ಹಿರಿಯ ಪತ್ರಕರ್ತ ಮತ್ತು ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ, ಸದ್ಯ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಲ್ಲಿ ಭಾಗವಹಿಸುವಂತೆ ಪತ್ರ ಬರೆದಿದ್ದಾರೆ.
ನವದೆಹಲಿ (ಮೇ.10): ಹಿರಿಯ ಪತ್ರಕರ್ತ ಮತ್ತು ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ, ಸದ್ಯ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಲ್ಲಿ ಭಾಗವಹಿಸುವಂತೆ ಪತ್ರ ಬರೆದಿದ್ದಾರೆ.
‘ದಿ ಹಿಂದೂ’ ಸುದ್ದಿ ಪತ್ರಿಕೆಯ ಮಾಜಿ ಸಂಪದಾದಕ ಎನ್. ರಾಮ್ ,ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಮದನ್ ಲೋಕೂರ್, ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಎ.ಪಿ.ಶಾ ಇಬ್ಬರೂ ನಾಯಕರಿಗೆ ಪಕ್ಷಾತೀತ ವೇದಿಕೆಯಲ್ಲಿ ಪರಸ್ಪರ ಮುಖಾಮುಖಿಯಾಗಿ ಚರ್ಚಿಸಲು ಪತ್ರ ಬರೆದಿದ್ದಾರೆ. ‘ಈ ರೀತಿಯ ಚರ್ಚೆಗಳು,ಒಂದು ದೊಡ್ಡ ನಿದರ್ಶನವಾಗಿ ಉಳಿಯಲಿದೆ. ಇದು ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಮಾತ್ರವಲ್ಲದೇ, ಪ್ರಜಾಪ್ರಭುತ್ವದ ಆರೋಗ್ಯಕರ ಮತ್ತು ರೋಮಾಂಚನಕಾರಿ ಚಿತ್ರಣಗಳನ್ನು ಪ್ರದರ್ಶಿಸುತ್ತದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.
ಸ್ಯಾಮ್ ಪಿತ್ರೋಡಾ ಆಫ್ರಿಕನ್ ವಿವಾದದ ಬೆನ್ನಲ್ಲೇ ಅಧೀರ್ ನೀಗ್ರೋ ಶಾಕ್!
ರಾಹುಲ್ ವಿರುದ್ಧ ಆಯೋಗಕ್ಕೆ ದೂರು: ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸಲಿದೆ ಎಂದು ಹೇಳಿಕೆ ನೀಡಿದ ರಾಹುಲ್ ಗಾಂಧಿ ವಿರುದ್ಧ ಆರ್‌ಪಿಐ ಪಕ್ಷದ ನಾಯಕ, ಕೇಂದ್ರ ಸಚಿವ ರಾಮ್‌ದಾಸ್ ಅಠಾವಳೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ರಾಹುಲ್ ಗಾಂಧಿ ಪದೇ ಪದೇ ಬಿಜೆಪಿ ಸಂವಿಧಾನ ಬದಲು ಮಾಡಲಿದೆ ಎಂದು ಆರೋಪಿಸುತ್ತಿದ್ದಾರೆ. ಈ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ್ದರೂ ಅವರು ತಮ್ಮ ಆರೋಪ ನಿಲ್ಲಿಸಿಲ್ಲ. ಹೀಗಾಗಿ ರಾಹುಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇಂಥ ಹೇಳಿಕೆ ನೀಡದಂತೆ ರಾಹುಲ್ ಗಾಂಧಿಗೆ ನಿಷೇಧ ಹೇರಬೇಕು ಎಂದು ತಮ್ಮ ದೂರಿನಲ್ಲಿ ಅಠಾವಳೆ ಮನವಿ ಮಾಡಿದ್ದಾರೆ.