ಪಾಕಿಸ್ತಾನದಲ್ಲಿ ಆರಂಭವಾಗಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಉಗ್ರ ದಾಳಿ ಸಾಧ್ಯತೆ, ಈ ಎರಡು ದೇಶಗಳ ಜನರೇ ಟಾರ್ಗೆಟ್!

Published : Feb 25, 2025, 06:48 AM ISTUpdated : Feb 25, 2025, 09:12 AM IST
ಪಾಕಿಸ್ತಾನದಲ್ಲಿ ಆರಂಭವಾಗಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಉಗ್ರ ದಾಳಿ ಸಾಧ್ಯತೆ, ಈ ಎರಡು ದೇಶಗಳ ಜನರೇ ಟಾರ್ಗೆಟ್!

ಸಾರಾಂಶ

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಗೆ ಉಗ್ರರ ಕರಿನೆರಳು ಬಿದ್ದಿದ್ದು, ವಿದೇಶಿಗರನ್ನು ಅಪಹರಿಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆ ಎಚ್ಚರಿಸಿದೆ. ಐಸಿಸ್ ಉಗ್ರರ ಮಿತ್ರ ಸಂಘಟನೆ ಐಎಸ್‌ಕೆಪಿ ಉಗ್ರರು ಚೀನಾ ಮತ್ತು ಅರಬ್ ರಾಷ್ಟ್ರದವರನ್ನು ಗುರಿಯಾಗಿಸಿಕೊಂಡಿದ್ದಾರೆ.

ನವದೆಹಲಿ/ಇಸ್ಲಾಮಾಬಾದ್‌: ಭದ್ರತಾ ಕಳವಳಗಳ ನಡುವೆಯೇ ಪಾಕಿಸ್ತಾನದಲ್ಲಿ ಆರಂಭವಾಗಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ ಮೇಲೆ ಇದೀಗ ಉಗ್ರರ ಕರಿನೆರಳು ಬಿದ್ದಿದೆ. ಚಾಂಪಿಯನ್ಸ್‌ ಟ್ರೋಫಿಗೆ ಆಗಮಿಸುವ ವಿದೇಶಿಗರನ್ನು ಐಸಿಸ್‌ ಉಗ್ರರ ಮಿತ್ರ ಸಂಘಟನೆ ಆಗಿರುವ ಇಸ್ಲಾಮಿಕ್‌ ಸ್ಟೇಟ್‌ ಖೊರಾಸಾನ್‌ ಪ್ರಾವಿನ್ಸ್‌ (ಐಎಸ್‌ಕೆಪಿ) ಉಗ್ರರು ಹಣಕ್ಕಾಗಿ ಅಪಹರಿಸುವ ಸಾಧ್ಯತೆ ಇದೆ ಎಂದು ಇದೀಗ ಪಾಕಿಸ್ತಾನ ಗುಪ್ತಚರ ಸಂಸ್ಥೆಯೇ ಎಚ್ಚರಿಕೆ ನೀಡಿದೆ.

ಉಗ್ರರು ವಿಶೇಷವಾಗಿ ಚೀನಾ ಮತ್ತು ಅರಬ್‌ ರಾಷ್ಟ್ರದವರನ್ನೇ ಗುರಿಯಾಗಿರಿಸಿಕೊಂಡಿದ್ದಾರೆ. ಈ ದೇಶಗಳ ನಾಗರಿಕರು ಹೆಚ್ಚಾಗಿ ಭೇಟಿ ನೀಡುವ ಬಂದರುಗಳು, ವಿಮಾನ ನಿಲ್ದಾಣ, ಕಚೇರಿಗಳು ಮತ್ತು ವಸತಿ ಪ್ರದೇಶಗಳ ಮೇಲೆ ಹೆಚ್ಚಿನ ಕಣ್ಣಿಟ್ಟಿದ್ದಾರೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಮ್ಯಾಚ್ ಸೋತರೂ ಚಿಂತೆ ಇಲ್ಲ, ಕೊಹ್ಲಿ ಸೆಂಚುರಿ ಸಿಡಿಸಲು ಬಿಡಬಾರದಿತ್ತು, ಪಾಕಿಸ್ತಾನಿ ಫ್ಯಾನ್ಸ್ ರಿಯಾಕ್ಷನ್ ವೈರಲ್!

ಗುಪ್ತಚರ ಮೂಲಗಳ ಪ್ರಕಾರ, ಐಎಸ್‌ಕೆಪಿ ಉಗ್ರರು ನಗರದ ಹೊರಭಾಗದ ಸುರಕ್ಷಿತ ಪ್ರದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಕ್ಯಾಮೆರಾ ಕಣ್ಗಾವಲು ರಹಿತ ಪ್ರದೇಶ ಹಾಗೂ ರಿಕ್ಷಾ ಮತ್ತು ಬೈಕ್‌ಗಳು ಓಡಾಟವಿರುವ ಪ್ರದೇಶಗಳಲ್ಲಿ ಮನೆ ಬಾಡಿಗೆ ಹಿಡಿಯಲು ಮುಂದಾಗಿದ್ದಾರೆ. ಹೀಗಾಗಿ ಕ್ರಿಕೆಟಿಗರು ಇರುವ ಸ್ಥಳ ಹಾಗೂ ಸ್ಟೇಡಿಯಂಗಳ ಸುತ್ತ ಭದ್ರತೆ ಹೆಚ್ಚಿಸಲಾಗಿದೆ.

ಈ ನಡುವೆ ಅಫ್ಘಾನಿಸ್ತಾನ ಗುಪ್ತಚರ ಸಂಸ್ಥೆ (ಜಿಡಿಐ) ಕೂಡ ಪ್ರಮುಖ ಸ್ಥಳಗಳ ಮೇಲೆ ಐಎಸ್‌ಕೆಪಿ ದಾಳಿ ಕುರಿತು ಎಚ್ಚರಿಸಿದೆ.

ಹಿಂದೆಯೂ ಆಗಿತ್ತು:

ಪಾಕಿಸ್ತಾನದಲ್ಲಿ ಮಹತ್ವದ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಿಗೆ ಹಲವು ವರ್ಷಗಳಿಂದ ಭದ್ರತಾ ಆತಂಕ ಇದ್ದೇ ಇದೆ. 2024ರಲ್ಲಿ ಶಾಂಗ್ಲಾದಲ್ಲಿ ಚೀನಾದ ಎಂಜಿನಿಯರ್‌ಗಳು ಹಾಗೂ 2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾದ ಕ್ರಿಕೆಟ್‌ ತಂಡದ ಮೇಲಿನ ದಾಳಿಯು ದೇಶದ ಭದ್ರತಾ ವ್ಯವಸ್ಥೆ ಕುರಿತು ತೀವ್ರ ಆತಂಕ ಮೂಡಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: Gold Silver Price Today - ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?