
ಚೆನ್ನೈ (ನ.11) : ಚುನಾವಣಾ ಆಯೋಗಕ್ಕೆ ಹೊಸರೂಪು ತಂದುಕೊಟ್ಟಿದ್ದ ಮಾಜಿ ಆಯೋಗದ ಆಯುಕ್ತ ಟಿ.ಎನ್.ಶೇಷನ್ ಮತ್ತು ಅವರ ಪತ್ನಿ ಜಯಲಕ್ಷ್ಮೀ ಅವರು ಜೀವನದ ಕೊನೆಯ ಘಟ್ಟದಲ್ಲಿ ಚೆನ್ನೈನ ಗುರುಕುಲಂ ವೃದ್ಧಾಶ್ರಮ ದಲ್ಲಿ ವಾಸವಾಗಿದ್ದರು ಎಂಬುದು ಅಚ್ಚರಿಯ ಸಂಗತಿ.
ಮಕ್ಕಳನ್ನು ಹೊಂದಿರದಿದ್ದ ಕಾರಣ ಶೇಷನ್ ದಂಪತಿ ತಮ್ಮ ಮನೆಯನ್ನು ತೊರೆದು ವೃದ್ಧಾಶ್ರಮದಲ್ಲಿ ನೆಲೆಸಲು ಇಚ್ಛಿಸಿದ್ದರು. ತಾವು ದುಡಿದ ಹಣದಲ್ಲಿ ವೃದ್ಧಾಶ್ರಮದಲ್ಲಿದ್ದ ಇತರರಿಗೂ ಸಹಾಯ ಮಾಡುತ್ತಿದ್ದರು.
ವೈದ್ಯಕೀಯ, ಇತರೆ ವೆಚ್ಚಗಳನ್ನು ಅವರೇ ನಿರ್ವಹಿಸುತ್ತಿದ್ದರು. ಪುಟ್ಟಪರ್ತಿ ಸಾಯಿಬಾಬಾ ಅವರ ಆರಾಧಕರಾಗಿದ್ದ ಶೇಷನ್ ಅವರು, ಸಾಯಿಬಾಬಾ ಅವರ ನಿಧನ ಬಳಿಕ ಆಘಾತಕ್ಕೊಳಗಾಗಿದ್ದರು. ಇದರಿಂದ ಶೇಷನ್ ಅವರಿಗೂ ಅನಾರೋಗ್ಯ ಕಾಡಲಾರಂಭಿಸಿತ್ತು.
ಚುನಾವಣಾ ಆಯೋಗಕ್ಕೆ ಖಡಕ್ ಖದರು ತಂದಿದ್ದ ಟಿ.ಎನ್.ಶೇಷನ್ ನಿಧನ
ಇದರಿಂದ ವೃದ್ಧಾಶ್ರಮಕ್ಕೆ ತೆರಳಿದ್ದರು. ಮೂರು ವರ್ಷ ವೃದ್ಧಾಶ್ರಮದಲ್ಲಿದ್ದರು. ನಂತರ ಅವರು ಮರಳಿ ತಮ್ಮ ಸ್ವಗೃಹಕ್ಕೆ ಬಂದಿದ್ದರು. ಕೆಲ ದಿನಗಳ ಬಳಿಕ ಮತ್ತೆ ವೃದ್ಧಾಶ್ರಮಕ್ಕೆ ತಮ್ಮ ಹೆಂಡತಿಯೊಂದಿಗೆ ತೆರಳಿ ಅಲ್ಲಿಯೇ ವಾಸವಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ