
ಇಸ್ಲಾಮಾಬಾದ್ (ನ. 11): ಕಾಶ್ಮೀರ ವಿಷಯ ಸಂಬಂಧ ಭಾರತದ ವಿರುದ್ಧ ಸದಾ ವಿಷಕಾರುತ್ತಲೇ ಇರುವ ಪಾಕಿಸ್ತಾನ ಮತ್ತೊಮ್ಮೆ ವಿಕೃತಿ ಮೆರೆದಿದೆ. ಬಾಲಾಕೋಟ್ ದಾಳಿ ವೇಳೆ ವಿಮಾನ ಪತನಗೊಂಡ ಬಳಿಕ ಪಾಕ್ ಸೈನಿಕರ ವಶದಲ್ಲಿದ್ದ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್‌ರ ಪ್ರತಿಕೃತಿಯನ್ನು ಪಾಕಿಸ್ತಾನ ರಚಿಸಿ ಕರಾಚಿಯಲ್ಲಿನ ಯುದ್ಧ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಟ್ಟಿದೆ. ಗಾಜಿನ ಬಾಕ್ಸ್‌ನಲ್ಲಿ ಅಭಿನಂದನ್ ಪ್ರತಿಕೃತಿ ನಿಲ್ಲಿಸಲಾಗಿದೆ.
ಅವರ ಹಿಂಬದಿಯಲ್ಲಿ ಪಾಕ್ ಸೈನಿಕನೊಬ್ಬ ನಿಂತಿದ್ದರೆ, ಅಭಿನಂದನ್ ಪಕ್ಕದಲ್ಲಿ ಟೀ ಗ್ಲಾಸ್ ಇಡಲಾಗಿದೆ. ಜೊತೆಗೆ ಅಭಿನಂದನ್ ಅವರ ಹಿಂದೆ, ಸೆರೆ ಸಿಕ್ಕಾಗ ಪಾಕ್ ವಶಪಡಿಸಿಕೊಂ ಡಿದ್ದ ವರ್ತಮಾನ್ ಅವರ ಸಮವಸ್ತ್ರವನ್ನು ನೇತು ಹಾಕಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ