ಲುಲೂ ಮಾಲ್‌ ಪಾಕಿಸ್ತಾನ ಧ್ವಜ ವಿವಾದ, ಕಠಿಣ ಕ್ರಮದ ಎಚ್ಚರಿಕೆ ನೀಡಿದ ಆಡಳಿತ ಮಂಡಳಿ!

By Suvarna News  |  First Published Oct 10, 2023, 8:57 PM IST

ಲುಲೂ ಮಾಲ್ ಇದೀಗ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿದೆ. ಆದರೆ ಇದೇ ಲುಲೂ ಮಾಲ್‌ನಲ್ಲಿ ಧ್ವಜ ವಿವಾದ ಹುಟ್ಟಿಕೊಂಡಿದೆ. ಭಾರತದ ತ್ರಿವರ್ಣ ಧ್ವಜಕ್ಕಿಂತ ದೊಡ್ಡದಾಗಿ ಪಾಕಿಸ್ತಾನ ಧ್ವಜ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಲೂಲು ಮಾಲ್ ಸ್ಪಷ್ಟನೆ ನೀಡಿದೆ.
 


ಕೊಚ್ಚಿ(ಅ.10) ಶಾಪಿಂಗ್ ಮಾಲ್ ಪೈಕಿ ಇತ್ತೀಚೆಗೆ ಲುಲೂ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ದೇಶದ ಹಲವು ನಗರಗಳಲ್ಲಿ ಲುಲೂ ಮಾಲ್ ಶಾಖೆಗಳು ವಿಸ್ತರಣೆಗೊಂಡಿದೆ. ಇದೀಗ ಕೇರಳದ ಕೊಚ್ಚಿಯಲ್ಲಿರುವ ಲುಲೂ ಮಾಲ್ ವಿವಾದಕ್ಕೆ ಗುರಿಯಾಗಿದೆ. ವಿಶ್ವಕಪ್ ಟೂರ್ನಿ ಪ್ರಯುಕ್ತ ಲುಲೂ ಮಾಲ್‌ನಲ್ಲಿ ಕ್ರಿಕೆಟ್ ದೇಶಗಳ ಧ್ವಜಗಳನ್ನು ಹಾಕಿದ್ದಾರೆ . ಆದರೆ ಭಾರತದ ತ್ರಿವರ್ಣ ಧ್ವಜಕ್ಕಿಂದ ದೊಡ್ಡದಾಗಿ ಪಾಕಿಸ್ತಾನ ಧ್ವಜ ಇರುವ ಫೋಟೋ ಒಂದು ವೈರಲ್ ಆಗಿದೆ. ಇಷ್ಟೇ ಅಲ್ಲ ಭಾರತ ಹಾಗೂ ಇತರ ದೇಶಗಳ ಧ್ವಜಕ್ಕಿಂತ ಮೇಲೆ ಪಾಕ್ ಧ್ವಜ ಹಾಕಿರುವ ಫೋಟೋ ಇದಾಗಿದೆ. ಭಾರತದಲ್ಲಿ ಪಾಕ್ ಧ್ವಜವನ್ನು ದೊದ್ದ ಗಾತ್ರದಲ್ಲಿ ಹಾಕಿದ್ದಾರೆ ಎಂದು ಸಾಮಾಜಿಕ ಮಾಧ್ಯದಲ್ಲಿ ಆಕ್ರೋಶ ಶುರುವಾಗಿದೆ. ಆದರೆ ಲುಲೂ ಮಾಲ್ ಈ ಕುರಿತು ಸ್ಪಷ್ಟನೆ ನೀಡಿದೆ. ಲೂಲ್ ಮಾಲ್‌‌ನಲ್ಲಿ ಎಲ್ಲಾ ಧ್ವಜಗಳು ಸಮನಾಗಿವೆ. ಕೆಲಭಾಗದಲ್ಲಿ ನಿಂತು ನೋಡಿದರೆ ಎಲ್ಲಾ ಧ್ವಜಗಳು ಸರಿಯಾಗಿ ಕಾಣಲಿದೆ. ಆದರೆ ಒಂದೊಂದು ಭಾಗದಲ್ಲಿ ಒಂದೊಂದು ಧ್ವಜಗಳು ದೊಡ್ಡ ಗಾತ್ರದಲ್ಲಿ ಕಾಣಿಸಲಿದೆ. ಹೀಗಾಗಿ ಲೂಲು ಮಾಲ್ ಯಾವುದೇ ರೀತಿ ಭಾರತದ ಧ್ವಜಕ್ಕೆ ಅಪಮಾನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ.

 ಲುಲೂ ಮಾಲ್ ಧ್ವಜ ನಿಯಮ ಉಲ್ಲಂಘಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭಗೊಳ್ಳುತ್ತಿದ್ದಂತೆ ವಿವಾದವೂ ಭುಗಿಲೆದ್ದಿದೆ.. ಭಾರತದ ಧ್ವಜವನ್ನು ಚಿಕ್ಕದಾಗಿ, ಕೆಳಮಟ್ಟದಲ್ಲಿ ಹಾಕಿ, ಪಾಕಿಸ್ತಾನ ಧ್ವಜವನ್ನು ವಿಜ್ರಂಭಿಸುವ ಅವಶ್ಯಕತೆ ಏನಿತ್ತು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಪ್ರಶ್ನಿಸಿದ್ದಾರೆ. ಎಲ್ಲಾ ಧ್ವಜಗಳು ಒಂದೇ ಗಾತ್ರದ್ದಾಗಿದೆ. ತಪ್ಪು ಮಾಹಿತಿಗಳನ್ನು ಹರಡಿದರೆ ಕ್ರಮ ಕೈಗೊಳ್ಳುವುದಾಗಿ ಲೂಲು ಮಾಲ್ ಎಚ್ಚರಿಸಿದೆ.

Tap to resize

Latest Videos

undefined

ಮಾಲ್‌ನಲ್ಲಿ ಭಾರತದ ತ್ರಿವರ್ಣಕ್ಕಿಂತ ಪಾಕಿಸ್ತಾನದ ದೊಡ್ಡ ಧ್ವಜ, ವೈರಲ್‌ ಚಿತ್ರಕ್ಕೆ ಲುಲು ಮಾಲ್‌ನಿಂದ ಸ್ಪಷ್ಟನೆ!

ಐಸಿಸಿ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವಹಿಸಿದೆ. ತಿರುವನಂತಪುರಂನಲ್ಲೂ ವಿಶ್ವಕಪ್ ಪಂದ್ಯ ಆಯೋಜಿಸಲಾಗಿದೆ. ಲೂಲು ಮಾಲ್‌ನಲ್ಲಿ ವಿಶ್ವಕಪ್ ಟೂರ್ನಿಗೆ ವಿಶೇಷ ರೀತಿಯಲ್ಲಿ ಸಜ್ಜಾಗಿದೆ. ಅಭಿಮಾನಿಗಳು, ಗ್ರಾಹಕರನ್ನು ಸೆಳೆಯಲು ಹಲವು ಆಫರ್‌ಗಳನ್ನು ಘೋಷಿಸಿದೆ. ಇದರ ಜೊತೆಗೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕ್ರಿಕೆಟ್ ರಾಷ್ಟ್ರಗಳ ಧ್ವಜಗಳನ್ನು ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋಗೆ ತಪ್ಪು ಮಾಹಿತಿ ಸೇರಿಸಿ ಹಂಚಿಕೊಳ್ಳಲಾಗುತ್ತಿದೆ. ಇದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗಿದೆ. ತಪ್ಪು ಮಾಹಿತಿಗಳನ್ನು ಹಂಚಿಕೊಂಡರೆ ಲೂಲು ಮಾಲ್ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಲೂಲು ಮಾಲ್ ಹೇಳಿದೆ.

It’s not , or , it’s in !!

This photo is taken at in , where flags of different countries are displayed to celebrate the .

Mr , Why is the PAKISTAN flag above and bigger than the INDIAN flag ? pic.twitter.com/fessJOEeJA

— Omkara (@OmkaraRoots)

 

ಕಾಂಗ್ರೆಸ್‌ ಗೆದ್ದ ಮೇಲೆ ರಾಜ್ಯದಲ್ಲಿ ಪಾಕ್‌ ಧ್ವಜಗಳ ಹಾರಾಟ: ಯತ್ನಾಳ್

 


It’s not Lahore, Peshawar or Islamabad, it’s in kerala !!

This photo is taken at Lulu Mall in Kochi, where flags of different countries are displayed to celebrate the World Cup. pic.twitter.com/fPyy4pDLkt

— Secular hunter (@Jay72179022)

 

click me!