ಕಾಬೂಲ್(ಆ.27): ಆಫ್ಘಾನಿಸ್ತಾನದಲ್ಲಿ ಉಗ್ರರು ಹೊರತು ಪಡಿಸಿದರೆ ಇನ್ಯಾರೂ ಇರಲು ಇಷ್ಟಪಡುತಿಲ್ಲ. ಹೇಗಾದರೂ ಮಾಡಿ ಇತರ ದೇಶಕ್ಕೆ ತೆರಳಲು ಹಪಹಪಿಸುತ್ತಿದ್ದಾರೆ. ತಾಲಿಬಾನ್ ಉಗ್ರರ ಅಟ್ಟಹಾಸದ ನಡುವೆ IS-K ಉಗ್ರರ ಬಾಂಬ್ ದಾಳಿಯಿಂದ ಆಫ್ಘಾನಿಸ್ತಾನದಲ್ಲಿ ಅಮಾಯಕರ ರಕ್ತ ನದಿಯಂತೆ ಹರಿಯುತ್ತಿದೆ. ತಾಲಿಬಾನ್ ಆಕ್ರಮಣಕ್ಕೆ ಯಶಸ್ಸು ಸಿಕ್ಕ ಬೆನ್ನಲ್ಲೇ ಇದೀಗ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರರ ಆತ್ಮವಿಶ್ವಾಸ ಹೆಚ್ಚಾಗಿದೆ. ತಾಲಿಬಾನ್ ಆಕ್ರಮಣದಂತೆ ಕಾಶ್ಮೀರ ಕಣಿವೆಯನ್ನು ಸಂಪೂರ್ಣ ಕೈವಶ ಮಾಡಲು ಇದೀಗ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಸಜ್ಜಾಗಿದೆ.
ಪಾಕ್ ಶನಿ ಸಂತಾನ ಭಾರತಕ್ಕೂ ಬರುತ್ತಾ? ಮಕ್ಕಳ ಮೇಲೆ ಕ್ರೌರ್ಯ!ಪಾಕಿಸ್ತಾನ ಬೆಂಬಲಿತ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲೌನಾ ಮಸೂದ್ ಅಜರ್ ಕಾಬೂಲ್‌ನಲ್ಲಿ ತಾಲಿಬಾನ್ ನಾಯಕರನ್ನು ಭೇಟಿಯಾಗಿದ್ದಾನೆ. ಕಾಶ್ಮೀರ ಹೋರಾಟಕ್ಕೆ ತಾಲಿಬಾನ್ ನೆರವು ನೀಡಬೇಕೆಂದು ಈ ಭೇಟಿಯಲ್ಲಿ ಮನವಿ ಮಾಡಿದ್ದಾನೆ.
undefined
ಭೇಟಿಯಲ್ಲಿ ಮೊದಲು ತಾಲಿಬಾನ್ ನಾಯಕರಿಗೆ ಶುಭಾಶಯ ತಿಳಿಸಿದ್ದಾನೆ. ಅಮೆರಿಕ ಬೆಂಬಲಿತ ಆಫ್ಘಾನಿಸ್ತಾನ ಸರ್ಕಾರ ಕಿತ್ತೊಗೆಡ ತಾಲಿಬಾನ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಸೂದ್ ಅಜರ್, ಇದೀಗ ಇದೇ ರೀತಿಯ ಹೋರಾಟ ಕಾಶ್ಮೀರದಲ್ಲೂ ಮಾಡಬೇಕಿದೆ. ಇದಕ್ಕೆ ತಾಲಿಬಾನ್ ನೆರವು ಅಗತ್ಯವಿದೆ ಎಂದು ಅಜರ್ ಹೇಳಿದ್ದಾನೆ.
ವೆಲ್‌ಕಂ ಟು ರಿಪಬ್ಲಿಕ್ ಆಫ್ ತಾಲಿಬಾಂಬ್! ಇದು ಬೆಚ್ಚಿಬೀಳಿಸುವ ಕೃತ್ಯ
ತಾಲಿಬಾನ್ ಹಾಗೂ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಉದ್ದೇಶ ಒಂದೇ ಆಗಿದೆ. ಎರಡೂ ಸಂಘಟನೆಗಳು ಶರಿಯಾ, ಇಸ್ಲಾಮಿಕ್ ಕಾನೂನು ಪಾಲಿಸುತ್ತದೆ. 1999ರಲ್ಲಿ ಪಾಕಿಸ್ತಾನ ನೆರವಿನಿಂದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಸ್ಥಾಪಿಸಿದ ಮಸೂದ್ ಅಜರ್, ಜಮ್ಮು ಕಾಶ್ಮೀರದಲ್ಲಿ ವಿದ್ವಂಸಕ ಕೃತ್ಯಗಳನ್ನ ಎಸಗುತ್ತಿದ್ದಾನೆ.
ಮಹಿಳೆ ಹೊರಬಂದರೆ ಸುರಕ್ಷಿತಳಲ್ಲ, ಸತ್ಯ ಒಪ್ಪಿಕೊಂಡ ತಾಲಿಬಾನ್‌ಗಳಿಂದ ವರ್ಕ್ ಫ್ರಮ್ ಹೋಮ್‌ಗೆ ಸೂಚನೆ!
ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಹಲವು ಬದಲಾವಣೆಗಳಾಗಿವೆ. ಹೀಗಾಗಿ ಜೈಶ್ ಇ ಮೊಹಮ್ಮದ್ ಸಂಘಟನೆ ಸಕ್ರಿಯವಾಗಲು ಸಾಧ್ಯವಾಗುತ್ತಿಲ್ಲ. ಇದೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಟ್ಟಿಯಾಗಿ ನೆಲೆಯೂರಿರುವ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ, ಭಾರತದ ಕೈವಶವಿರುವ ಕಾಶ್ಮೀರ ವಶಪಡಿಸಿಕೊಳ್ಳಲು ತಾಲಿಬಾನ್ ಜೊತೆ ಪ್ಲಾನ್ ಮಾಡುತ್ತಿದೆ.
ಭಾರತದ ಜೈಲಿನಲ್ಲಿ ಬಂಧಿಯಾಗಿದ್ದ ಮೌಲಾನಾ ಮಸೂದ್ ಅಜರ್ ಬಿಡುಗಡೆಗೆ ಪಾಕಿಸ್ತಾನ ಉಗ್ರರು ಕಠ್ಮಂಡು ಲಕ್ನೌ ವಿಮಾನವನ್ನು ಹೈಜಾಕ್ ಮಾಡಿ ಕಂದಹಾರ್‌ನಲ್ಲಿ ಇಳಿಸಲಾಗಿತ್ತು. ಪ್ರಯಾಣಿಕರ ಬಿಡುಗಡೆಯಾಗಿ ಭಾರತ ಮಸೂದ್ ಅಜರ್ ಬಿಡುಗಡೆ ಮಾಡಲಾಗಿತ್ತು. ಇದೀಗ ಭಾರತದ ವಿರುದ್ಧ ದೊಡ್ಡ ದಾಳಿಗೆ ಸಜ್ಜಾಗಿದ್ದಾನೆ.