
ಇಸ್ಲಾಮಾಬಾದ್ (ಮೇ.3) ಭಾರತದ ವೀಸಾ ಸ್ಥಗಿತ ನಿಯಮದ ಬಳಿಕ ಭಾರತ- ಪಾಕ್ ಗಡಿಯಲ್ಲಿ ಸಿಲುಕಿದ್ದ ತನ್ನ ನಾಗರಿಕರು ವಾಘಾ ಗಡಿ ಮೂಲಕ ತವರಿಗೆ ಮರಳಲು ಅವಕಾಶ ನೀಡುವುದಾಗಿ ಪಾಕಿಸ್ತಾನ ಘೋಷಿಸಿದೆ.
ವಿವಿಧ ರೀತಿಯ ವೀಸಾ ಪಡೆದವರು ಏ.30ರೊಳಗೆ ಪಾಕ್‌ಗೆ ಮರಳಬೇಕು ಎಂಬ ತನ್ನ ನಿಯಮವನ್ನು ಭಾರತ ಸಡಿಲಿಸಿದ ಬಳಿಕ 70ಕ್ಕೂ ಹೆಚ್ಚು ಪಾಕ್ ಪ್ರಜೆಗಳು ಗುರುವಾರ ಅಟ್ಟಾರಿ- ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ತೆರಳಲು ಆಗಮಿಸಿದ್ದರು. ಆದರೆ ಪಾಕಿಸ್ತಾನ ತನ್ನ ಕಡೆಯ ಗಡಿಬಾಗಿಲು ಮುಚ್ಚಿದ್ದ ಕಾರಣ ಅವರೆಲ್ಲಾ 24 ಗಂಟೆಗಳಿಂದ ಎಲ್ಲಿಯೂ ತೆರಳಲಾಗದೇ ಗಡಿಯಲ್ಲೇ ಕಾದು ಕುಳಿತಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ, ಗಡಿ ಬಾಗಿಲು ತೆರೆದು ಸ್ವದೇಶಿಯರನ್ನು ಕರೆಸಿಕೊಳ್ಳುವುದಾಗಿ ಹೇಳಿದೆ.
ಇದನ್ನೂ ಓದಿ: ತನ್ನ ಪ್ರಜೆಗಳಿಗೆ ಗಡಿ ಮುಚ್ಚಿದ ಪಾಕ್, ಭಾರತ ಹೊರಬಿದ್ದ ಪಾಕಿಗಳು ವಾಘ ಗಡಿಯಲ್ಲಿ ಅತಂತ್ರ
ಈ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರರು ಪ್ರತಿಕ್ರಿಯಿಸಿದ್ದು, ಅಟ್ಟಾರಿಯಲ್ಲಿ ಕೆಲವು ಪಾಕಿಸ್ತಾನಿ ಪ್ರಜೆಗಳು ಸಿಲುಕಿಕೊಂಡಿದ್ದಾರೆ ಎನ್ನುವ ವರದಿಗಳನ್ನು ಗಮನಿಸಿದ್ದೇವೆ. ಭಾರತೀಯ ಅಧಿಕಾರಿಗಳು ನಮ್ಮ ದೇಶದ ನಾಗರಿಕರು ಗಡಿದಾಟಲು ಅನುಮತಿಸಿದರೆ ಅವರನ್ನು ಸ್ವೀಕರಿಸಲು ನಾವು ಮುಕ್ತರಾಗಿದ್ದೇವೆ. ಭವಿಷ್ಯದಲ್ಲಿಯೂ ಮರಳಲು ಬಯಸುವ ಪಾಕಿಸ್ತಾನಿ ಪ್ರಜೆಗಳಿಗೆ ವಾಘಾ ಗಡಿ ತೆರೆದಿರುತ್ತದೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ