ಮುಸ್ಲಿಮರಿಗೆ ಕುಂಭ ಹೊಣೆ: ಅಖಿಲೇಶ್‌ಗೆ ಯೋಗಿ ಚಾಟಿ, ಕುಂಭಮೇಳ ಟೀಕಿಸುವವರನ್ನ ಹಂದಿ, ಹದ್ದುಗಳಿಗೆ ಹೋಲಿಸಿದ ಸಿಎಂ!

Published : Feb 25, 2025, 05:33 AM ISTUpdated : Feb 25, 2025, 07:40 AM IST
ಮುಸ್ಲಿಮರಿಗೆ ಕುಂಭ ಹೊಣೆ: ಅಖಿಲೇಶ್‌ಗೆ ಯೋಗಿ ಚಾಟಿ, ಕುಂಭಮೇಳ ಟೀಕಿಸುವವರನ್ನ ಹಂದಿ, ಹದ್ದುಗಳಿಗೆ ಹೋಲಿಸಿದ ಸಿಎಂ!

ಸಾರಾಂಶ

ಸಿಎಂ ಯೋಗಿ ಆದಿತ್ಯನಾಥ್, ಅಖಿಲೇಶ್ ಯಾದವ್ ಆಡಳಿತದಲ್ಲಿ ಕುಂಭಮೇಳದ ಸಿದ್ಧತೆ ನಿರ್ಲಕ್ಷ್ಯವಾಗಿತ್ತು ಎಂದು ಟೀಕಿಸಿದ್ದಾರೆ. ಸನಾತನ ಧರ್ಮಕ್ಕೆ ಸೇರದ ಸಚಿವರಿಗೆ ಉಸ್ತುವಾರಿ ನೀಡಿದ್ದರಿಂದ ಭ್ರಷ್ಟಾಚಾರ ಮತ್ತು ಮಾಲಿನ್ಯ ಹೆಚ್ಚಾಯಿತು ಎಂದು ಆರೋಪಿಸಿದ್ದಾರೆ.

ಲಖನೌ (ಫೆ.25): ‘2013ರಲ್ಲಿ ಅಖಿಲೇಶ್‌ ಯಾದವ್‌ ಸಿಎಂ ಆಗಿದ್ದಾಗ ಕುಂಭಮೇಳದ ಸಿದ್ಧತೆಗೆ ಸಮಯವನ್ನೇ ಮೀಸಲಿಡಲಿಲ್ಲ. ಇದರ ಬದಲು ಉಸ್ತುವಾರಿಯನ್ನು ‘ಸನಾತನೇತರ’ ಸಚಿವ ಮೊಹಮ್ಮದ್‌ ಅಜಂ ಖಾನ್‌ ಅವರಿಗೆ ನೀಡಿದ್ದರು’ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕಿಡಿ ಕಾರಿದ್ದಾರೆ.

ವಿಧಾನಸಭೆಯಲ್ಲಿ ವಿಪಕ್ಷಗಳನ್ನು ಉದ್ದೇಶಿಸಿ ಮಾತನಾಡಿದ ಯೋಗಿ, ‘ನಾವು ನಿಮ್ಮ ರೀತಿ ನಂಬಿಕೆಗಳ ಜೊತೆಗೆ ಆಟವಾಡಲಿಲ್ಲ. ನಿಮ್ಮ ಸಮಯದಲ್ಲಿ ಸಿಎಂ ಅವರು ಕಾರ್ಯಕ್ರಮದ ಬಗ್ಗೆ ಪರಿಶೀಲಿಸುವುದಕ್ಕೆ ಸಮಯವಿರದೇ ಸನಾತನ ಧರ್ಮಕ್ಕೆ ಸೇರಿರದ ವ್ಯಕ್ತಿಗೆ ಕುಂಭಮೇಳದ ಜವಾಬ್ದಾರಿಯನ್ನು ನೀಡಿದ್ದರು. 2013ರಲ್ಲಿ ಕುಂಭಕ್ಕೆ ಹೋದವರು ಭ್ರಷ್ಟಾಚಾರ, ಮಾಲಿನ್ಯ ಕಂಡಿದ್ದು ಇದೇ ಕಾರಣಕ್ಕೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಯೋಗ್ಯವಾದ ನೀರಿರಲಿಲ್ಲ. ಸ್ನಾನ ಮಾಡಲು ನಿರಾಕರಿಸಿದ ಮಾರಿಷನ್ ಪ್ರಧಾನಿಯೇ ಇದಕ್ಕೆ ಉದಾಹರಣೆ’ ಎಂದು ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ: ಮಹಾಕುಂಭ ಮೇಳ ಟೀಕಿಸುವುದು ಗುಲಾಮಗಿರಿಯ ಮನಸ್ಥಿತಿ; ಖರ್ಗೆ, ದೀದಿ, ಲಾಲುಗೆ ಪರೋಕ್ಷವಾಗಿ ಮೋದಿ ತಿರುಗೇಟು!

ಹದ್ದು, ಹಂದಿಗೆ ಹೋಲಿಕೆ:‘ರಣಹದ್ದುಗಳು ಮೃತ ದೇಹಗಳನ್ನು ಪಡೆದವು. ಹಂದಿಗಳು ಕೊಳಕನ್ನು ಪಡೆದವು... ಆದರೆ ಸೂಕ್ಷ್ಮ ಜನರು ಸಂಬಂಧಗಳ ಸುಂದರ ಚಿತ್ರಣವನ್ನು ಪಡೆದರು, ವ್ಯಾಪಾರಿಗಳು ವ್ಯಾಪಾರವನ್ನು ಪಡೆದರು, ಭಕ್ತರು ಸ್ವಚ್ಛವಾದ ವ್ಯವಸ್ಥೆಗಳನ್ನು ಪಡೆದರು’ ಎಂದು ಟೀಕಾಕಾರರ ಹೆಸರೆತ್ತದೇ ಯೋಗಿ ಕುಟುಕಿದರು. 

ಇದನ್ನೂ ಓದಿ: ಇದು ಮಹಾಕುಂಭ ಅಲ್ಲ, ಮೃತ್ಯುಕುಂಭ..! ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ, ಬಿಜೆಪಿ ಆಕ್ರೋಶ

ದಯವಿಟ್ಟು ಕುಂಭಕ್ಕೆ ಬರೋದು ನಿಲ್ಲಿಸಿ: ಪ್ರಯಾಗ್‌ ನಿವಾಸಿ ಮನವಿ

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯದ ಹಂತ ತಲುಪಿದ್ದರೂ ಜನಸಂದಣಿ ಮಿತಿ ಮೀರುತ್ತಿದೆ ಎಂದಿರುವ ಸ್ಥಳೀಯರೊಬ್ಬರು ನಗರಕ್ಕೆ ಬರುವುದನ್ನು ನಿಲ್ಲಿಸಿ ಎಂದು ದೇಶದ ಜನತೆಗೆ ಮನವಿ ಮಾಡಿದ್ದಾರೆ.ರೆಡ್ಡಿಟ್‌ ಜಾಲತಾಣದಲ್ಲಿ ಮನವಿ ಮಾಡಿರುವ ಅವರು, ‘ಪ್ರಯಾಗ್‌ರಾಜ್ ಮುರಿಯುವ ಹಂತ ತಲುಪಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸ್ಥಳೀಯರು ತಮ್ಮ ದೈನಂದಿನ ಜೀವನವನ್ನು ನಡೆಸುವುದು ಕಷ್ಟಕರವಾಗಿದೆ. ಕುಂಭಮೇಳದ ಆರಂಭದಲ್ಲಿದ್ದ ರೋಮಾಂಚನವು ಈಗ ಆಯಾಸವಾಗಿ ಬದಲಾಗಿದೆ. ದಯವಿಟ್ಟು ಕುಂಭಮೇಳಕ್ಕೆ ಬರುವುದನ್ನು ನಿಲ್ಲಿಸಿ’ ಎಂದು ಬರೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..