
ನವದೆಹಲಿ(ಮೇ.10) ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಚುನಾವಣೆ ಸಮಯದಲ್ಲಿ ಸಿಡಿಸಿದ ಬಾಂಬ್‌ಗಳು ಕಾಂಗ್ರೆಸ್ ಪಕ್ಷದ ಮೇಲೆ ಬಿದ್ದು ಭಾರಿ ಅನಾಹುತ ಸೃಷ್ಟಿಸಿದೆ. 2014ರಲ್ಲಿ ಚಾಯ್‌ವಾಲ ಪ್ರಧಾನಿಯಾಗಲು ಸಾಧ್ಯವೇ ಎಂದು ಹೀಯಾಳಿಸಿ ಕಾಂಗ್ರೆಸ್ ಮುಖಭಂಗ ಅನುಭವಿಸಿತ್ತು. ಇದೀಗ ಪಾಕಿಸ್ತಾನದ ಶಕ್ತಿ ಸಾಮರ್ಥ್ಯದ ಮುಂದೆ ಭಾರತ ಏನೂ ಅಲ್ಲ, ಅವರ ಬಳಿ ಅಣುಬಾಂಬ್ ಇದೆ. ಪಾಕಿಸ್ತಾನವನ್ನು ಗೌರವಿಸಿ, ಅವರ ಜೊತೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಮೋದಿ ಸರ್ಕಾರಕ್ಕೆ ಮಣಿಶಂಕರ್ ಅಯ್ಯರ್ ಸಲಹೆ ನೀಡಿದ್ದಾರೆ. ಆದರೆ ಮಣಿಶಂಕರ್ ಅಯ್ಯರ್ ಸಿಡಿಸಿದ ಈ ಬಾಂಬ್ ಇದೀಗ ಕಾಂಗ್ರೆಸ್ ಮೇಲೆ ಬಿದ್ದು ಮತ್ತಷ್ಟು ಡ್ಯಾಮೇಜ್ ಮಾಡಿದೆ.
ಮಿಲಿಟರಿ ಶಕ್ತಿ ಸಾಮರ್ಥ್ಯದಲ್ಲಿ ಭಾರತ ಅಗ್ರ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಭಾರತದ ಮಿಲಿಟರಿ ಕ್ಷೇತ್ರದ ವೆಚ್ಚ ಪಾಕಿಸ್ತಾನದ ಸಂಪೂರ್ಣ ಬಜೆಟ್ ಗಾತ್ರಕ್ಕಿಂತ ದೊಡ್ಡದು. ಆದರೂ ಮಣಿಶಂಕರ್ ಅಯ್ಯರ್‌ಗೆ ಪಾಕಿಸ್ತಾನ ಬಲಿಷ್ಠ ಅಣುಬಾಂಬ್ ರಾಷ್ಟ್ರದಂತೆ ಕಂಡಿದೆ. ಇಷ್ಟೇ ಅಲ್ಲ ಪಾಕಿಸ್ತಾನದ ಮುಂದೆ ಕೈಕಟ್ಟಿ ನಿಲ್ಲುವ ಯುಪಿಎ ಆಡಳಿತವನ್ನು ಮತ್ತೆ ತರವು ಸೂಚನೆ ನೀಡಿದೆ ಎಂದು ಬಿಜೆಪಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್‌ಗೆ ಹಾಥ್ ಪಾಕಿಸ್ತಾನ್ ಕೇ ಸಾಥ್( ಕಾಂಗ್ರೆಸ್ ಕೈ, ಪಾಕಿಸ್ತಾನ ಜೊತೆ) ಎಂದು ಬಿಜೆಪಿ ತಿರುಗೇಟು ನೀಡಿದೆ.
ಸ್ಯಾಮ್ ಪಿತ್ರೋಡಾ ಆಫ್ರಿಕನ್ ವಿವಾದದ ಬೆನ್ನಲ್ಲೇ ಅಧೀರ್ ನೀಗ್ರೋ ಶಾಕ್!
ಪಾಕಿಸ್ತಾನ ಸಾರ್ವಭೌಮ ರಾಷ್ಟ್ರ, ಇತರ ದೇಶಗಳಂತೆ ಪಾಕಿಸ್ತಾನ ಕೂಡ ಗೌರವಯುತವಾಗಿದೆ. ನೀವು ಭಾರತದ ಜೊತೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸದೆ ಗನ್ ಹಿಡಿದುಕೊಂಡು ಸಾಗಿದರೆ ಸಾಧ್ಯವಿಲ್ಲ. ಕಾರಣ ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ. ನಮ್ಮ ಮೇಲೆ ಅಣುಬಾಂಬ್ ಹಾಕಿಬಿಟ್ಟರೆ ಎಂದು ಮಣಿಶಂಕರ್ ಅಯ್ಯರ್ ಆತಂಕ ವ್ಯಕ್ತಪಡಿಸಿದ್ದಾರೆ.
ಲಾಹೋರ್‌ನಲ್ಲಿ ಬಾಂಬ್ ಸ್ಫೋಟಿಸಿದರೆ 8 ಸೆಕೆಂಡ್ , 8 ಕ್ಷಣಗಳಲ್ಲಿ ವಿಕಿರಣ ಅಮೃತಸರ ತಲುಪುತ್ತದೆ. ಹೀಗಾಗಿ ನಾವು ಪಾಕಿಸ್ತಾನವನ್ನು ಗೌರವಿಸಿದರೆ ಅವರು ಶಾಂತಿಯುತವಾಗಿ ಇರುತ್ತಾರೆ. ಆದರೆ ಪಾಕಿಸ್ತಾನವನ್ನು ಕೆಣಕಿದರೆ ಅವರು ದೆಹಲಿ ವಿರುದ್ಧ ಬಾಂಬ್ ಪ್ರಯೋಗಿಸುತ್ತಾರೆ ಎಂದು ಮಣಿಶಂಕರ್ ಅಯ್ಯರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಮಣಿಶಂಕರ್ ಅಯ್ಯರ್ ಹೇಳಿಕೆ ಇದೀಗ ಕಾಂಗ್ರೆಸ್‌ಗೆ ತೀವ್ರ ತಲೆನೋವಾಗಿದೆ. ಈಗಾಗಲೇ ಸ್ಯಾಮ್ ಪಿತ್ರೋಡ ಹೇಳಿಕೆಯಿಂದ ಕಾಂಗ್ರೆಸ್ ಕಂಗಾಲಾಗಿದೆ. ಇದರ ಬೆನ್ನಲ್ಲೇ ಅಯ್ಯರ್ ಹೇಳಿಕೆಯಿಂದ ಬಿಜೆಪಿ ಆರೋಪಗಳಿಗೆ ಮತ್ತಷ್ಟು ಸಾಕ್ಷ್ಯಗಳು ಲಭ್ಯವಾಗುತ್ತಿದೆ. ಕಾಂಗ್ರೆಸ್ ಯಾವತ್ತೂ ಪಾಕಿಸ್ತಾನ ಪರ ಕೆಲಸ ಮಾಡುತ್ತದೆ ಅನ್ನೋ ಬಿಜೆಪಿ ಆರೋಪ ಮತ್ತಷ್ಟು ಬಲಗೊಂಡಿದೆ. ಇದೇ ಹೇಳಿಕೆ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಕೈ ತಪ್ಪುತ್ತಿದೆ, 4 ದಿನದಲ್ಲಿ ಮೋದಿ ಹೊಸ ನಾಟಕ: ರಾಹುಲ್ ಗಾಂಧಿ
ಈ ಚುನಾವಣೆ ವೇಳೆ ಕಾಂಗ್ರೆಸ್ ಸಿದ್ದಾಂತಗಳು ಬಟಾಬಯಲಾಗಿದೆ. ಪಾಕಿಸ್ತಾನಕ್ಕೆ ಬೆಂಬಲ ನೀಡುವ ಕಾಂಗ್ರೆಸ್ ಸಿಯಾಚಿನ್ ಪ್ರದೇಶವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಮುಂದಾಗಿತ್ತು ಕಾಂಗ್ರೆಸ್. ಎಸ್‌ಡಿಪಿಐ, ಯಾಸಿನ್ ಮಲಿಕ್‌ಗೆ ಬೆಂಬಲ ನೀಡುತ್ತಾ ದೇಶದೊಳಗೆ ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ನೀಡಿತ್ತು. ಬಡವರ ಹಣವನ್ನು ಲೂಟಿ ಮಾಡುವುದು, ಭ್ರಷ್ಟಾಚಾರ ಕಾಂಗ್ರೆಸ್ ಧ್ಯೇಯವಾಗಿದೆ. ಜನಾಂಗೀಯ ನಿಂದನೆ, ವಿಭಜನೆ, ನಿರ್ಲಕ್ಷ್ಯ, ಮುಸ್ಲಿಮ್ ಒಲೈಕೆಯಿಂದ ಇತರ ಹಿಂದುಳಿದ , ಎಸ್‌ಟಿ, ಎಸ್‌ಸಿ ಸಮುದಾಯಗಳ ನಿರ್ಲಕ್ಷ್ಯ, ಚೀನಾ ಕಮ್ಯೂನಿಸ್ಟ್ ಪಾರ್ಟಿ ಜೊತೆ ಒಪ್ಪಂದ ಇವೆಲ್ಲಾ ಕಾಂಗ್ರೆಸ್ ಸಿದ್ದಾಂತಗಳನ್ನು ಬಯಲಿಗೆಳೆದಿದೆ ಎಂದು ಕೇಂದ್ರ ಸಚಿವ, ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ