ಅವರನ್ನು ಬಲವಂತವಾಗಿ ಮತಾಂತರಿಸಲಾಗುತ್ತಿದೆ. ಪ್ರತಿ ವರ್ಷ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಂದ 1,000 ಕ್ಕೂ ಹೆಚ್ಚು ಹುಡುಗಿಯರನ್ನು ಅಪಹರಿಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಡಿದೆ.

ಈ ವರದಿಯನ್ನ ಬ್ರಿಟಿಷ್ ಸರ್ವಪಕ್ಷ ಸಂಸದೀಯ ಗುಂಪಿನ (APPG)ನ ಮುಂದೆ ಹಿಂದೂ ವಕಾಲುತ್ತು ಗ್ರೂಪ್ ಮಂಡಿಸಿದೆ. ಪಾಕಿಸ್ತಾನದ ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಅವರ ಒಪ್ಪಿಗೆಯಿಲ್ಲದೆ ಮದುವೆಯಾಗಲಾಗುತ್ತಿದೆ ಎಂದು ಆರೋಪಿಸಿದೆ. ಐತಿಹಾಸಿಕ ಪುರಾವೆಗಳು ಮತ್ತು ಬದುಕುಳಿದವರ ಸಾಕ್ಷ್ಯಗಳನ್ನು ಉಲ್ಲೇಖಿಸಿ, ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಘನತೆಗೆ ಬೆದರಿಕೆಗಳ ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದೆ.

ಇನ್ಸೈಟ್ ಯುಕೆ ಬೇಡಿಕೆ ಏನು?

  • ಪಾಕ್‌ನಲ್ಲಿರುವ ಅಲ್ಪ ಸಂಖ್ಯಾತರಿಗೆ ರಕ್ಷಣೆ ನೀಡಬೇಕು
  • ದೇವಾಲಯಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು
  • ಪ್ರಕರಣಗಳ ವರಿತ ವಿಚಾರಣೆಯನ್ನು ಖಚಿತಪಡಿಸುವುದು
  • ಮಾನವ ಹಕ್ಕುಗಳ ಪರಿಸ್ಥಿತಿಗಳನ್ನು ಸುಧಾರಿಸುವುದು
  • ಪಾಕಿಸ್ತಾನಕ್ಕೆ ಬ್ರಿಟಿಷ್ ಸಹಾಯವನ್ನು ಜೋಡಿಸುವುದು
  • ಅಲ್ಪಸಂಖ್ಯಾತ ಹಕ್ಕುಗಳ ಗುಂಪುಗಳಿಗೆ ಪ್ರತ್ಯೇಕ ನಿಧಿ

ವರದಿಗಳ ಪ್ರಕಾರ.. ಇಸ್ಲಾಮಾಬಾದ್‌ನಲ್ಲಿ ಒಂದೇ ಒಂದು ಹಿಂದೂ ದೇವಾಲಯವಿಲ್ಲ. ಪಾಕಿಸ್ತಾನದ ರಾಜಧಾನಿಯಲ್ಲಿ ದೇವಾಲಯ ನಿರ್ಮಿಸುವ ಯೋಜನೆಗಳು ಸ್ಥಗಿತಗೊಂಡಿವೆ ಎಂದಿದೆ. 1947 ರ ಭಾರತದ ವಿಭಜನೆಯ ಸಮಯದಲ್ಲಿ ದೇಶವನ್ನು ವಿಭಜಿಸಿದಾಗಿನಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಜನಸಂಖ್ಯೆಯು ನಿರಂತರ ಕಿರುಕುಳ ಮತ್ತು ವ್ಯವಸ್ಥಿತ ತಾರತಮ್ಯಕ್ಕೆ ಒಳಗಾಗಿರುವುದರಿಂದ ಅವರ ಸಂಖ್ಯೆ ಕೇವಲ ಎರಡು ಪ್ರತಿಶತಕ್ಕೆ ಇಳಿದಿದೆ ಎಂದು ಹೊಸ ವರದಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸುಪ್ರೀಂ ಕೋರ್ಟ್‌ನಲ್ಲಿ ವಿರಾಟ್ ಕೊಹ್ಲಿ ಹೆಸರು ಪ್ರಸ್ತಾಪ; ದೆಹಲಿಯ ಈ ಸಮಸ್ಯೆಗೆ ಬಿಗ್ ರಿಲೀಫ್ ಕೊಡ್ತಾರಾ ರನ್ ಮಷಿನ್?
BJP ತವರಲ್ಲೇ ಸೋಲಿಸಿ ಸಿಎಂ ಕುರ್ಚಿ ಸ್ಕೆಚ್; ರೆಡ್‌ ಹ್ಯಾಂಡ್‌ ಆಗಿ ಸಿಕ್ರಾ ಶಿಂಧೆ? ಮುಳುಗುವ ದೋಣಿಯಲ್ಲಿ ಮಹಾಯುತಿ